ಪರಿಶೀಲನೆಗಾಗಿ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಿ: ಮುರುಘಾ ಶ್ರೀ

By Suvarna News  |  First Published Jun 2, 2022, 11:14 PM IST

ಪಠ್ಯಪುಸ್ತಕ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು,  ಮೊದಲು ಪಠ್ಯಪುಸ್ತಕಗಳನ್ನು ಪರಿಶೀಲನೆಗಾಗಿ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ.


ಚಿತ್ರದುರ್ಗ (ಜೂ.2): ಕರ್ನಾಟಕ ಪಠ್ಯಪುಸ್ತಕ ಪರಿಶೀಲನಾ ಸಮಿತಿ (textbook revision committee) ಸಿದ್ಧಪಡಿಸಿರುವ ಹೊಸ ಪಠ್ಯಪುಸ್ತಕ ವಿವಾದದ (textbook row) ಬಗ್ಗೆ ಪ್ರತಿಕ್ರಿಯಿಸಿದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ( Dr shivamurthy murugha sharanaru),  ಮೊದಲು ಪಠ್ಯಪುಸ್ತಕಗಳನ್ನು ಪರಿಶೀಲನೆಗಾಗಿ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಶ್ರೀಗಳು, ಪಠ್ಯಪುಸ್ತಕಗಳಲ್ಲಿ ಮಾಡಲಾಗಿರುವ ಬದಲಾವಣೆಗಳ ಬಗ್ಗೆ ಹೇಳಿಕೆಗಳನ್ನು ಆಧರಿಸಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿನ ಪೋಸ್ಟ್ ಗಳ ಆಧಾರದ ಮೇಲೆ ಕಾಮೆಂಟ್ ಮಾಡುವುದು ಸರಿಯಲ್ಲ ಎಂದರು.

Tap to resize

Latest Videos

ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕೇಂದ್ರದಿಂದ PM SHRI SCHOOLS ಸ್ಥಾಪನೆ

ರಾಜ್ಯ ಸರ್ಕಾರ ಪಠ್ಯವನ್ನು ಅಂಗೀಕರಿಸಿ ಬಿಡುಗಡೆ ಮಾಡಿದ ನಂತರ ನಮಗೆ ಪ್ರತಿಕ್ರಿಯಿಸಲು ಸಾಕಷ್ಟು ಸಮಯವಿದೆ, ಆದರೆ ಈ ಪ್ರಕರಣದಲ್ಲಿ ಪಠ್ಯದ ಜ್ಞಾನವಿಲ್ಲದೆ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಇದೇ ವೇಳೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಪಠ್ಯಪುಸ್ತಕ ಸಮಸ್ಯೆ ಶೀಘ್ರ ಬಗೆಹರಿಯಲಿದ್ದು, ಮಕ್ಕಳಿಗೆ ಉತ್ತಮ ಪಠ್ಯಪುಸ್ತಕ ದೊರೆಯಲಿದೆ ಎಂದರು.

Suvarna News Reality Check; ಕೋಟಿ ಹಣ ಬಿಡುಗಡೆಯಾದ್ರೂ ಮಕ್ಕಳಿಗೆ ಕಳಪೆ ಬಿಸಿಯೂಟ! 

ರೋಹಿತ್‌ ಚಕ್ರತೀರ್ಥನ ವಕ್ರಬುದ್ಧಿ ಸರ್ಕಾರ ಸರಿ ಮಾಡಲಿ: ಚಕ್ರತೀರ್ಥನ ವಕ್ರಬುದ್ಧಿಯನ್ನು ಸರ್ಕಾರ ಸರಿ ಮಾಡಬೇಕು ಎಂದು ಮೆಣಸೂರು ಬಸವ ಕೇಂದ್ರದ ಬಸವಯೋಗಿಪ್ರಭು ಸ್ವಾಮೀಜಿ ಆಗ್ರಹಿಸಿದ್ದಾರೆ.

