
ಪಾಟ್ನಾ(ಫೆ.14): ಇಲ್ಲೊಬ್ಬಳು ಯುವತಿ, ಪದೇ ಪದೇ ಸೋತರೂ ಎದೆಗುಂದದೆ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾಳೆ. ಹಲವು ಕಂಪನಿಗಳ 50 ಸಂದರ್ಶನ (Interviews)ಗಳನ್ನ ಎದುರಿಸಿದ್ದ ಯುವತಿ, ಕೊನೆಗೂ ಗೂಗಲ್ (Google) ಕಂಪನಿಯ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾಳೆ. ಅದು ಬಂಪರ್ ಸ್ಯಾಲರಿ ಪ್ಯಾಕೇಜ್ ಪಡೆಯುವುದರೊಂದಿಗೆ ತನ್ನ ಡ್ರೀಮ್ ಫುಲ್ ಫಿಲ್ ಮಾಡಿಕೊಂಡಿದ್ದಾಳೆ. ವಾರ್ಷಿಕ ಬರೋಬ್ಬರಿ ₹1.10 ಕೋಟಿ ಪ್ಯಾಕೇಜ್ ಪಡೆಯಲಿದ್ದಾಳೆ. 'ಫೈಲ್ಯೂರ್ ಈಸ್ ಎ ಬೆಸ್ಟ್ ಟ್ರೈನರ್' ಎಂಬ ಮಾತು, ಬಿಹಾರ (Bihar)ದ ಸಂಪ್ರೀತಿ ಯಾದವ್ (Sampriti Yadav)ಗೆ ಹೋಲುತ್ತದೆ.
ಪಾಟ್ನಾ (Patna) ಮೂಲದ 24 ವರ್ಷದ ಸಂಪ್ರೀತಿ ಯಾದವ್ ಈಗ ಗೂಗಲ್ ಲಂಡನ್ (Landon) ಕಂಪನಿಯಲ್ಲಿ ಉದ್ಯೋಗ ದಕ್ಕಿಸಿಕೊಂಡಿದ್ದು, ವಾರ್ಷಿಕ 1.10 ಕೋಟಿ ರೂ. ಪ್ಯಾಕೇಜ್ ಪಡೆದಿದ್ದಾರೆ. ಫೆಬ್ರವರಿ 14 ರಂದು ಗೂಗಲ್ ಕಂಪೆನಿಗೆ ಜಾಯಿನ್ ಆಗಲಿದ್ದಾಳೆ. ಈ ಯಶಸ್ಸಿನ ಉತ್ತುಂಗವನ್ನು ತಲುಪುವುದಕ್ಕಿಂತ ಮುಂಚೆಯೇ, ಸಂಪ್ರೀತಿ ಸಾಕಷ್ಟು ಹಿನ್ನಡೆಗಳನ್ನು ಎದುರಿಸಬೇಕಾಗಿತ್ತು.
ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ (Delhi Technological University - DTU) ಮೇ 2021 ರಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿಯಲ್ಲಿ ತನ್ನ ಡಿಪ್ಲೊಮಾ (Diploma)ವನ್ನು ಮುಗಿಸಿರುವ ಯಾದವ್ ಅವರು ಗೂಗಲ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದರು. 9 ಕಠಿಣ ಸುತ್ತುಗಳ ನಂತರ, ಅವರು ಕೊನೆಯದಾಗಿ ಸಂದರ್ಶನವನ್ನು ಭೇದಿಸಿ ಈ ಆಕರ್ಷಕ ಬಂಪರ್ ಆಪರ್ ಅನ್ನು ಪಡೆದಿದ್ದಾರೆ.
Rahul Kumar Das Neet: ಅಸ್ಸಾಂ ಚಹಾ ಮಾರಾಟಗಾರ ನೀಟ್ ಪಾಸ್ ಮಾಡಿದ್ದು ನಕಲಿ!
