ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯರಿಂದ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ ಮನವಿ

By Suvarna News  |  First Published Feb 24, 2022, 8:29 AM IST

ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿನಿಯರು ಫೆಬ್ರವರಿ 28 ರಿಂದ ಆರಂಭವಾಗಲಿರುವ ತಮ್ಮ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ.


ಉಡುಪಿ (ಫೆ.24): ಫೆಬ್ರವರಿ 28 ರಿಂದ ಆರಂಭವಾಗಲಿರುವ ತಮ್ಮ ಪ್ರಾಯೋಗಿಕ ಪರೀಕ್ಷೆಯನ್ನು (practical examination) ಮುಂದೂಡುವಂತೆ ಪದವಿ ಪೂರ್ವ ಶಿಕ್ಷಣ ಮಂಡಳಿಯಲ್ಲಿ (Department Of Pre-University Education Karnataka) ಮನವಿ ಮಾಡುವುದಾಗಿ ಹಿಜಾಬ್ ಪ್ರಕರಣದಲ್ಲಿ (Hijab case) ಹೈಕೋರ್ಟ್ (High court)  ಮೆಟ್ಟಿಲೇರಿರುವ ಉಡುಪಿ (Udupi) ಸರ್ಕಾರಿ ಪಿಯು ಕಾಲೇಜಿನ (Government PU college) ಆರು ವಿದ್ಯಾರ್ಥಿನಿಯರು (Students) ಹೇಳಿದ್ದಾರೆ.

ಹಿಜಾಬ್ ಧರಿಸಿ ತರಗತಿ ಕೊಠಡಿಯೊಳಗೆ ಪ್ರವೇಶ ನಿರಾಕರಿಸಿದ ನಂತರ ಕಳೆದ ಎರಡು ತಿಂಗಳಿನಿಂದ ತರಗತಿಗೆ ಹಾಜರಾಗಿಲ್ಲ.  ಅಧ್ಯಯನ ಮತ್ತು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ನಮಗೆ ಸಮಯದ ಅಗತ್ಯವಿದೆ. ಆದ್ದರಿಂದ ಪ್ರಾಯೋಗಿಕ ಪರೀಕ್ಷೆ ಮುಂದೂಡುವಂತೆ ಮನವಿ ಮಾಡುತ್ತೇವೆ ಎಂದು ಆರು ವಿದ್ಯಾರ್ಥಿನಿಯರ ಪೈಕಿ ಒಬ್ಬರಾದ ಅಲ್ಮಾಸ್ ತಿಳಿಸಿದರು.

Tap to resize

Latest Videos

ಪ್ರಾಯೋಗಿಕ ಪರೀಕ್ಷೆ ಮುಂದೂಡುವಂತೆ ಎಲ್ಲಾ ಆರು ವಿದ್ಯಾರ್ಥಿನಿಯರು ಉಡುಪಿ ಜಿಲ್ಲಾ ಡಿಡಿಪಿಯು ಬಳಿ ಮನವಿ ಮಾಡಿದ್ದೇವೆ. ಪಿಯು ಬೋರ್ಡ್ ಗೆ (PU board) ಮನವಿಯನ್ನು ತಿಳಿಸುವುದಾಗಿ ಜಿಲ್ಲಾ ಡಿಡಿಪಿಯು ಮಾರುತಿ ಹೇಳಿದ್ದಾರೆ. ನಮ್ಮ ಮನವಿಯನ್ನು ಪರಿಗಣಿಸುವ ವಿಶ್ವಾಸವಿದೆ ಎಂದರು. 

10ನೇ ಮತ್ತು 12 ನೇ ತರಗತಿಗಳ ಭೌತಿಕ ಪರೀಕ್ಷೆ ರದ್ದು ಕೋರಿದ್ದ ಅರ್ಜಿ ವಜಾ: SUPREME COURT

ಹಿಜಾಬ್ ವಿವಾದಕ್ಕೆ ರಾಜಕೀಯ ಬಣ್ಣ ಮೆತ್ತುಕೊಂಡ ನಂತರ ತಮ್ಮ ಸಂಪರ್ಕದ ನಂಬರ್, ವಿಳಾಸವನ್ನು ಬಹಿರಂಗಪಡಿಸಲಾಗಿದೆ. ಅಪರಿಚಿತ ನಂಬರ್ ಗಳಿಂದ ಫೋನ್ ಕರೆಗಳು ಬರುತ್ತಿದೆ. ಕೆಲವರು ಅವಾಚ್ಯವಾಗಿ ನಿಂಧಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮತ್ತೋರ್ವ ದೂರುದಾರ ವಿದ್ಯಾರ್ಥಿನಿ ಅಲಿಯಾ ಅಸಾದಿ ಹೇಳಿದ್ದಾರೆ. 