ನಾಡಗೀತೆಗೆ ಅವಮಾನ ಮಾಡಿದ ಚಕ್ರತೀರ್ಥ ಅವರನ್ನು ಪುಸ್ತಕ ಸಮಿತಿಯಿಂದ ವಜಾ ಮಾಡಬೇಕು. ಕನ್ನಡ ಬಾವುಟವನ್ನು ಅವಮಾನಿಸುವ ನಾಡದ್ರೋಹಿಯನ್ನು ಪುಸ್ತಕ ಸಮಿತಿಯೊಳಗೆ ಇರಲು ಬಿಡಬಾರದು. ಆ ಸಮಿತಿಗೆ ಅವರು ಯೋಗ್ಯನಿಲ್ಲ ಎಂದಿದ್ದಾರೆ.

ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವಣ್ಣನವರು ಉಪನಯನ ಮಾಡಿಕೊಂಡು ಶೈವ ಗುರುವಿನಿಂದ ಲಿಂಗದೀಕ್ಷೆ ಪಡೆದರೆಂಬ ಸುಳ್ಳನ್ನು ಹೇಳುವುದರ ಮೂಲಕ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶಗಳನ್ನು ರವಾನಿಸಿದ್ದಾರೆ. ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ ನೈಜ ವಿಚಾರಗಳನ್ನು ಮರೆಮಾಚುವ ಪುರೋಹಿತಶಾಹಿ ಸಮಿತಿಯನ್ನು ಕೈ ಬಿಡಬೇಕು ಎಂದು ಶ್ರೀಗಳು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಬೆಂಗಳೂರು ಈಗ UPSC ಹಬ್ ಆಗಿದೆ; ರಾಜ್ಯದ ಟಾಪರ್ ಅವಿನಾಶ್

ಇನ್ನು ಲಿಂಗಾಯತ ಧರ್ಮ ಗುರು ಬಸವಣ್ಣನವರ ಬಗ್ಗೆ ಪಠ್ಯದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಮಠಾಧಿಪತಿಗಳು ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಭಾಲ್ಕಿಯ ಡಾ.ಬಸವಲಿಂಗ ಸ್ವಾಮೀಜಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರನ್ನು ಕುರಿತ ಪಾಠದಲ್ಲಿ ಕೆಲ ಬದಲಾವಣೆ ಮಾಡಿ ಪ್ರಕಟಿಸಿರುವುದು ಕುಚೋದ್ಯದ ಸಂಗತಿಯಾಗಿದೆ. ಈ ಅನೈತಿಕ ತಪ್ಪುಗಳನ್ನು ಸರಿಪಡಿಸಿ ಪ್ರಕಟಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಉಪನಯನದ ನಂತರ ಬಸವಣ್ಣ ಕೂಡಲ ಸಂಗಮಕ್ಕೆ ನಡೆದರು ಎಂದು ಬರೆಯಲಾಗಿದೆ. ಇದು ತಪ್ಪು. ತಮ್ಮ ಸಹೋದರಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿ ಕೂಡಲ ಸಂಗಮಕ್ಕೆ ಹೋಗಿದ್ದು ಇದು ಐತಿಹಾಸಿಕ ಸಂಗತಿಯಾಗಿದೆ. ಶೈವ ಗುರುಗಳ ಸಾನಿಧ್ಯದಲ್ಲಿ ಬಸವಣ್ಣ ಲಿಂಗ ದೀಕ್ಷೆ ಪಡೆದರು ಎಂದಿದೆ. ಇದು ಸರಿಯಲ್ಲ. ಶೈವ ಗುರುಗಳು ಗುಡಿ-ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧಕರು. ಇವರು ಹೇಗೆ ಲಿಂಗ ದೀಕ್ಷೆ ಕೊಡುತ್ತಾರೆ? ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದ್ದು ಎಂದು ವಿವರಿಸಿದ್ದಾರೆ.

click me!