ವಿದ್ಯಾರ್ಥಿಗಳ ಗಮನಕ್ಕೆ: ತರಗತಿಗಳು ಆರಂಭ, ಹೇಗೆ, ಎಲ್ಲಿ ಎನ್ನುವ ಮಾಹಿತಿ ಇಲ್ಲಿದೆ....!

By Suvarna News  |  First Published Nov 18, 2020, 4:45 PM IST

ಕಳೆದ 8 ತಿಂಗಳಿನಿಂದ ಬಂದ್ ಆಗಿದ್ದ ಶೈಕ್ಷಣಿಕ ಚಟುವಟಿಕೆಗಳು ಹಂತ-ಹಂತವಾಗಿ ಆರಂಭವಾಗುತ್ತಿದ್ದು, ಇದೀಗ ದ್ಯಾರ್ಥಿಗಳಿಗಾಗಿ ಸಂವೇದಾ ಇ-ಕ್ಲಾಸ್ ಆರಂಭಿಸಲಾಗಿದೆ.



ಬೆಂಗಳೂರು, (ನ.18): ಇದೇ ನವೆಂಬರ್  23 ರಿಂದ 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮಗಳು ದೂರದರ್ಶನ ಚಂದನಾ ವಾಹಿನಿಯಲ್ಲಿ ಪ್ರಸಾರವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್-19 ಪ್ರಸರಣದ ಹಿನ್ನೆಲೆಯಲ್ಲಿ ಶಾಲೆಗಳ ಆರಂಭ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕಾ ನಿರಂತರತೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸಂವೇದಾ ತರಗತಿಗಳನ್ನು 5, 6 ಮತ್ತು 7ನೇ ತರಗತಿಗಳಿಗೂ ವಿಸ್ತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

Latest Videos

undefined

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಎಸ್‌ಎಸ್‌ಎಲ್ ಸಿ, ಪಿಯುಸಿ ಪರೀಕ್ಷೆ ರದ್ದು..!

5, 6 ಮತ್ತು 7ನೇ ತರಗತಿಗಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ ಹಾಗೂ ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ವಿಷಯಗಳಲ್ಲಿ ವಿಡಿಯೋ ಪಾಠಗಳ ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್ ಟಿ) ಬಿಡುಗಡೆ ಮಾಡಿದೆ.

ತರಗತಿಗಳು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8 ರಿಂದ 9.30 ಮತ್ತು ಸಂಜೆ 5.30 ರಿಂದ 6 ಗಂಟೆಯವರೆಗೆ ಪ್ರಸಾರವಾಗಲಿವೆ. ಪ್ರತಿ ದಿನ 4 ಪಾಠಗಳನ್ನು, ಪ್ರತಿ ಪಾಠ 30 ನಿಮಿಷಗಳ ಅವಧಿಯಂತೆ 2 ಗಂಟೆಗಳ ಕಾಲ ನಡೆಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.

ಈ ತರಗತಿಗಳು ನಿಗದಿತ ವೇಳಾಪಟ್ಟಿಯಂತೆ ಡಿ. 25 ರವರೆಗೆ 5 ವಾರಗಳ ಕಾಲ ನಡೆಯಲಿವೆ. ಪ್ರಾಥಮಿಕ ಶಾಲಾ ಶಿಕ್ಷಕರು ಕಾರ್ಯಕ್ರಮದ ಅನುಪಾಲನೆ ಮಾಡಲಿದ್ದಾರೆ. ಈ ಪಾಠಗಳ ಕುರಿತಂತೆ ಆಯಾ ಜಿಲ್ಲೆಗಳ ಉಪನಿರ್ದೇಶಕರು ಮಕ್ಕಳಿಗೆ ತಲುಪುವಂತೆ ಹೆಚ್ಚಿನ ರೀತಿಯ ಪ್ರಚಾರ ಮಾಡಿ ಮಕ್ಕಳು ಸದುಪಯೋಗಪಡಿಸಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.

click me!