ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪ್ರವೇಶ ಪ್ರಾರಂಭ: 8ನೇ ತರಗತಿ ಪಾಸಾದವರು ಅಪ್ಲೈ ಮಾಡಿ

By Sathish Kumar KH  |  First Published Jun 6, 2024, 7:10 PM IST

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಆಗಸ್ಟ್ -2024ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರವೇಶಕ್ಕೆ ಆನ್ ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ. 


ಬೆಂಗಳೂರು (ಜೂ.06): ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಆಗಸ್ಟ್ -2024ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರವೇಶಕ್ಕೆ ಆನ್ ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ. 

ಸರ್ಕಾರಿ ಸಂಸ್ಥೆಗಳಲ್ಲಿ ವಾರ್ಷಿಕ  ರೂ.1200/- ಗಳು  ಮಾತ್ರ ಭೋಧನ ಶುಲ್ಕವಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಪಂಗಡದ  ವಿದ್ಯಾರ್ಥಿಗಳಿಗೆ  ತರಬೇತಿಗೆ ಅನುಕೂಲವಾಗುವ ಉಚಿತ  ಪರಿಕರಗಳನ್ನು  ವಿತರಿಸಲಾಗುವುದು. ವೆಲ್ಡರ್, ಕಾರ್ಪೆಂಟರ್, ಶೀಟ್ ಮೆಟಲ್ ವರ್ಕರ್, ಸರ್ಫೇಸ್ ಆರ್ನಮೆಂಟೇಶನ್ ಟೆಕ್ನಿಕ್ಸ್, ವೈರ್‌ಮ್ಯಾನ್, ಡ್ರೆಸ್ ಮೇಕಿಂಗ್, ಹೊಲಿಗೆ ತಂತ್ರಜ್ಞಾನ, ಮೇಸನ್ ಪೇಂಟರ್, ಪ್ಲಂಬರ್ (Welder, Carpenter, Sheet Metal Worker, Surface Ornamentation Techniques, Wireman, Dress Making, Sewing Technology, Mason Painter, Plumber) ವೃತ್ತಿಗಳಿಗೆ 8ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ 10ನೇ ತರಗತಿ ಅನುತ್ತೀರ್ಣ  ಅಂಕಪಟ್ಟಿಯನ್ನು  ಹೊಂದಿರುವ  ವಿದ್ಯಾರ್ಥಿಗಳಿಗೂ ಸಹ ಐಟಿಐಗಳಲ್ಲಿ  ತರಬೇತಿ ಹೊಂದಲು  ಅವಕಾಶವಿರುತ್ತದೆ. ಉಳಿದಂತಹ ಇತರೆ ವಿವಿಧ ವೃತ್ತಿಗಳಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು.

Latest Videos

undefined

ಎಸ್‌ಎಸ್‌ಎಲ್‌ಸಿ ಮರುಎಣಿಕೆ, 625ಕ್ಕೆ 625 ಅಂಕ ಪಡೆದು ಮತ್ತೊಬ್ಬಳು ವಿದ್ಯಾರ್ಥಿನಿ ಟಾಪರ್!

ಐಟಿಐ ಗಳಲ್ಲಿ ಪ್ರವೇಶ ಬಯಸುವ ಅಭ್ಯರ್ಥಿಗಳು  ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಪ್ರವೇಶ ಹೊಂದಬಹುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಂಟಿ ನಿರ್ದೇಶಕರ  (ತರಬೇತಿ) ಮತ್ತು  ಪದನಿಮಿತ್ತ ಜಂಟಿ ಶಿಶಿಕ್ಷು ಸಲಹೆಗಾರರು  ವಿಭಾಗೀಯ ಕಛೇರಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೌಶಲ್ಯ ಭವನ, ಬನ್ನೇರುಘಟ್ಟ ರಸ್ತೆ, ಡೈರಿ ವೃತ್ತ, ಬೆಂಗಳೂರು-560 029  ಇಲ್ಲಿ ಸಂಪರ್ಕಿಸಬಹುದು ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರ  (ತರಬೇತಿ) ಮತ್ತು  ಪದನಿಮಿತ್ತ ಜಂಟಿ ಶಿಶಿಕ್ಷು ಸಲಹೆಗಾರರು,  ವಿಭಾಗೀಯ ಕಛೇರಿಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!