ಈಗ ಗೂಗಲ್‌ನಲ್ಲಿ ಉದ್ಯೋಗ ಪಡೆದಿರುವ ಯಾದವ್, ಇದುವರೆಗೂ ಬರೋಬ್ಬರಿ 50 ಸಂದರ್ಶನಗಳನ್ನು ಎದುರಿಸಿದ್ದಾರೆ. "ನಾನು ನಿಜವಾಗಿಯೂ ಸಂದರ್ಶನಗಳ ಉದ್ದಕ್ಕೂ ಆತಂಕವನ್ನು ಅನುಭವಿಸುತ್ತಿದ್ದೆ. ಆದಾಗ್ಯೂ, ನನ್ನ ಅಮ್ಮ ಅಥವಾ ತಂದೆ ಮತ್ತು ಸ್ನೇಹಿತರು ಕೊಟ್ಟ ನೆರವು ನಿರಂತರವಾಗಿ ನನ್ನನ್ನು ಉನ್ನತ ಸಾಧನೆ ಮಾಡಲು ಪ್ರೇರೇಪಿಸಿತು. ನಾನು ದೊಡ್ಡ ಸಂಸ್ಥೆಗಳನ್ನ ಸೇರಲು ಸಾಕಷ್ಟು ಪರಿಶ್ರಮ ಹಾಕಿದ್ದೇನೆ. ಬೃಹತ್ ಸಂಸ್ಥೆಗಳಲ್ಲಿ ಹೆಚ್ಚಿನ ಸಂದರ್ಶನಗಳು ಚರ್ಚೆಯಂತೆಯೇ ಇರುತ್ತವೆ” ಅಂತಾರೆ ಯಾದವ್.
ಸಂಪ್ರೀತಿ ಯಾದವ್ ಗೂಗಲ್‌ನಲ್ಲಿ ಉದ್ಯೋಗಕ್ಕೆ ಸೇರುವ ಮೊದಲು ಮೈಕ್ರೋಸಾಫ್ಟ್ (Microsoft) ನಲ್ಲಿ ಕೆಲಸ ಮಾಡುತ್ತಿದ್ದರು. "ನಿರಂತರ ಅಭ್ಯಾಸವು ಆತಂಕವನ್ನು ಎದುರಿಸಲು ಮತ್ತು ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ತೆಗೆದುಕೊಳ್ಳಲು ಸಹಾಯ ಮಾಡಿತು. ಪ್ರತಿಯೊಬ್ಬರಿಂದಲೂ ನಾವು ಒಂದು ವಿಷಯವನ್ನು ಕಲಿಯಬಹುದು. ಅವರ ವೈಯಕ್ತಿಕ ಕಥೆಯು ತಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಇದು ಬಹಳಷ್ಟು ಜನರಿಗೆ ಪಾಠವಾಗಬಹುದು" ಅನ್ನೋದು ಯಾದವ್ ಅಭಿಪ್ರಾಯ.
ಆಕೆಯ ಮೊದಲ ಪ್ರತಿಕ್ರಿಯೆ ಕೃತಜ್ಞತೆಯಾಗಿದೆ ಎಂದು ಯಾದವ್ ಉಲ್ಲೇಖಿಸಿದ್ದಾರೆ. ಅಂದಹಾಗೇ ಗೂಗಲ್‌ನಲ್ಲಿ ಕೆಲಸ ಮಾಡಬೇಕು ಅನ್ನೋ ದು ಕೇವಲ ಯಾದವ್ ಗಷ್ಟೇ ಅಲ್ಲ, ವಾಸ್ತವಿಕವಾಗಿ ಪ್ರತಿಯೊಬ್ಬ ಸಾಫ್ಟ್‌ವೇರ್ ಪ್ರೋಗ್ರಾಂ ಇಂಜಿನಿಯರ್ ಕನಸಾಗಿರುತ್ತದೆ. ಯಾದವ್ ಅವರು ಗೂಗಲ್ ಲಂಡನ್ ಕಂಪನಿಗೆ ನಿಯೋಜನೆಗೊಂಡಿದ್ದಾರೆ.
ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಸುಳ್ಳು ಸುದ್ದಿ, ಉನ್ನತ ಶಿಕ್ಷಣ ಸಚಿವರ ಸ್ಪಷ್ಟನೆ
ಯಾದವ್ ಪಾಟ್ನಾದಲ್ಲಿ ನೊಟ್ರೆ ಡೇಮ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆದರು. ಆಕೆಯ ತಾಯಿ ಶಶಿ ಪ್ರಭಾ, ಬಿಹಾರದ ಯೋಜನೆ ಮತ್ತು ಬೆಳವಣಿಗೆ ವಿಭಾಗದ ಸಹಾಯಕ ನಿರ್ದೇಶಕರಾಗಿದ್ದಾರೆ. ಆಕೆಯ ತಂದೆ ರಾಮಶಂಕರ್ ಯಾದವ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿ. ಸದ್ಯ ಗೂಗಲ್ ನಿಂದ ಬಂಪರ್ ಪ್ಯಾಕೇಜ್ ಪಡೆದ ಖುಷಿಯಲ್ಲಿರುವ ಯಾದವ್, ಈ ಸಾಧನೆಯ ಕ್ರೆಡಿಟ್ ಅನ್ನು ಪೋಷಕರು ಹಾಗೂ ಸ್ನೇಹಿತರಿಗೆ ಅರ್ಪಿಸುತ್ತಾಳೆ.