ಕಲೆ, ವಾಸ್ತುಶಿಲ್ಪ, ಮಹಾಕಾವ್ಯ, ವೇದಗಳ Online Course!

By Suvarna News  |  First Published Feb 23, 2022, 6:10 PM IST

* ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ  ಸಾಂಪ್ರದಾಯಿಕ ಕೋರ್ಸುಗಳನ್ನು ಆರಂಭಿಸಲಿರುವ ಐಸಿಸಿಐರ್
* ಏಪ್ರಿಲ್ 2ರಂದು ಭಾರತೀಯ ಜ್ಞಾನಕ್ಕೆ ಮೀಸಲಾದ ಪೋರ್ಟಲ್ ಕೂಡ ಆರಂಭ
* ಒಂದು ಕೋರ್ಸ್ ಪೂರ್ಣಗೊಳಿಸಿ, ಇನ್ನೊಂದಕ್ಕೆ ಸೇರಿಕೊಳ್ಳುವ ಅವಕಾಶವೂ ಇದೆ.


ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (Indian Council for Cultural Relations- ICCR) ಶೀಘ್ರದಲ್ಲೇ ಸಾಂಪ್ರದಾಯಿಕ ಕೋರ್ಸ್‌ಗಳನ್ನು ಪ್ರಾರಂಭಿಸಲಿದೆ. ಕಲೆ, ವಾಸ್ತುಶಿಲ್ಪ, ಮಹಾಕಾವ್ಯಗಳು ಮತ್ತು ವೇದಗಳ ಬಗ್ಗೆ ಆನ್‌ಲೈನ್ ಕೋರ್ಸ್‌ಗಳನ್ನು ಶುರು ಮಾಡಲಿದೆ.  ಈಗಾಗಲೇ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ICCR) ಆನ್‌ಲೈನ್ ಕೋರ್ಸ್ (Online Course) ಮತ್ತು ಸಾಂಪ್ರದಾಯಿಕ ಭಾರತೀಯ ಜ್ಞಾನಕ್ಕೆ ಮೀಸಲಾದ ಪೋರ್ಟಲ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಏಪ್ರಿಲ್ 2, 2022 ರಂದು ಈ ಪೋರ್ಟಲ್ ಪ್ರಾರಂಭಿಸೋದಾಗಿ ಐಸಿಸಿಆರ್ ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಹೇಳಿದ್ದಾರೆ. ಕಲೆ, ವಾಸ್ತುಶಿಲ್ಪ, ಮಹಾಕಾವ್ಯಗಳು ಮತ್ತು ವೇದಗಳು ಕುರಿತಂತೆ ಈ ಆನ್‌ಲೈನ್ ಕೋರ್ಸ್‌ಗಳು ಇರುತ್ತವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) 'ಆಜಾದಿ ಕಾ ಅಮೃತ್ ಮಹೋತ್ಸವ' ಅಡಿಯಲ್ಲಿ ವೈವಿಧ್ಯಮಯ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಲು ಯೋಜಿಸಿದೆ. ಈ ಪೋರ್ಟಲ್ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಆನ್‌ಲೈನ್‌ ಮೂಲಕ ನೋಂದಣಿಯಾಗಿ ಈ ಕೋರ್ಸ್‌ಗಳಿಗೆ ದಾಖಲಾಗಬಹುದು. ಒಂದು ಕೋರ್ಸ್ ಪೂರ್ಣಗೊಳಿಸಿ, ಇನ್ನೊಂದಕ್ಕೆ ಸೇರಿಕೊಳ್ಳುವ ಅವಕಾಶವನ್ನು ಒದಗಿಸಲಾಗುತ್ತದೆ. 

'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಯ ಭಾಗವಾಗಿ, ಭಾರತದಲ್ಲಿ 'ಗುರುಗಳಿಂದ' ಸಂಗೀತ ಅಥವಾ ಸಂಗೀತ ವಾದ್ಯಗಳನ್ನು ಕಲಿತು ತಮ್ಮ ಕಲಿಕೆಯನ್ನು ಪೂರ್ಣಗೊಳಿಸಿದ ವಿದೇಶಿ ವಿದ್ಯಾರ್ಥಿಗಳಿಗೆ ಐಸಿಸಿಆರ್ 'ಭಾರತೀಯ ಹಳೆಯ ವಿದ್ಯಾರ್ಥಿಗಳ ಐ-ಕಾರ್ಡ್' ಅನ್ನು ಸಹ ನೀಡುತ್ತ ಎಂದು ರಾಜ್ಯ ಸಭಾ ಸದಸ್ಯರು ತಿಳಿಸಿದ್ದಾರೆ. 

