ಕೋಚಿಂಗ್ ಹಬ್ ಎಂದೇ ಪ್ರಸಿದ್ಧಿ ಹೊಂದಿರುವ ಕೋಟಾದಲ್ಲಿ ನೀಟ್ ತರಬೇತಿ ವಿದ್ಯಾರ್ಥಿಗಳ ಆತ್ಮಹತ್ಯೆ ಮುಂದುವರೆದಿದೆ. ನೀಟ್ ತರಬೇತಿ ಪಡೆಯುತ್ತಿರುವ ಮತ್ತೊಬ್ಬ ವಿದ್ಯಾರ್ಥಿನಿ ಕಟ್ಟಡದಿಂದ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾಳೆ
ಕೋಟಾ (ಜೂ.7): ಕೋಚಿಂಗ್ ಹಬ್ ಎಂದೇ ಪ್ರಸಿದ್ಧಿ ಹೊಂದಿರುವ ಕೋಟಾದಲ್ಲಿ ನೀಟ್ ತರಬೇತಿ ವಿದ್ಯಾರ್ಥಿಗಳ ಆತ್ಮಹತ್ಯೆ ಮುಂದುವರೆದಿದೆ. ನೀಟ್ ತರಬೇತಿ ಪಡೆಯುತ್ತಿರುವ ಮತ್ತೊಬ್ಬ ವಿದ್ಯಾರ್ಥಿನಿ ಕಟ್ಟಡದಿಂದ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾಳೆ. ಈ ವರ್ಷದಲ್ಲಿ ಇದು ಹತ್ತನೇ ಪ್ರಕರಣವಾಗಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ ಬಾಗೀಶ್ ತಿವಾರಿ(18) ಆತ್ಯಹತ್ಯೆಗೆ ಶರಣಾದ ವಿದ್ಯಾರ್ಥಿನಿ. ನೀಟ್ ಫಲಿತಾಂಶ ಹೊರಬಿದ್ದಿದ್ದು, ಇರದ ಬೆನ್ನಲ್ಲೇ ಆಕೆ ವಾಸವಿದ್ದ ಕಟ್ಟಡದ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ನೀಟ್ 2024 ಪರೀಕ್ಷೆ ಫಲಿತಾಂಶ ಪ್ರಕಟ, ಕರ್ನಾಟಕದ 6 ವಿದ್ಯಾರ್ಥಿಗಳು ಟಾಪರ್ಸ್
undefined
ಮಿಸ್ ಯು ಅಪ್ಪಾ, ಈ ಬಾರಿಯೂ ಫೇಲ್
ಕೋಟಾ: ಕೋಚಿಂಗ್ ಹಬ್ ಖ್ಯಾತಿಯ ಕೋಟಾದಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲೂ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿ. ರಾಜಸ್ಥಾನ ಮೂಲದ ಭರತ್ ಕುಮಾರ್ ರಾಜ್‌ಪುತ್ (20) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಸಾವಿಗೂ ಮುನ್ನ ಪೋಷಕರಿಗೆ ಬರೆದ ಪತ್ರದಲ್ಲಿ ‘ಅಪ್ಪ ನನ್ನನ್ನು ಕ್ಷಮಿಸಿ ಬಿಡು, ಈ ಬಾರಿಯೂ ನಾನು ನೀಟ್ ಪರೀಕ್ಷೆಯನ್ನು ಪಾಸ್ ಮಾಡಲು ಆಗಲಿಲ್ಲ.’ ಎಂದು ಬರೆದಿದ್ದ ವಿದ್ಯಾರ್ಥಿ. ಆ ಘಟನೆ ವರ್ಷದ 9ನೇ ಪ್ರಕರಣವಾಗಿತ್ತು. ಇದೀಗ ನಡೆದಿರುವುದು ಹತ್ತನೇ ಪ್ರಕರಣವಾಗುವ ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿ ಮುಂದುವರಿದಿರುವುದು ದುರಂಂತವೇ ಸರಿ.