ನೀಟ್ ಪ್ರವೇಶ ಪರೀಕ್ಷೆ: ಎಕ್ಸ್‌ಪರ್ಟ್‌ನ ಅರ್ಜುನ್‌ಗೆ ಪ್ರಥಮ ರ್ಯಾಂಕ್‌

By Kannadaprabha NewsFirst Published Jun 6, 2024, 10:14 AM IST
Highlights

ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್ ಪ್ರಥಮ ಬ್ಯಾಂಕ್ ಪಡೆದಿದ್ದಾರೆ.

ಮಂಗಳೂರು (ಜೂ.06): ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್ ಪ್ರಥಮ ಬ್ಯಾಂಕ್ ಪಡೆದಿದ್ದಾರೆ. ಆ ಮೂಲಕ, ಎಕ್ಸ್‌ಪರ್ಟ್ ಕಾಲೇಜು ಶೈಕ್ಷಣಿಕ ಲೋಕದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದೆ ಎಂದು ಎಕ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಹೇಳಿದ್ದಾರೆ. ಕೊಡಿಯಾಲ್‌ಬೈಲ್‌ನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ಬ್ಯಾಂಕ್ ಪಡೆದ ವಿದ್ಯಾರ್ಥಿ ಅರ್ಜುನ್‌ ಕಿಶೋರ್ ಅವರನ್ನು ಸನ್ಮಾನಿಸಿ ಅವರು ಮಾತ ನಾಡಿದರು. ಶೈಕ್ಷಣಿಕ ಹಬ್ ಎಂದು ಗುರುತಿಸಿಕೊಂಡಿರುವ ಮಂಗಳೂರಿನ ಪಾಲಿಗೆ ಈ ಸಾಧನೆ ಹೆಗ್ಗಳಿಕೆಯ ವಿಚಾರವಾಗಿದೆ ಎಂದರು. ಎಕ್ಸ್‌ ಪರ್ಟ್ ಕಾಲೇಜಿನ 1,551 ವಿದ್ಯಾರ್ಥಿಗಳಲ್ಲಿ ಶೇ.97ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. 

ಹದಿನಾಲ್ಕು ವಿದ್ಯಾರ್ಥಿ ಗಳು 700 ಹಾಗೂ ಅದಕ್ಕಿಂತ ಅಧಿಕ ಅಂಕ ಪಡೆದರೆ, 55 ವಿದ್ಯಾರ್ಥಿಗಳು 675 ಅಂಕಕ್ಕಿಂತ ಅಧಿಕ, 109 ವಿದ್ಯಾರ್ಥಿಗಳು 650 ಅಂಕಕ್ಕಿಂತ ಅಧಿಕ, 176 ವಿದ್ಯಾರ್ಥಿಗಳು 625 ಅಂಕಕ್ಕಿಂತ ಅಧಿಕ, 271 ವಿದ್ಯಾರ್ಥಿಗಳು 600 ಅಂಕಕ್ಕಿಂತ ಅಧಿಕ, 359 ವಿದ್ಯಾರ್ಥಿಗಳು 575ಕ್ಕಿಂತ ಅಧಿಕ, 451 ವಿದ್ಯಾರ್ಥಿಗಳು 550 ಅಂಕಕ್ಕಿಂತ ಅಧಿಕ, 534 ವಿದ್ಯಾರ್ಥಿ ಗಳು 525 ಅಂಕಕ್ಕಿಂತ ಅಧಿಕ, 628 ವಿದ್ಯಾರ್ಥಿಗಳು 500 ಅಂಕಕ್ಕಿಂತ ಅಧಿಕ, 731 ವಿದ್ಯಾರ್ಥಿಗಳು 475 ಅಂಕಕ್ಕಿಂತ ಅಧಿಕ, 815 ವಿದ್ಯಾರ್ಥಿಗಳು 450 ಅಂಕಕ್ಕಿಂತ ಅಧಿಕ, 895 ವಿದ್ಯಾರ್ಥಿಗಳು 425 ಅಂಕಕ್ಕಿಂತ ಅಧಿಕ, 977 ವಿದ್ಯಾರ್ಥಿ ಗಳು 400 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದರು.

