ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಟ್ರೈಬಲ್ ಸ್ಕೂಲ್‌ನಲ್ಲಿ ಬೋಧನೆ!

By Suvarna News  |  First Published May 19, 2021, 4:10 PM IST

ಶಾಲಾ ಕಲಿಕೆ ಮತ್ತು ಬೋಧನೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಬೋಧಿಸುವ ಮಾಧ್ಯಮಗಳು ಸಾಕಷ್ಟು ಬದಲಾಗಿವೆ. ಈಗೀಗ ಪ್ರತಿಯೊಂದು ಶಾಲೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸಲಾಗುತ್ತಿದೆ. ಸರ್ಕಾರದ ಅಧೀನದ ಬುಡಕಟ್ಟು ಶಾಲೆಗಳಲ್ಲಿ ಶಿಕ್ಷಕರು ಕೃತಕ ಬುದ್ಧಿಮತ್ತೆ(ಎಐ) ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸುತ್ತಿದ್ದಾರೆ ಮತ್ತು ಇದು ಫಲ ಕೂಡಲಾರಂಭಿಸಿದೆ.


ಆದಿವಾಸಿ ಹಾಗೂ ಬುಡಕಟ್ಟು ಶಾಲೆಗಳ ಮಕ್ಕಳು ಕೂಡ ಕಾಲಕ್ಕೆ ತಕ್ಕಂತೆ ಡಿಜಿಟಲೈಸ್ ಆಗೋ ಅವಕಾಶ ಒದಗಿ ಬಂದಿದೆ. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ಮನೆಗಳಲ್ಲಿದ್ದರೂ ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜಾನಕ್ಕೆ ಹೊಂದಿಕೊಳ್ಳುವಂತಹ ಪರಿಸರವನ್ನ ಕೇಂದ್ರ ಸರ್ಕಾರವೇ ರೂಪಿಸಿ ಕೊಡಲು ಮುಂದಾಗಿದೆ.

ಸರ್ಕಾರಿ ನಡೆಸುವ ಬುಡಕಟ್ಟು ಶಾಲೆಗಳಲ್ಲಿನ ಶಿಕ್ಷಕರು ಈಗ ಕೃತಕ ಬುದ್ಧಿಮತ್ತೆ ಸೇರಿದಂತೆ ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಕಲಿಸಲಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಸಾಫ್ಟ್ವೇರ್ ದೈತ್ಯ ಕಂಪನಿ ಮೈಕ್ರೋಸಾಫ್ಟ್ ನಡುವೆ ಒಪ್ಪಂದವಾಗಿದೆ.‘ಎಂಪವರಿಂಗ್ ಯೂತ್ ಫಾರ್ ಸಕ್ಸೆಸ್’ಎಂಬ ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

Tap to resize

Latest Videos

undefined

ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ

ಆ ಒಪ್ಪಂದದ ಪ್ರಕಾರ, ಇನ್ಮುಂದೆ ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆಯ ಪಠ್ಯಕ್ರಮವು ಬುಡಕಟ್ಟು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಲಭ್ಯವಾಗಲಿದೆ. ಕೇಂದ್ರ ಸಚಿವಾಲಯದ ಅಡಿಯಲ್ಲಿ ಬರುವ ದೇಶದ ಎಲ್ಲಾ ಏಕಲವ್ಯ ಮಾದರಿಯ ವಸತಿ ಶಾಲೆಗಳು ಹಾಗೂ ಆಶ್ರಮ ಶಾಲೆಗಳಲ್ಲಿ ಕೌಶಲ್ಯ ಶಿಕ್ಷಣ ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡುತ್ತದೆ.

ಮೈಕ್ರೋಸಾಫ್ಟ್ ಕಂಪನಿ, ಕಾರ್ಯಕ್ರಮದ ಮೊದಲ ಹಂತದ ಅಡಿಯಲ್ಲಿ 250 ಏಕಲವ್ಯಾ ಮಾದರಿ ವಸತಿ ಶಾಲೆಗಳನ್ನು ಅಳವಡಿಸಿಕೊಂಡಿದೆ. ಅದರಲ್ಲಿ 50 ಇಎಂಆರ್ಎಸ್ ಶಾಲೆಗಳಿಗೆ ತೀವ್ರ ತರಬೇತಿ ನೀಡಲಾಗುವುದು ಮತ್ತು 500 ಮಾಸ್ಟರ್ ತರಬೇತುದಾರರಿಗೆ ತರಬೇತಿ ನೀಡಲಾಗುವುದು.ಮೈಕ್ರೋಸಾಫ್ಟ್ ಶಿಕ್ಷಣ ಕೇಂದ್ರದಿಂದ ವೃತ್ತಿಪರ ಇ-ಬ್ಯಾಡ್ಜ್ ಮತ್ತು ಇ-ಪ್ರಮಾಣಪತ್ರಗಳನ್ನು ಶಿಕ್ಷಕರಿಗೆ ಒದಸಗಿಲಾಗುತ್ತದೆ.