Tap to resize

Latest Videos

50 Year Old Seeks MBBS Course: 50ನೇ ವಯಸ್ಸಿನಲ್ಲಿ ಮೆಡಿಕಲ್ ಓದಬೇಕೆಂದು ಕೋರ್ಟ್‌ಗೆ ಮೊರೆ ಹೋದ!

COVID-19 ಅಬ್ಬರವು,  ಆನ್ ಲೈನ್ ಕೋರ್ಸ್ ಆರಂಭಿಸುವ ವೇಳಾಪಟ್ಟಿಯ ಮೇಲೆ ಭಾರೀ ಪರಿಣಾಮ ಬೀರಿತು. ಆದರೆ ಏಪ್ರಿಲ್ ಆರಂಭದ ವೇಳೆಗೆ, ಪರಿಸ್ಥಿತಿಯು ಉತ್ತಮವಾಗಿರುತ್ತದೆ. ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಗುರುತಿಸಲು ನಡೆಯುತ್ತಿರುವ ಆಚರಣೆಗಳ ಸಂದರ್ಭದಲ್ಲಿ, ನಾವು ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆ ಅಥವಾ UTIKS ನ ಯೂನಿವರ್ಸಲೈಸೇಶನ್ ಅನ್ನು ಪ್ರಾರಂಭಿಸಲಿದ್ದೇವೆ, ಇದರ ಭಾಗವಾಗಿ ವಿದೇಶಿ ದೇಶಗಳಲ್ಲಿ ವಾಸಿಸುವ ಜನರು ಆನ್‌ಲೈನ್ ಮೂಲಕ ನಮ್ಮ ದೇಶದ ಸಾಂಪ್ರದಾಯಿಕ ಜ್ಞಾನವನ್ನು ಕಲಿಯಲು ಸಾಧ್ಯವಾಗುತ್ತದೆ. ನಮ್ಮ ಕಲೆ, ಸಂಸ್ಕೃತಿ ಮತ್ತು ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳನ್ನು ಪ್ರಶಂಸಿಸುತ್ತೇವೆ ಎಂದು ರಾಜ್ಯಸಭಾ ಸದಸ್ಯ ಸಹಸ್ರಬುದ್ಧೆ ಹೇಳಿದ್ದಾರೆ. ಇದು  ಸಾಂಪ್ರದಾಯಿಕ  ಭಾರತೀಯ ಜ್ಞಾನದ ಮೇಲೆ edX ಅಥವಾ Coursera ನಡೆಸುವ ನಮ್ಮದೇ ಆದ ಮಾರ್ಗವಾಗಿದೆ.

ಭಾರತೀಯ ಸಂಸ್ಕೃತಿಯ ಬಗ್ಗೆ ಕುರಿತಂತೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಆನ್‌ಲೈನ್ ಕೋರ್ಸ್‌ಗಳು ಇರುತ್ತವೆ.  ನಾಲ್ಕು ಗಂಟೆಗಳಿಂದ 40 ಗಂಟೆಗಳವರೆಗೆ ಕೋರ್ಸ್ ಅವಧಿ ಒಳಗೊಂಡಿರುತ್ತದೆ. ರಸಗುಲ್ಲಾದ ಪಾಕವಿಧಾನದಿಂದ ಹಿಡಿದು ವಾರ್ಲಿ ಪೇಂಟಿಂಗ್‌ಗಳ ಮೂಲಭೂತ ಅಂಶಗಳು, ಮಧುಬನಿ ಕಲೆ, ಅಜಂತಾ ಮತ್ತು ಎಲ್ಲೋರಾ ಗುಹೆಗಳ ಕಲೆಯನ್ನು ಶ್ಲಾಘಿಸುವುದು, ವೇದಗಳ ಮೂಲಗಳನ್ನು ಅರ್ಥಮಾಡಿಕೊಳ್ಳುವುದು, ರಾಮಾಯಣ ಮತ್ತು ಮಹಾಭಾರತದ ಪರಿಚಯ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ, ಇತರ ವಿಷಯಗಳನ್ನು ಒಳಗೊಂಡ ಆನ್ ಲೈನ್ ಕೋರ್ಸ್ ಗಳು‌ ಇರುತ್ತವೆ ಎನ್ನಲಾಗಿದೆ. 

ಅಂದಹಾಗೆ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ, ಈ ಕಾರ್ಯಕ್ರಮದ ಶೈಕ್ಷಣಿಕ ಪಾಲುದಾರ ಆಗಿದೆ. ಮುಂದೆ ಇತರ ಸಂಸ್ಥೆಗಳು ನಂತರ ಸೇರಬಹುದು. ಈ ಆನ್ ಲೈನ್ ಕೋರ್ಸ್ ಎಲ್ಲರಿಗೂ ಮುಕ್ತವಾಗಿದೆ. ವಯಸ್ಸು ಅಥವಾ ಬೇರೆ ಯಾವುದಕ್ಕೂ ಯಾವುದೇ ನಿರ್ಬಂಧ ಇರುವುದಿಲ್ಲ.

Audio Book From KITE: 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಕೇರಳದಲ್ಲಿ ವಿನೂತನ ಆಡಿಯೊ ಬುಕ್!

ಇನ್ನು ಈ ಟ್ರಡಿಷನಲ್ ಆನ್‌ಲೈನ್ ಕೋರ್ಸ್ ಗಳಿಗೆ ಶುಲ್ಕವೂ ಹೆಚ್ಚು ಇರುವುದಿಲ್ಲ. ಈಗಾಗಲೇ ICCR ಪೋರ್ಟಲ್ ಸಿದ್ಧವಾಗಿದ್ದು,   ಏಪ್ರಿಲ್ 2 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ವಿದೇಶಾಂಗ ಸಚಿವರು ಈ ಪೋರ್ಟಲ್ ಉದ್ಘಾಟಿಸುವ ನಿರೀಕ್ಷೆಯಿದೆ.  ಆನ್‌ಲೈನ್ ಕೋರ್ಸ್‌ಗಳ ಮೂಲಕ ವಿದೇಶಗಳಲ್ಲಿ ವಾಸಿಸುವ ಜನರು  ನಮ್ಮ ದೇಶದ ಸಾಂಪ್ರದಾಯಿಕ ಜ್ಞಾನವನ್ನು ಕಲಿಯಲು ಸಾಧ್ಯವಾಗುತ್ತದೆ.  ನಮ್ಮ ಕಲೆ, ಸಂಸ್ಕೃತಿ ಮತ್ತು ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳನ್ನು ಪ್ರಶಂಸಿಸಲು ಸಾಧ್ಯವಾಗುತ್ತದೆ ಅಂತಾರೆ  ಸಹಸ್ರಬುದ್ಧೆ.

click me!