ಸಿಬಿಎಸ್‌ಸಿ ಮತ್ತು ರಾಜ್ಯಗಳಲ್ಲಿ ಸ್ಥಳೀಯ ಶಿಕ್ಷಣ ಮಂಡಳಿಗಳೂ ನಡೆಸುವ 10, 12 ತರಗತಿಗೆ ಭೌತಿಕ ಪರೀಕ್ಷೆಗಳನ್ನು ರದ್ದು ಮಾಡುವಂತೆ ಆದೇಶಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾ ಮಾಡಿದೆ.
ನವದೆಹಲಿ (ಫೆ.24): ಸಿಬಿಎಸ್‌ಸಿ (CBSC) ಮತ್ತು ರಾಜ್ಯಗಳಲ್ಲಿ ಸ್ಥಳೀಯ ಶಿಕ್ಷಣ ಮಂಡಳಿಗಳೂ ನಡೆಸುವ 10, 12 ತರಗತಿಗೆ ಭೌತಿಕ ಪರೀಕ್ಷೆಗಳನ್ನು (Offline Exams) ರದ್ದು ಮಾಡುವಂತೆ ಆದೇಶಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಬುಧವಾರ ವಜಾ ಮಾಡಿದೆ. ಇಂತಹ ಅರ್ಜಿಗಳ ವಿಚಾರಣೆ ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಲಿದೆ ಎಂದು ನ್ಯಾ ಎ.ಎಂ.ಕಾನ್ವೀಲ್ಕರ್, ನ್ಯಾ ದಿನೇಶ್ ಮಹೇಶ್ವರಿ ಮತ್ತು ನ್ಯಾ ಸಿ.ಟಿ.ರವಿಕುಮಾರ್ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಇಂತಹ ಅರ್ಜಿಗಳು ಹುಸಿ ಭರವಸೆಯನ್ನು ಮೂಡಿಸುತ್ತವೆ. ಅಷ್ಟೇ ಅಲ್ಲದೇ ಈಗಾಗಲೇ ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳಿಗೆ ಗೊಂದಲ ಉಂಟುಮಾಡುತ್ತದೆ. ಹಾಗಾಗಿ ಸಂಸ್ಥೆಗೆ ಅದರ ಕೆಲಸ ಮಾಡಲು ಬಿಡಬೇಕು ಮತ್ತು ವಿದ್ಯಾರ್ಥಿಗಳು (Students) ಅವರ ಕೆಲಸ ಮಾಡಬೇಕು ಎಂದು ಕೋರ್ಟ್ ಹೇಳಿದೆ.
ಅಸ್ತಿತ್ವದಲ್ಲಿಲ್ಲದ ನರ್ಸಿಂಗ್ ಕಾಲೇಜಿಗೆ ಸೀಟು ಹಂಚಿದ ರಾಜ್ಯ ನರ್ಸಿಂಗ್ ಡಿಪ್ಲೊಮಾ ಪರೀಕ್ಷಾ ಮಂಡಳಿ!
10, 12ನೇ ತರಗತಿ ವಿದ್ಯಾರ್ಥಿಗಳಿಗೆ ಕೇರಳದಲ್ಲಿ ವಿನೂತನ ಆಡಿಯೊ ಬುಕ್: ಕಳೆದೆರಡು ವರ್ಷಗಳಿಂದ ಸರಿಯಾಗಿ ಪಾಠ- ತರಗತಿಗಳಿಲ್ಲದೇ, ಮಕ್ಕಳ ಶಿಕ್ಷಣ ಡೋಲಾಯಮಾನ ಆಗ್ಬಿಟ್ಟಿದೆ. ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟಗಳಾಗಿರುವ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನ ಕ್ರಮಬದ್ಧವಾಗಿ ನಡೆಸೋದು ಸಾಧ್ಯವಾಗಲಿಲ್ಲ. ಕೋವಿಡ್ ಪರಿಸ್ಥಿತಿಯಿಂದಾಗಿ ಎಲ್ಲವೂ ಅಯೋಮಯವಾಗಿತ್ತು. ಮಕ್ಕಳು ಆನ್ ಲೈನ್ ಶಿಕ್ಷಣವನ್ನೇ ನೆಚ್ಚಿಕೊಂಡು ಹೇಗೋ ಎರಡು ವರ್ಷ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದಾಯ್ತು.
