ಚಾ.ನಗರದ ಸರ್ಕಾರಿ ಶಾಲೆಯಲ್ಲಿ ಇನ್ನು ಮಕ್ಕಳಿಗೆ ರೋಬೋ ಪಾಠ!

Published : Jul 26, 2022, 12:58 PM ISTUpdated : Jul 26, 2022, 12:59 PM IST
ಚಾ.ನಗರದ ಸರ್ಕಾರಿ ಶಾಲೆಯಲ್ಲಿ ಇನ್ನು ಮಕ್ಕಳಿಗೆ ರೋಬೋ ಪಾಠ!

ಸಾರಾಂಶ

ಇನ್ನುಮುಂದೆ ಚಾಮರಾಜನಗರ ಗುಂಡ್ಲುಪೇಟೆ ಸರ್ಕಾರಿ ಪಿಯು ಕಾಲೇಜಿನಲ್ಲಿ ರೊಬೋ ಪಾಠ ಮಾಡಲಿದೆ! ಇಲ್ಲಿದೆ ಹೊಸ ಸುದ್ದಿ ಮುಂದೆ ಓದಿ

ವರದಿ:ದೇವರಾಜು ಕಪ್ಪಸೋಗೆ

ಚಾಮರಾಜನಗರ (ಜು.26): ಶಾಲೆಗಳೆಂದರೆ ಶಿಕ್ಷಕರು ಇರಬೇಕು. ಶಿಕ್ಷಕರಿಲ್ಲದೆ ಶಾಲೆಗಳು ಹೇಗೆ ಇರುತ್ತವೆಂಬುದನ್ನ ಊಹಿಸಿಕೊಳ್ಳಲಿಕ್ಕಾಗುವುದಿಲ್ಲ. ಇದೀಗ ಚಾಮನಗರದ ಶಾಲೆಯೊಂದು ಸುದ್ದಿಯಾಗಿದೆ ಈ ಶಾಲೆಯಲ್ಲಿ ಶಿಕ್ಷಕರ ಬದಲಿಗೆ ರೋಬೊಗಳೇ ಪಾಠ ಮಾಡುತ್ತವೆ.  ರಾಜಕಾರಣಿಯ ಜನ್ಮದಿನಕ್ಕೆ ಅಭಿಮಾನಿಗಳು ಹಾರ, ತುರಾಯಿಮ ಹಾಕಿ ಪಟಾಕಿ ಸಿಡಿಸಿ, ಕೇಕ್‌ ಕತ್ತರಿಸಿ ಸಂಭ್ರಮಿಸುತ್ತಾರೆ. ಹೆಚ್ಚೆಂದರೆ ರೋಗಿಗಳಿಗೆ ಹಣ್ಣು, ಹಂಪಲು, ಊಟ- ತಿಂಡಿ ವಿತರಣೆ ಮಾಡುತ್ತಾರೆ. ಆದರೆ ಸಚಿವ ವಿ.ಸೋಮಣ್ಣ ಅಭಿಮಾನಿಗಳು ಸರ್ಕಾರಿ ಶಾಲೆಯೊಂದಕ್ಕೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ರೋಬೋಟಿಕ್‌ ಲ್ಯಾಬ್‌ ಕೊಡುಗೆ ನೀಡಿದ್ದಾರೆ.