ದೂರುದಾರಲ್ಲಿ ಒಬ್ಬರಾದ ಹಜ್ರಾ ಸೈಫಾ ಸಹೋದರನ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅಸಾಧಿ, ಮಲ್ಫೆಯಲ್ಲಿ ಸೋಮವಾರ ರಾತ್ರಿ ಸೈಫ್ ಮೇಲೆ ಹಲ್ಲೆ ನಡೆಸಲಾಗಿತ್ತು. ಹಜ್ರಾ ಸೈಫಾ ಮಾಧ್ಯಮಗಳೊಂದಿಗೆ ಮಾತನಾಡಲು ಬಂದಿಲ್ಲ ಎಂದು ತಿಳಿಸಿದರು. 

ಹೈಕೋರ್ಟ್ ನಿಂದ ಬರುವ ಅಂತಿಮ ತೀರ್ಪಿಗಾಗಿ ನಾವೆಲ್ಲ ಕಾಯುತ್ತಿದ್ದೇವೆ. ಅಲ್ಲಿಯವರೆಗೂ ಹಿಜಾಬ್ ಧರಿಸದೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವ ಪ್ರಶ್ನೆಯೇ ಇಲ್ಲ. ಇದೇ ಕಾರಣಕ್ಕಾಗಿ ಅಂತಿಮ ತೀರ್ಪು ಬರುವವರೆಗೂ ಪ್ರಾಯೋಗಿಕ ಪರೀಕ್ಷೆ ಮುಂದೂಡುವಂತೆ ಮನವಿ ಮಾಡುತ್ತಿರುವುದಾಗಿ ಅಸಾದಿ ಹೇಳಿದಳು.

Hampi University chancellor: ವಿರೋಧದ ನಡುವೆಯೇ ಹಂಪಿ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸ.ಚಿ.ರಮೇಶ್‌ ಅವಧಿ ವಿಸ್ತರಣೆ 

10ನೇ ಮತ್ತು 12 ನೇ ತರಗತಿಗಳ ಭೌತಿಕ ಪರೀಕ್ಷೆ ರದ್ದು ಕೋರಿದ್ದ ಅರ್ಜಿ ವಜಾ: ಸಿಬಿಎಸ್‌ಸಿ (CBSC) ಮತ್ತು ರಾಜ್ಯಗಳಲ್ಲಿ ಸ್ಥಳೀಯ ಶಿಕ್ಷಣ ಮಂಡಳಿಗಳೂ ನಡೆಸುವ 10, 12 ತರಗತಿಗೆ ಭೌತಿಕ ಪರೀಕ್ಷೆಗಳನ್ನು (Offline Exams) ರದ್ದು ಮಾಡುವಂತೆ ಆದೇಶಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ಬುಧವಾರ ವಜಾ ಮಾಡಿದೆ. ಇಂತಹ ಅರ್ಜಿಗಳ ವಿಚಾರಣೆ ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಲಿದೆ ಎಂದು ನ್ಯಾ ಎ.ಎಂ.ಕಾನ್ವೀಲ್ಕರ್‌, ನ್ಯಾ ದಿನೇಶ್‌ ಮಹೇಶ್ವರಿ ಮತ್ತು ನ್ಯಾ ಸಿ.ಟಿ.ರವಿಕುಮಾರ್‌ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. 

ಇಂತಹ ಅರ್ಜಿಗಳು ಹುಸಿ ಭರವಸೆಯನ್ನು ಮೂಡಿಸುತ್ತವೆ. ಅಷ್ಟೇ ಅಲ್ಲದೇ ಈಗಾಗಲೇ ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳಿಗೆ ಗೊಂದಲ ಉಂಟುಮಾಡುತ್ತದೆ. ಹಾಗಾಗಿ ಸಂಸ್ಥೆಗೆ ಅದರ ಕೆಲಸ ಮಾಡಲು ಬಿಡಬೇಕು ಮತ್ತು ವಿದ್ಯಾರ್ಥಿಗಳು (Students) ಅವರ ಕೆಲಸ ಮಾಡಬೇಕು ಎಂದು ಕೋರ್ಟ್‌ ಹೇಳಿದೆ.

click me!