ಇದೀಗ ಕೋವಿಡ್ ಸೋಂಕಿನ ಅಬ್ಬರ ಕಮ್ಮಿಯಾಗುತ್ತಿದ್ದಂತೆ, ವಿದ್ಯಾರ್ಥಿ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದ್ರೆ ವಾರ್ಷಿಕ ಪರೀಕ್ಷೆಗಳು ಸಮೀಪದಲ್ಲೇ ಇರೋದ್ರಿಂದ ವಿದ್ಯಾರ್ಥಿಗಳನ್ನು ತ್ವರಿತವಾಗಿ ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಕೇರಳ ಸರ್ಕಾರ (Keral Government) ದಿಟ್ಟ ಹೆಜ್ಜೆ ಇಟ್ಟಿದೆ. ಕೇರಳ ಶಿಕ್ಷಣ ಇಲಾಖೆಯು 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿ (Students)ಗಳಿಗೆ ಸಹಾಯ ಆಗುವಂತೆ ಆಡಿಯೋ ಬುಕ್ (Audio Book) ಗಳನ್ನು ಬಿಡುಗಡೆ ಮಾಡಿದೆ. ಪಠ್ಯಕ್ರಮವನ್ನು ಪರಿಷ್ಕರಿಸಲು ನೆರವಾಗುವಂತೆ ಆಡಿಯೋ ಬುಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.
50ನೇ ವಯಸ್ಸಿನಲ್ಲಿ ಮೆಡಿಕಲ್ ಓದಬೇಕೆಂದು ಕೋರ್ಟ್‌ಗೆ ಮೊರೆ ಹೋದ!
ಕೇರಳ ಇನ್‌ಫ್ರಾಸ್ಟ್ರಕ್ಚರ್ ಅಂಡ್ ಟೆಕ್ನಾಲಜಿ ಫಾರ್ ಎಜುಕೇಶನ್ (Kerala Infrastructure and Technology for Education - KITE) ನಿಂದ ಫಸ್ಟ್ ಬೆಲ್ ಪೋರ್ಟಲ್ (www.firstbell.kite.kerala.gov.in) ನಲ್ಲಿ ಅಭಿವೃದ್ಧಿಪಡಿಸಿದ ಮತ್ತು ಲಭ್ಯವಾಗುವಂತೆ ಆಡಿಯೋ ಪುಸ್ತಕಗಳನ್ನು ಎಲ್ಲಾ ವಿಷಯಗಳ ಪರಿಷ್ಕರಣೆ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. KITE VICTERS ಚಾನೆಲ್ ಮೂಲಕ ಪ್ರಸಾರವಾಗುತ್ತಿರುವ ಫಸ್ಟ್ ಬೆಲ್ ಡಿಜಿಟಲ್ ತರಗತಿಗಳ ಮುಂದುವರಿದ ಭಾಗವಾಗಿ, ಕೇರಳ ಶಿಕ್ಷಣ ಇಲಾಖೆಯು 10 ಮತ್ತು 12 ನೇ ತರಗತಿಗಳಿಗೆ 'ಆಡಿಯೋ ಪುಸ್ತಕಗಳನ್ನು' ಬಿಡುಗಡೆ ಮಾಡಿದೆ.
ಆಡಿಯೋ ಬುಕ್‌ಗಳಲ್ಲಿನ ಎಲ್ಲಾ ಪರಿಷ್ಕರಣೆ ತರಗತಿಗಳು, ಫಸ್ಟ್ ಬೆಲ್ ಪೋರ್ಟಲ್‌ನಲ್ಲಿ ಲಭ್ಯವಿವೆ. ರೇಡಿಯೊ ಕಾರ್ಯಕ್ರಮವನ್ನು ಆಲಿಸುವ ರೀತಿಯಲ್ಲಿ ಆನಂದಿಸಬಹುದಾದ ರೀತಿಯಲ್ಲಿ ಕೇಳಲಾಗುತ್ತದೆ. ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದೆ ಮತ್ತು MP3 ಸ್ವರೂಪದಲ್ಲಿ ಹಂಚಿಕೊಳ್ಳಬಹುದಾಗಿದೆ. 10 ಮತ್ತು 12 ನೇ ತರಗತಿಗಳ ವಾರ್ಷಿಕ ಪರೀಕ್ಷೆಗಳಿಗೆ ಕೆಲವೇ ವಾರಗಳು ಬಾಕಿ ಇರೋವಾಗ, ಪರಿಷ್ಕೃತ ಭಾಗಗಳ ಆಡಿಯೊಬುಕ್‌ಗಳನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಎಲ್ಲಾ ವಿಷಯಗಳನ್ನು 10 ಗಂಟೆಗಳಲ್ಲಿ ಪರಿಷ್ಕರಿಸುವ ರೀತಿಯಲ್ಲಿ ಆಡಿಯೋಬುಕ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂಬುದ ಕೈಟ್ ಅಂಬೋಣವಾಗಿದೆ.