ಸಚಿವಾಲಯದ ಅಡಿಯಲ್ಲಿರುವ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಮಾಜಿಕ ಒಳಿತಿಗಾಗಿ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಒಳಗೊಂಡ ಎಐ ಅಪ್ಲಿಕೇಷನ್ಸ್ ಬಗ್ಗೆ  ಈ ಯೋಜನೆಯಲ್ಲಿ ಮಾರ್ಗದರ್ಶನ ನೀಡಲಾಗುವುದು" ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ವಿದ್ಯಾರ್ಥಿಗಳು ತಮ್ಮ ಅಲೋಚನಾ ಕೌಶಲ್ಯವನ್ನು ಬೆಳೆಸಿಕೊಳ್ಳಲು ಸಹಾಯವಾಗುವ ಮೈನೋಕ್ರಾಫ್ಟ್ನಲ್ಲಿನ ಗ್ಯಾಮಿಫೈಡ್ ಪರಿಸರಕ್ಕೆ ಒಗ್ಗಿಕೊಳ್ಳುವಂತೆ ತರಬೇತಿ ನೀಡಲಾಗುವುದು ಅಂತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಇಷ್ಟೇ ಅಲ್ಲದೇ ಆಫೀಸ್ 365 ಮತ್ತು ಎಐ ಅಪ್ಲಿಕೇಶನ್ ಅಂತಹ ಆಫ್ಲಿಕೇಶನ್ಗಳನ್ನು ಕಲಿಸುವಂತೆ ಶಿಕ್ಷಕರುಗಳಿಗೆ ತರಬೇತಿ ನೀಡಲಾಗುವುದು.  

ಒಡಿಶಾದಲ್ಲೂ ಸರ್ಕಾರಿ ಶಾಲೆ ಬಂದ್, ಆದೇಶ ರದ್ದುಗೊಳಿಸಿದ ಹೈಕೋರ್ಟ್

ಇಂಥ ಕಾರ್ಯಕ್ರಮ ಗಳ ಮೂಲಕ ನಮ್ಮ ವಿದ್ಯಾರ್ಥಿಗಳು ಡಿಜಿಟಲ್ ರೂಪಾಂತರ ಕೌಶಲ್ಯ ಗಳಿಸುತ್ತಾರೆ. ಇದು ಎಐ ಮತ್ತು ಕೋಡಿಂಗ್ ಪಠ್ಯಕ್ರಮದ ಒಂದು ಭಾಗವಾಗಿ ಹೊಸ ಅಧ್ಯಾಯವನ್ನು ಆರಂಭಿಸುತ್ತದೆ ಎಂದು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ತಿಳಿಸಿದ್ದಾರೆ

ಮೈಕ್ರೋಸಾಫ್ಟ್ ಇಂಡಿಯಾದ ಸಾರ್ವಜನಿಕ ವಲಯದ ಎಕ್ಸಿಕ್ಯೂಟಿವ್ ಡೈರೆಕ್ಟರ್ ನವ್ತೇಜ್ ಬಾಲ್ ,  ಸಚಿವಾಲಯದೊಂದಿಗಿನ ನಮ್ಮ ಸಹಭಾಗಿತ್ವವು ಶಿಕ್ಷಣ ಸಮಾನತೆಯನ್ನು ಶಕ್ತಗೊಳಿಸುವ ಒಂದು ಹೆಜ್ಜೆಯಾಗಿದೆ, ಮುಂದಿನ ಪೀಳಿಗೆಯ ಕಲಿಯುವವರಿಗೆ ಮತ್ತು ಶಾಲೆಗಳಿಂದ ಶಿಕ್ಷಣ ಪಡೆಯುವವರಿಗೆ ಸಮಾನ ಅವಕಾಶ ಮತ್ತು ಪ್ರವೇಶವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ

ಅಂದಹಾಗೇ ಈ ಕಾರ್ಯಕ್ರಮವು ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಶಾಲೆಗಳ ವಿದ್ಯಾರ್ಥಿಗಳ ಸಿದ್ಧತೆ, ಸನ್ನದ್ಧತೆಯ ದೃಷ್ಟಿಯಿಂದ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ನಿರೀಕ್ಷೆಯಿದೆ. ಈ ಡಿಜಿಟಲ್ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಕೌಶಲ್ಯವನ್ನು ಒದಗಿಸಲಾಗುವುದು.. ಇದು AI ಮತ್ತು ಕೋಡಿಂಗ್ ಪಠ್ಯಕ್ರಮದ ಒಂದು ಭಾಗವಾಗಿ ಹೊಸ ಅಧ್ಯಾಯವನ್ನು ತೆರೆಯುವ ನಿರೀಕ್ಷೆಯಿದೆ.

ಗಣಿತದಲ್ಲಿ ಎಕ್ಸ್‌ಪರ್ಟಾ? ಆರ್ಯಭಟ ಸ್ಪರ್ಧೆಯಲ್ಲಿ ಭಾಗವಹಿಸಿ, 1.5 ಲಕ್ಷ ರೂ. ಗೆಲ್ಲಿ

ಬುಡಕಟ್ಟು ವಿದ್ಯಾರ್ಥಿಗಳು ಮತ್ತು ಇತರರ ನಡುವಿನ ಅಂತರವನ್ನು ನಿವಾರಿಸಲು ಈ ಕಾರ್ಯಕ್ರಮವು ಸಹಾಯವಾಗಲಿದೆ. ಇದು ಬುಡಕಟ್ಟು ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಈ ಲಾಕ್ ಡೌನ್ ಅವಧಿಯಲ್ಲಿ ಬುಡಕಟ್ಟು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಈ ಪಠ್ಯಕ್ರಮವು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳ ಜೊತೆಗೆ ಶಾಲೆಗಳಲ್ಲಿ ಸಚಿವಾಲಯದಿಂದ ನಾಮನಿರ್ದೇಶನಗೊಂಡಿರುವ 5000 ಶಿಕ್ಷಕರಿಗೆ ವೃತ್ತಿಪರ ತರಬೇತಿಯನ್ನೂ ನೀಡಲಾಗುವುದು.

click me!