ಚಾಮರಾಜನಗರ(Chamarajanagar) ಜಿಲ್ಲೆ ಗುಂಡ್ಲುಪೇಟೆ(Gundlupete) ತಾಲೂಕಿನ ಬೇಗೂರು ಸರ್ಕಾರಿ ಪಿಯು ಕಾಲೇಜು(Beguru Govt Pu Collage) ಮತ್ತು ಪ್ರೌಢಶಾಲೆಯಲ್ಲಿ 12 ಲಕ್ಷ ರು. ವೆಚ್ಚದ ರೋಬೋಟಿಕ್‌(Robotic) ಮತ್ತು ಸೈನ್ಸ್‌ ಲ್ಯಾಬ್‌(Scince lab) ಮಂಗಳವಾರ ಸೋಮಣ್ಣ(Somamnna) ಅವರಿಂದಲೇ ಲೋಕಾರ್ಪಣೆಗೊಳ್ಳುತ್ತಿದೆ. ಲ್ಯಾಬ್‌ನಲ್ಲಿ ಶಿಕ್ಷಕರ ಬದಲಾಗಿ ಜಪಾನ್‌ನಿಂದ ಆಮದು ಮಾಡಿಕೊಂಡಿರುವ ‘ಬಿದ್ಯುತ್‌’ ಎಂಬ ಈ ರೋಬೋ ಕಾರ್ಯನಿರ್ವಹಿಸಲಿದೆ. ಯಾವುದೇ ಮಾಹಿತಿಯನ್ನಾದರೂ, ಯಾವುದೇ ಭಾಷೆಯಲ್ಲಾದರೂ ಎಷ್ಟೇ ಬಾರಿಯಾದರೂ ಕೊಡುವ ಸಾಮಾರ್ಥ್ಯ ಇರುವ ಅತ್ಯಾಧುನಿಕ ಮಾನವ ಯಂತ್ರವಾಗಿದೆ.

Mysuru ಶಾಲೆಯಲ್ಲಿ ರೋಬೋಟ್ ಲ್ಯಾಬ್, ದೇಶದಲ್ಲೆ ಮೊದಲು

ಲ್ಯಾಬ್‌ ವಿಶೇಷತೆಗಳೇನು?:

ರೋಬೋಟಿಕ್‌ ಲ್ಯಾಬ್‌ನಲ್ಲಿ ಶಿಕ್ಷಕ ಮಾಡುವ ಕಾರ್ಯವನ್ನು ರೋಬೋ ಮಾಡಲಿದೆ. ರೋಬೋ ಜೊತೆಗೆ 2500 ಮಾಡೆಲ್‌ ತಯಾರಿಸುವ ಕಿಟ್‌ ಇದ್ದು ವಿದ್ಯಾರ್ಥಿಗಳು ಯಾವ ಮಾಡೆಲ್‌ ಮಾಡಬೇಕೆಂದರೂ ರೋಬೋ ಮಾರ್ಗದರ್ಶನ ಕೊಡಲಿದೆ. ಬೀದಿ ದೀಪ ತಯಾರಿಕೆ ಹೇಗೆ? ವಾಯು ಶಕ್ತಿ, ಸೌರಫಲಕ, ಮೊಬೈಲ್‌ ಕಾರ್ಯ ನಿರ್ವಹಣೆ, ಸೂಕ್ಷ್ಮ ದರ್ಶಕ ತಯಾರಿಸುವುದು ಹೇಗೆ ಎಂಬುದನ್ನೆಲ್ಲಾ ವಿದ್ಯಾರ್ಥಿಗಳು ಪ್ರಯೋಗಿಕವಾಗಿ ಮಾಡಿ ಕಲಿಯಲಿದ್ದಾರೆ.

ದೇಶದಲ್ಲೇ ಮೊದಲು: ಮೈಸೂರಲ್ಲಿ ಜನ್ಮತಾಳಿದ ರೋಬೋ ಟೀಚರ್..!

ನೂತನ ಶಿಕ್ಷಣ ನೀತಿಯಂತೆ ಇಲ್ಲಿನ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಗಣಿತ, ಸಾಮಾನ್ಯಜ್ಞಾನ ಹೀಗೆ ಎಲ್ಲಾ ವಿಷಯಗಳಲ್ಲೂ ಪ್ರಾವಿಣ್ಯತೆ ಸಾಧಿಸಲು ಈ ಲ್ಯಾಬ್‌ ಉಪಕಾರಿಯಾಗಿದೆ. ಇದು ಡಿಜಿಟಲ್‌ ಕ್ಲಸ್ಟರ್‌ ಶಾಲೆ ಪರಿಕಲ್ಪನೆಯಡಿ ಕಾರ್ಯ ನಿರ್ವಹಿಸಲಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