PUC Textbook Revision ಕೈಬಿಟ್ಟಿಲ್ಲ ಮುಂದೂಡಿದ್ದೇವೆ: ಕೋಟ ಶ್ರೀನಿವಾಸ ಪೂಜಾರಿ

By Suvarna News  |  First Published Jun 7, 2022, 9:57 PM IST

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪಿಯು ಪಠ್ಯಪುಸ್ತಕ ಪರಿಷ್ಕರಣೆ ಕೈಬಿಟ್ಟಿಲ್ಲ ಮುಂದೂಡಿದ್ದೇವೆ ಎಂದಿದ್ದಾರೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜೂ.7): ಪಿಯು ಪಠ್ಯಪುಸ್ತಕ ಪರಿಷ್ಕರಣೆ (PUC Textbook Revision) ಕೈಬಿಟ್ಟಿಲ್ಲ ಮುಂದೂಡಿದ್ದೇವೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary ) ಹೇಳಿದ್ದಾರೆ. ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಸದ್ಯಕ್ಕೆ ಪಿಯು ಪಠ್ಯ ಪರಿಷ್ಕರಣೆಯನ್ನು ಮುಂದೂಡಿದ್ದೇವೆ  ಅಷ್ಟೇ! ಜನತೆಗೆ ಮನವರಿಕೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಪಠ್ಯ ಪುಸ್ತಕದ ಮೂಲಕ ಮಕ್ಕಳಿಗೆ ದೇಶಪ್ರೇಮ ಕಲಿಸುತ್ತೇವೆ‌.ರಾಷ್ಟ್ರಪ್ರೇಮ ಬೆಳೆಸುವ ಪಠ್ಯಪುಸ್ತಕ ತಯಾರಿ ನಮ್ಮ ಜವಾಬ್ದಾರಿ. ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿದರೆ ಏನು ತಪ್ಪು? ಎಂದು ಪ್ರಶ್ನಿಸಿದ್ದಾರೆ. 

Tap to resize

Latest Videos

ಟೀಕೆಗಳು ಬಂದಂತಹ ಸಂದರ್ಭದಲ್ಲಿ ಪರಿಶೀಲನೆ ಮಾಡುತ್ತೇವೆ. ಯಾರು ಕೂಡ ಸರ್ವಾಧಿಕಾರಿಗಳ ಆಗಲು ಸಾಧ್ಯವಿಲ್ಲ.ನಿಮ್ಮ ಟೀಕೆಯಲ್ಲಿ ನ್ಯಾಯ ವಿದ್ದರೆ ನಾವು ಸರಿಪಡಿಸುತ್ತೇವೆ.ಪಠ್ಯಪುಸ್ತಕದ ಭೂತ ಕಾಂಗ್ರೆಸ್ನ ಸೃಷ್ಟಿ  ಎಂದು ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ 72 ನೇಯ ವಾರ್ಷಿಕ ಘಟಿಕೋತ್ಸವ

ಸಿದ್ದರಾಮಯ್ಯನ ದೊಡ್ಡ ವ್ಯಕ್ತಿತ್ವಕ್ಕೆ ದೊಡ್ಡ ಸ್ಥಾನಕ್ಕೆ ಇವೆಲ್ಲಾ ಶೋಭೆ ತರಲ್ಲ: ಪಠ್ಯಪುಸ್ತಕ ಕೈಬಿಡಲು ಸಿಎಂ ಗೆ  ಮನವಿ ಮಾಡಿರುವ ಸಿದ್ದರಾಮಯ್ಯ ಕುರಿತು ಪ್ರತಿಕ್ರಿಯೆ ನೀಡಿರುವ ಕೋಟ ಶ್ರೀನಿವಾಸ ಪೂಜಾರಿ, ಸಿದ್ದರಾಮಯ್ಯನ ದೊಡ್ಡ ವ್ಯಕ್ತಿತ್ವಕ್ಕೆ ದೊಡ್ಡ ಸ್ಥಾನಕ್ಕೆ ಇವೆಲ್ಲಾ ಶೋಭೆ ತರಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಠ್ಯಪುಸ್ತಕ (Textbook) ಪರಿಷ್ಕರಣೆ ವಿಚಾರದಲ್ಲಿ ಸುಳ್ಳಿನ ಮೇಲೆ ಕುಳಿತು ಸವಾರಿ ಮಾಡುತ್ತಿದೆ. ಪರಿಷ್ಕರಣೆ ಮತ್ತು ಬದಲಾವಣೆಯ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಆಹ್ವಾನ ನೀಡಿದರು. ಪಠ್ಯದ ಮೂಲಕ ರಾಷ್ಟ್ರಪ್ರೇಮವನ್ನು ತುಂಬಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು.

ನಿಮ್ಮ ಸೈಕಲ್ ಜೊತೆಗೆ ಮೆಟ್ರೋ ಪ್ರಯಾಣ ಮಾಡಲು BMRCL ಅವಕಾಶ

ಈ ಹಂತದಲ್ಲೇ ಕಾಂಗ್ರೆಸ್ ಅಪಪ್ರಚಾರವನ್ನು ಶುರುಮಾಡಿದೆ. ಈ ಹಿಂದೆ ಪ್ರಶಸ್ತಿ ವಾಪ್ಸಿ ಎಂಬ ಅಭಿಯಾನವನ್ನು ಶುರುಮಾಡಿದರು.ಆದರೆ ಯಾರು ಕೂಡ ಪ್ರಶಸ್ತಿ ವಾಪಸ್ ಕೊಟ್ಟಿಲ್ಲ.ಪಠ್ಯವೇ ಇಲ್ಲದವರು ನಮ್ಮ ಪಠ್ಯವನ್ನು ವಾಪಾಸ್ ತೆಗೆಯಿರಿ ಎನ್ನುತ್ತಿದ್ದಾರೆ.

ದೇವನೂರು ಮಹಾದೇವ ಒಳ್ಳೆಯ ಸಾಹಿತಿ ಅವರ ವಿಚಾರ ಬೇಧ ಇರಬಹುದು. ದೇವನೂರು ಬಳಿ ಶಿಕ್ಷಣ ಸಚಿವರು ಹೋಗಿ ಮಾತುಕತೆ ಮಾಡಿದ್ದಾರೆ. ರಾಷ್ಟ್ರಪ್ರೇಮ ತುಂಬಿಸುವ ಕೆಲಸ ಮಾಡುತ್ತಿದ್ದೇವೆ ಎಂದು ದೇವನೂರು ಅವರಿಗೆ ಮನವರಿಕೆ ಮಾಡಲಾಗಿದೆ.

ಎಚ್ಚೆತ್ತ ಸರ್ಕಾರ, PU ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್​ ಚಕ್ರತೀರ್ಥ ಔಟ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಹಿತಿ ಬಳಿ ಒಬ್ಬ ಸಚಿವ ಹೋಗಿದ್ದು ಇದೇ ಮೊದಲು. ಬರಗೂರು, ಚಕ್ರತೀರ್ಥ ಸಮಿತಿ ಪಠ್ಯಗಳ ಸೇರ್ಪಡೆ ಬದಲಾವಣೆ ಪಟ್ಟಿ ಮಾಡುತ್ತಿದ್ದೇವೆ. ರಾಷ್ಟ್ರಪ್ರೇಮ ಹೆಚ್ಚಿಸಲು ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆ.ಇದನ್ನ ರಾಜ್ಯದ ಆರೂವರೆ ಕೋಟಿ ಜನಕ್ಕೆ ಮನವರಿಕೆ ಮಾಡುತ್ತೇವೆ ಎಂದರು.

click me!