Latest Videos

ವಾಲ್ಮೀಕಿ ನಿಗಮ ಕೇಸಿಗೆ ಈಗ ಸಿಬಿಐ ಪ್ರವೇಶ: 5 ಮಂದಿ ವಿರುದ್ಧ ಎಫ್‌ಐಆ‌ರ್

ಆಳ್ವಾಸ್ ಪಿಯು ಕಾಲೇಜು ಸಾಧನೆ: ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 181 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಆಳ್ವಾಸ್ ಸಾರ್ವಕಾಲಿಕ ಸಾಧನೆ ಮೆರೆದಿದೆ. 670ಕ್ಕೂ ಅಧಿಕ ಅಂಕವನ್ನು 11 ವಿದ್ಯಾರ್ಥಿಗಳು, 650ಕ್ಕೂ ಅಧಿಕ 51 ವಿದ್ಯಾರ್ಥಿಗಳು, 600ಕ್ಕೂ ಅಧಿಕ 181 ವಿದ್ಯಾರ್ಥಿಗಳು, 550ಕ್ಕೂ ಅಧಿಕ 371 ವಿದ್ಯಾರ್ಥಿಗಳು ಹಾಗೂ 500ಕ್ಕೂ ಅಧಿಕ 686 ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಮೂಲಕ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್‌ನಿಂದ ಅಗ್ರಪಂಕ್ತಿಯ ಸಾಧನೆ ನಿರ್ಮಾಣವಾಗಿದೆ. ಆಕಾಶ್ ಬಸವರಾಜ್ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 55ನೇ ರ್‌ಯಾಂಕ್ ಪಡೆದುಕೊಂಡಿದ್ದಾರೆ.

ಶಾಹೀನ್‌ 8 ವಿದ್ಯಾರ್ಥಿಗಳಿಗೆ 700+ ಅಂಕ: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದಿರುವ ಇಲ್ಲಿಯ ಶಾಹೀನ್ ಪದವಿ ಪೂರ್ವ ವಿಜ್ಞಾನ ಕಾಲೇಜು, ಸರ್ಕಾರಿ ಕೋಟಾದಡಿ 550ಕ್ಕೂ ಅಧಿಕಸೀಟುಗಳನ್ನು ಪಡೆಯುವ ನಿರೀಕ್ಷೆಯಲ್ಲಿದೆ. ಕಾಲೇಜಿನ ಎಂಟು ವಿದ್ಯಾರ್ಥಿಗಳು 720ರಲ್ಲಿ 700ಕ್ಕೂ ಅಧಿಕ ಅಂಕ ಗಳಿಸಿ ಅಮೋಘ ಸಾಧನೆ ತೋರಿದ್ದಾರೆ. ಮಹ ಮ್ಮದ್ ಇಬ್ರಾಹಿಂ ಅಲ್ತಾಫ್, ಖಾನ್ ಸಫ್ಘಾನ್ ಮಹಮದ್‌ ಆಸಿಫ್ ಹಾಗೂ ಶಿಫಾ ಶಮೀಮ್ ತಲಾ 705 ಅಂಕ, ರುಮೈಸಾ ಅಲಿ ಖಾನ್ 701, ಮನಿ ಮಹಮ್ಮದ್ ಬಾಷ‌, ರೋಹಿತ್, ಅಬಿಬುಲ್ಲಾ ಮನ್ಸೂರ್ ಹಾಗೂ ರಿಶಿಕೇಶ ಕಾಮತಿಕ‌ 700 ಅಂಕ ಗಳಿಸಿದ್ದಾರೆ. 

ಚನ್ನಪಟ್ಟಣಕ್ಕಾಗಿ ಬಿಜೆಪಿಯಿಂದ ಯೋಗೇಶ್ವರ್‌-ಜೆಡಿಎಸ್‌ನಿಂದ ನಿಖಿಲ್‌ ಪೈಪೋಟಿ?

ಒಟ್ಟು ಕಾಲೇಜಿನ ಮೂವರು ವಿದ್ಯಾರ್ಥಿಗಳು 105 ಅಂಕ, ಎಂಟು ವಿದ್ಯಾರ್ಥಿಗಳು 700ಕ್ಕೂ ಹೆಚ್ಚು 38 ವಿದ್ಯಾರ್ಥಿಗಳು 680ಕ್ಕೂ ಹೆಚ್ಚು 161 ವಿದ್ಯಾರ್ಥಿಗಳು 650ಕ್ಕೂ ಹೆಚ್ಚು 431 ವಿದ್ಯಾರ್ಥಿಗಳು 600ಕ್ಕಿಂತ ಮೇಲ್ಪಟ್ಟು ಹಾಗೂ 666 ವಿದ್ಯಾರ್ಥಿಗಳು 575ಕ್ಕೂ ಅಧಿಕ ಅಂಕಗಳಿಸಿದ್ದಾರೆಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ. ಕಾಲೇಜಿಗೆ ಈ ವರ್ಷ ನಿರೀಕ್ಷೆಯಂತೆ ಅತ್ಯುತ್ತಮ ಫಲಿತಾಂಶ ಬಂದಿದೆ. 2023 ಹಾಗೂ 2024ರಲ್ಲಿ ಕಾಲೇಜಿನ ತಲಾ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆ ದಿದ್ದರೆ, ಈ ಸಾಲಿನಲ್ಲಿ 550ಕ್ಕೂ ಅಧಿಕ ಸೀಟು ಲಭ್ಯವಾಗುವ ನಿರೀಕ್ಷೆ ಇದೆ.

click me!