ಪೊಲೀಸ್ ಇಲಾಖೆಗೆ ಬಿದರಿ ಕೊಡುಗೆ: ಮೈಸೂರು ವಿವಿಗೆ ಪ್ರಬಂಧ ಮಂಡನೆ

By Suvarna News  |  First Published Jun 15, 2022, 10:08 PM IST

* ಪೊಲೀಸ್ ಇಲಾಖೆಗೆ ಬಿದರಿ ಕೊಡುಗೆ: ಮೈಸೂರು ವಿವಿಗೆ ಪ್ರಬಂಧ ಮಂಡನೆ
* ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪಿಎಚ್ ಡಿ ಪ್ರಬಂಧ ಮಂಡನೆ
* ಸಂಶೋಧನಾ ವಿದ್ಯಾರ್ಥಿ ನವೀನ್ ಕುಮಾರ್ ಅವರಿಂದ  ಪ್ರಬಂಧ ಸಿದ್ಧ


ಬೆಂಗಳೂರು, (ಜೂನ್.15): ನಿವೃತ್ತ ರಾಜ್ಯ ಪೊಲೀಸ್ ಮಹಾ‌ನಿರ್ದೇಶಕ ಶಂಕರ್ ಮಹಾದೇವ ಬಿದರಿ ಅವರ ಕುರಿತಂತೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪಿಎಚ್ ಡಿ ಪ್ರಬಂಧ ಮಂಡನೆ ಆಗಿದೆ.

 ರಾಜ್ಯಶಾಸ್ತ್ರ ವಿಭಾಗದ ಸಂಶೋಧಕರಾದ ನವೀನ್ ಕುಮಾರ್ ಎಂ ಬಿ ಅವರು ಪ್ರಾಧ್ಯಾಪಕ ಡಾ ಆರ್ ಎನ್ ದಿನೇಶ್ ಮಾರ್ಗದರ್ಶನದಲ್ಲಿ ಪಿಎಚ್ ಡಿ ಪ್ರಬಂಧ ಸಿದ್ದಪಡಿಸಿ ಮಂಡಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಸಂಘಟನೆ ಮತ್ರು ಆಡಳಿತಕ್ಕೆ ಡಾ ಶಂಕರ ಬಿದರಿ ಅವ್ರ ಕೊಡುಗೆ ಕುರಿತು ಈ ಪ್ರಬಂಧ ಸಿದ್ದಪಡಿಸಿದ್ದು ಇದನ್ನು ಮೈಸೂರು ವಿಶ್ವವಿದ್ಯಾನಿಲಯ ಅಂಗೀಕಾರ ಕೂಡ ಮಾಡಿದೆ.

Tap to resize

Latest Videos

ಹರಿದ ಪೇಪರ್ ಚೂರು, ಮೂರು ಕೂದಲು..ಚಿನ್ನಸ್ವಾಮಿ ಸ್ಫೋಟದ ಅಸಲಿ ಕತೆ!

ಇನ್ನು ಈ ಪ್ರಬಂಧಕ್ಕಾಗಿ ನವೀನ್ ಕುಮಾರ್ ಅವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಶಂಕರ್ ಬಿದರಿ ಅವರ ಬಾಲ್ಯದಿಂದ ಹಿಡಿದು ಎಲ್ಲಾ ಮಾಹಿತಿಯನ್ನು ಕಲೆಹಾಕಿದ್ದಾರೆ.  ಅಲ್ಲದೆ ಬಿದರಿ ಅವ್ರ ಸುಮಾರು 40 ವರ್ಷ ಪೊಲೀಸ್ ಸೇವೆಯ ಇಂಚಿಂಚೂ ಮಾಹಿತಿಯನ್ನು ಕಲೆಹಾಕಿ ಸಿದ್ದಪಡಿಸಿದ್ದಾರೆ.

ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಗೆ  ಪ್ರತಿಕ್ರಿಯಿಸಿದ ಶಂಕರ್ ಬಿದರಿ, ನವೀನ್ ಕುಮಾರ್ ಈ ರೀತಿ ಪ್ರಬಂಧ ಸಿದ್ದಪಡಿಸಿರುವುದು ಬಹಳ‌ ಸಂತೋಷವಾಗಿದೆ. ಸುಮಾರು 42 ವರ್ಷಗಳ ಕಾಲ ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿದ್ದೇನೆ‌. ಈ ರೀತಿ ಪ್ರಬಂಧ ಮುಂದೆ ಇತರೆ ಪೊಲೀಸ್ ಅಧಿಕಾರಿಳಿಗೂ ಕೂಡ ಸ್ಪೂರ್ತಿಯನ್ನು ತುಂಬಲಿದೆ ಎಂದರು.

 ಅಲ್ಲದೆ ಇದರಲ್ಲಿ ನವೀನ್ ಕುಮಾರ್ ಪರಿಶ್ರಮ ಬಹಳ ಇದೆ. ಸುಮಾರು 3 ವರ್ಷಗಳ ನಿರಂತರವಾಗಿ ಶ್ರಮಪಟ್ಟು ಈ ಪ್ರಬಂಧವನ್ನು ಮಂಡಿಸಿದ್ದಾರೆ ಎಂದು ಹೇಳಿದರು.

* Karnataka Chief Minister’s Gold Medal in 1989
* Andhra Pradesh Mukyamantri Shourya Padakam in 1990.
* Karnataka Chief Minister’s Gold Medal for the 2nd time in 1991.
* The Police Medal for Gallantry in 1991.
* President’s Police Medal for Meritorious service in 1995.
* President’s Police Medal for Distinguished Service in 2003.
* First Bar to the Police Medal for Gallantry in 2011.

click me!