ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು, ಪರೀಕ್ಷಾ ಫಲಿಶಾಂಶವನ್ನು ವಿದ್ಯಾರ್ಥಿಗಳ ವಾಟ್ಸಾಪ್‌ಗೆ ನೇರವಾಗಿ ಕಳುಹಿಸುವ ಯೋಜನೆ ರೂಪಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಖುಷಿಯಾಗಿದೆ.
ಮೈಸೂರು (ಆ.11): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು, ಪರೀಕ್ಷಾ ಫಲಿಶಾಂಶವನ್ನು ವಿದ್ಯಾರ್ಥಿಗಳ ವಾಟ್ಸಾಪ್‌ಗೆ ನೇರವಾಗಿ ಕಳುಹಿಸುವ ಯೋಜನೆ ರೂಪಿಸಿದೆ. ಸಾಮಾನ್ಯವಾಗಿ ಪರೀಕ್ಷಾ ಫಲಿತಾಂಶವನ್ನೂ ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಅಥವಾ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ವಾಡಿಕೆ. ಆದರೆ, ಕರಾಮುವಿವಿ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶದ ಶೀಚ್ ಕಳುಹಿಸಲು ಕ್ರಮ ಕೈಗೊಂಡಿದೆ. ಇದು ವಿದ್ಯಾರ್ಥಿಗಳ ಸಮೂಹದಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದು, ಕರಾಮುವಿವಿ ನೂತನ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ. ಮದುವೆ ಕರೆಯೋಲೆಯಿಂದ ಹಿಡಿದು ಕಚೇರಿಯ ಪ್ರಮುಖ ಮಾಹಿತಿ ವಾಟ್ಸಾಪ್‌ನಲ್ಲೇ ಹಂಚಿಕೆ ಆಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಪರೀಕ್ಷೆ ಫಲಿತಾಂಶ ಕೂಡ ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪುವಂತೆ ಮಾಡಲು ಮುಕ್ತ ವಿವಿ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ವಿಧಾನ ಅಳವಡಿಸಿಕೊಳ್ಳುತ್ತಿದೆ. ವಾಟ್ಸಪ್‌ನಲ್ಲಿ ಫಲಿತಾಂಶ ನೀಡಲು ಕಾರಣ ಕರಾಮುವಿವಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಈ ಮೊದಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿತ್ತು. ಅಲ್ಲದೆ, ವಿದ್ಯಾರ್ಥಿಗಳ ಮೇಲ್ ಐಡಿಗೂ ರಿಸಲ್ಟ್ ಶೀಚ್ ಕಳುಹಿಸುತ್ತಿತ್ತು.
ಆದರೆ, ಮುಕ್ತ ವಿವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳ ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಬಹುತೇಕರು ಉದ್ಯೋಗದಲ್ಲಿರುವ ಕಾರಣ ಅವರಿಗೆ ಸಕಾಲದಲ್ಲಿ ಮೇಲ್ ಚೆಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ತಾಂತ್ರಿಕ ಕಾರಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಫಲಿತಾಂಶವೂ ಲಭ್ಯವಾಗುತ್ತಿರಲಿಲ್ಲ. ಇವನ್ನೆಲ್ಲಾ ಮನಗಂಡ ವಿವಿ ವಿದ್ಯಾರ್ಥಿಗಳ ವಾಟ್ಸಾಪ್‌ಗೆ ನೇರವಾಗಿ ಫಲಿತಾಂಶ ನೀಡಲು ಮುಂದಾಗಿದೆ.
ಯುವಿಸಿಇ ಮೊದಲ ಆಡಳಿತ ಮಂಡಳಿಗೆ, ಅಧ್ಯಕ್ಷರಾಗಿ ಮುತ್ತುರಾಮನ್ ನೇಮಕ: ಬೆಂಗಳೂರಿನ ‘ಯೂನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್’ (ಯುವಿಸಿಇ) ಸ್ವಾಯತ್ತ ವಿಶ್ವ ವಿದ್ಯಾಲಯದ ಮೊದಲ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಟಾಟಾ ಇಂಟನ್ಯಾಷನಲ್ ಮತ್ತು ಟಾಟಾ ಸ್ಟೀಲ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಡಾ. ಬಿ.ಮುತ್ತುರಾಮನ್ ನಾಮ ನಿರ್ದೇಶನಗೊಂಡಿದ್ದಾರೆ.
BSF HEAD CONSTABLE RECRUITMENT; ಒಟ್ಟು 1,312 ಹುದ್ದೆಗಳಿಗೆ ಶೀಘ್ರ ನೇಮಕಾತಿ
‘ಯೂವಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್’ಅನ್ನು (ಯುವಿಸಿಇ) ಪ್ರತ್ಯೇಕ ಕಾಯ್ದೆ ಜಾರಿ ಮೂಲಕ ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಿರುವ ಸರ್ಕಾರ, ಕಾಯ್ದೆಯ ನಿಯಮಗಳ ಅನುಸಾರ ಆಡಳಿತ ಮಂಡಳಿ ರಚನೆಗೆ ಹೆಜ್ಜೆ ಇಟ್ಟಿದೆ. ಮೊದಲ ಹಂತವಾಗಿ ಮುತ್ತುರಾಮನ್ ಅವರನ್ನು ಸರ್ಕಾರದ ಶಿಫಾರಸಿನ ಮೇರೆಗೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಮಂಡಳಿಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಬುಧವಾರ ಆದೇಶ ಮಾಡಿದ್ದಾರೆ.
Teachers Recruitment; ಮಾಸಾಂತ್ಯಕ್ಕೆ 15000 ಶಿಕ್ಷಕರ ಪರೀಕ್ಷೆ ರಿಸಲ್ಟ್
ಶತಮಾನಗಳ ಹಳೆಯ ಶಿಕ್ಷಣ ಸಂಸ್ಥೆಯಾದ ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಇದನ್ನು ಪ್ರತ್ಯೇಕ ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಲು ತೀರ್ಮಾನಿಸಿತ್ತು. ಈ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ರಚಿಸಿದ್ದ ಡಾ ಎಸ್.ಸಡಗೋಪಾಲನ್ ಅವರ ನೇತೃತ್ವದಲ್ಲಿ ಸಮಿತಿ ನೀಡಿದ ವರದಿ ಆಧರಿಸಿ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ವಿಧೇಯಕ-2022 ಅನ್ನು ಕಳೆದ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದಿತ್ತು. ರಾಜ್ಯಪಾಲರ ಅಂಕಿತದೊಂದಿಗೆ ಕಳೆದ ಮಾಚ್‌ರ್‍ನಿಂದ ಕಾಯ್ದೆಯಾಗಿ ಜಾರಿಯಾಗಿತ್ತು. ಬುಧವಾರ ಮುತ್ತುರಾಜನ್ ಅವರು ಅಧಿಕಾರ ವಹಿಸಿಕೊಂಡರು.