ಕಲಬುರಗಿ ವಿದ್ಯಾರ್ಥಿನಿಗೆ ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪತ್ರ!

By Ravi Janekal  |  First Published Oct 16, 2023, 5:43 AM IST

ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡು ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡ ಬಾಲಕಿಗೆ ಪ್ರಧಾನಮಂತ್ರಿಗಳಿಂದ ಮೆಚ್ಚುಗೆಯ ಪತ್ರ ಬಂದಿದೆ.


ಅಫಜಲ್ಪುರ (ಅ.16): ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡು ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡ ಬಾಲಕಿಗೆ ಪ್ರಧಾನಮಂತ್ರಿಗಳಿಂದ ಮೆಚ್ಚುಗೆಯ ಪತ್ರ ಬಂದಿದೆ.

ತಾಲೂಕಿನ ಅಳ್ಳಗಿ (ಕೆ) ಗ್ರಾಮದ ಅಸ್ಮಿತಾ ವಿಜಯಕುಮಾರ ಮಾಲಿ ಪಾಟೀಲ ಎಂಬ ವಿದ್ಯಾರ್ಥಿನಿ ಹವಳಗಾ ರೇಣುಕಾ ಶುಗರ್ಸ್ ಡೆವಲಪ್‌ಮೆಂಟ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಏ.20ರಂದು ಪರೀಕ್ಷಾ ಪೇ ಚರ್ಚಾ(pariksha pe charcha) ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ನರೇಂದ್ರ ಮೋದಿ(Narendra modi)ಯವರೊಂದಿಗೆ ಹಂಚಿಕೊಂಡಿದ್ದರು.

Latest Videos

undefined

ಕೆಇಎ ಬಳಿ ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಸರ್‌ಪ್ರೈಸ್‌: ಸಮಸ್ಯೆ ಆಲಿಸಿದ ಸಚಿವ ಎಂ.ಸಿ. ಸುಧಾಕರ್‌

ಹೀಗಾಗಿ ನರೇಂದ್ರ ಮೋದಿಯವರು ಅಸ್ಮಿತಾ ಮಾಲಿಪಾಟೀಲ್ ಗೆ ಪತ್ರ ಬರೆದು ‘ಪರೀಕ್ಷಾ ಪೇ’ ಚರ್ಚಾದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಈ ವಿಷಯದ ಕುರಿತು ನಿಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ ಎಂದೂ ಸಂದೇಶ ಕಳುಹಿಸಿದ್ದಾರೆ.

 

click me!