PUC Supplementary Examination: ಇಂದಿನಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ

By Girish Goudar  |  First Published Aug 12, 2022, 8:08 AM IST

ರಾಜ್ಯಾದ್ಯಂತ ಒಟ್ಟು 307 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಆ.25ರವರೆಗೆ ನಡೆಯಲಿರುವ ಎಕ್ಸಾಮ್‌ 


ಬೆಂಗಳೂರು(ಆ.12):  ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಆ.12ರ ಶುಕ್ರವಾರದಿಂದ ಆರಂಭಗೊಳ್ಳಲಿವೆ. ರಾಜ್ಯಾದ್ಯಂತ ಒಟ್ಟು 307 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಆ.25ರವರೆಗೆ ನಡೆಯುವ ಪರೀಕ್ಷೆ ಸೂಸೂತ್ರವಾಗಿ ನಡೆಸಲು ಅಗತ್ಯ ಸಿದ್ದತೆ ಹಾಗೂ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಪೂರಕ ಪರೀಕ್ಷೆಗೆ ಕಳೆದ ಏಪ್ರಿಲ್‌/ಮೇನಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ, ಇತರೆ ವರ್ಷಗಳ ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 1,85,449 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಈಗಾಗಲೇ ಆಯಾ ಕಾಲೇಜುಗಳಲ್ಲಿ ಪರೀಕ್ಷಾ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಶುಕ್ರವಾರ ಮೊದಲ ದಿನ ಪ್ರಥಮ ಭಾಷೆ ಕನ್ನಡ ಮತ್ತು ಅರೇಬಿಕ್‌ ಭಾಷಾ ಪರೀಕ್ಷೆ ನಡೆಯಲಿವೆ.

Tap to resize

Latest Videos

Teachers Recruitment; ಮಾಸಾಂತ್ಯಕ್ಕೆ 15000 ಶಿಕ್ಷಕರ ಪರೀಕ್ಷೆ ರಿಸಲ್ಟ್‌

ಮುಖ್ಯ ಪರೀಕ್ಷೆ ನಡೆಸಿದ ಮಾದರಿಯಲ್ಲಿಯೇ ಪೂರಕ ಪರೀಕ್ಷೆಗೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಪ್ರತಿ ಕೇಂದ್ರಕ್ಕೆ ಒಬ್ಬ ಜಂಟಿ ಮುಖ್ಯಸ್ಥ, ಸಿಟ್ಟಿಂಗ್‌, ಸಿಟ್ಟಿಂಗ್‌ ಸ್ಕ್ವಾಡ್‌, 64 ಸಂಚಾರಿ ಸ್ಕ್ವಾಡ್‌ ಸೇರಿದಂತೆ ಒಟ್ಟು 678 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪಿಯು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!