SSLC, PUC ರಿಪೀಟರ್ಸ್‌ಗೆ ನಡೆಯಲಿದೆ ಪರೀಕ್ಷೆ : ಮುಹೂರ್ತ ಫಿಕ್ಸ್?

By Suvarna NewsFirst Published Jun 6, 2021, 3:57 PM IST
Highlights
  • ಕೊರೋನಾ ನಡುವೆಯೇ SSLC, PUC ರಿಪೀಟರ್ಸ್ ಗಳಿಗೆ ಪರೀಕ್ಷೆ 
  •  ದ್ವಿತೀಯ ಪಿಯು ಫ್ರೆಶರ್ಸ್ ಗೊಂದು ನ್ಯಾಯ, ರಿಪೀಟರ್ಸ್ ಗೆ ಒಂದು ನ್ಯಾಯ
  • ಜುಲೈ ಕೊನೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಪುನರಾವರ್ತಿತರಿಗೆ ಪರೀಕ್ಷೆ

ಬೆಂಗಳೂರು (ಜೂ.06):  ಕೊರೋನಾ ನಡುವೆಯೇ SSLC, PUC ರಿಪೀಟರ್ಸ್ ಗಳಿಗೆ ಪರೀಕ್ಷೆ ನಡೆಸಲು  ನಿರ್ಧರಿಸಲಾಗಿದೆ. ಇದರಿಂದ ದ್ವಿತೀಯ ಪಿಯು ಫ್ರೆಶರ್ಸ್ ಗೊಂದು ನ್ಯಾಯ, ರಿಪೀಟರ್ಸ್ ಗೆ ಒಂದು ನ್ಯಾಯ ಎನ್ನುವಂತಾಗಿದೆ.

ದ್ವಿತೀಯ ಪಿಯುಸಿ ರಿಪೀಟರ್ಸ್ ಗೆ ಕೊರೋನಾ ನಡುವೆಯೇ  ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು ಇದರಿಂದ ಆತಂಕ ಶುರುವಾಗಿದೆ. ಇದರಿಂದ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯೋಕೆ ಸಿದ್ಧವಾಗುವುದು ಅನಿವಾರ್ಯವಾಗಿದೆ.  ಇದರೊಂದಿಗೆ SSLCರಿಪೀಟರ್ಸ್‌ಗಳು ಪರೀಕ್ಷೆ ಬರೆಯಬೇಕಿದೆ.

ಸಿಇಟಿ ಅಂಕ ಆಧರಿಸಿ ಮೆಡಿಕಲ್, ಎಂಜಿನೀಯರಿಂಗ್ ಸೀಟ್ ಹಂಚಿಕೆ : ಅಶ್ವಥ್ ನಾರಾಯಣ್

ಕೊರೋನಾ 3ನೇ ಅಲೆ ಆಗಸ್ಟ್, ಸೆಪ್ಟೆಂಬರ್ ನಲ್ಲಿ ಮತ್ತೆ ಅಪ್ಪಳಿಸಲಿದೆ ಎಂದು ಎಚ್ಚರಿಕೆ ನೀಡಿದ್ದು,  ಅದರ ನಡುವೆಯೇ ಜುಲೈ ಕೊನೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಪುನರಾವರ್ತಿತ ಪಿಯು ವಿದ್ಯಾರ್ಥಿಗಳಿಗೆ  ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. 

ದ್ವಿತೀಯ ಪಿಯು ಪರೀಕ್ಷೆ ರದ್ದು: ಪೋಷಕರ ಸ್ವಾಗತ, ಖಾಸಗಿ ಶಾಲೆ ಆಕ್ಷೇಪ

93 ಸಾವಿರ ವಿದ್ಯಾರ್ಥಿಗಳು ರಿಪೀಟ್ ಎಕ್ಸಾಂ ಬರೆಯಲಿದ್ದು, ಪಿಯು ಬೋರ್ಡ್ ಅವರ ಜೀವದೊಂದಿಗೆ ಚೆಲ್ಲಾಟವಾಡಲು ಸಜ್ಜಾಗಿದೆ. ಈ ವರ್ಷ 76,387 ಪುನರಾವರ್ತಿತ ಹಾಗೂ 17,477 ಖಾಸಗಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯು ಪರೀಕ್ಷೆಗೆ ನೊಂದಣಿಯಾಗಿದ್ದು, ಇವರಿಗೆಲ್ಲಾ ಈಗಾಗಲೇ ಪರೀಕ್ಷೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. 

ಕೊರೋನಾ ಸೋಂಕು ಹೆಚ್ಚಾದರೆ ಪರೀಕ್ಷೆ ಹೇಗೆ ನಡೆಸಬೇಕು ಎಂದೂ ಕೂಡ ಈಗಾಗಲೇ ಪಿಯು ಬೋರ್ಡ್ ಪ್ಲಾನ್ ಮಾಡಿಕೊಂಡಿದೆ. 

ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದ್ದು, ವಿವಿಧ ಮಾನದಂಡದ ಅಡಿಯಲ್ಲಿ ಅವರನ್ನು ತೇರ್ಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಆದರೆ ರಿಪೀಟರ್ಸ್‌ಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!