2023ರಿಂದ ಕರ್ನಾಟಕದಲ್ಲಿ ಒಂದೇ ಸಿಇಟಿ: ಅಶ್ವತ್ಥನಾರಾಯಣ

By Kannadaprabha News  |  First Published Jun 23, 2022, 10:49 AM IST

*   ಕಾಮೆಡ್‌-ಕೆ ಪ್ರವೇಶ ಪರೀಕ್ಷೆ ರದ್ದು
*  ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಜತೆಗಿನ ಸಚಿವರ ಸಭೆಯಲ್ಲಿ ನಿರ್ಧಾರ
*  ಕಾಮೆಡ್‌-ಕೆ ಸ್ಥಗಿತಗೊಂಡರೆ ಸರ್ಕಾರ ಸಿಇಟಿ ಪರೀಕ್ಷೆ ನಡೆಸಲಿದೆ 
 


ಬೆಂಗಳೂರು(ಜೂ.23):  ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ಕಾಮೆಡ್‌-ಕೆ ಪರೀಕ್ಷೆಯನ್ನು ರದ್ದುಪಡಿಸಿ ಸಿಇಟಿ ವ್ಯವಸ್ಥೆಯಡಿ ತರಲು ಸರ್ಕಾರ ತೀರ್ಮಾನಿಸಿದೆ. ಬುಧವಾರ ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಒಕ್ಕೂಟ (ಕ್ಯುಪೇಕಾ) ಜತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಈಗ ಪ್ರತ್ಯೇಕವಾಗಿ ನಡೆಸುತ್ತಿರುವ ಕಾಮೆಡ್‌-ಕೆ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಿ, ಸರ್ಕಾರದ ಸಿಇಟಿ ವ್ಯವಸ್ಥೆಯಡಿ ತರಲಾಗುವುದು. ಇದಕ್ಕೆ ಕ್ಯುಪೇಕಾ ಆಸಕ್ತಿ ತೋರಿವೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು. ಮುಂದಿನ ವರ್ಷದಿಂದ ಒಂದೇ ಸಿಇಟಿ ಮಾಡಲಾಗುವುದು ಎಂದು ತಿಳಿಸಿದರು.

Tap to resize

Latest Videos

ಆನ್ ಲೈನ್ ಮೂಲಕವೇ ಪದವಿ ಪ್ರವೇಶ ಪ್ರಕ್ರಿಯೆ, ಸಚಿವ ಡಾ‌. ಅಶ್ವಥ್ ನಾರಾಯಣ

ಖಾಸಗಿ ಕಾಲೇಜುಗಳು ದುಬಾರಿ ಶುಲ್ಕದ ಮ್ಯಾನೇಜ್ಮೆಂಟ್‌ ಸೀಟುಗಳಿಗಾಗಿ ತಾವೇ ನಡೆಸುತ್ತಿರುವ ಕಾಮೆಡ್‌-ಕೆ ಪರೀಕ್ಷೆಯನ್ನು ನಿಲ್ಲಿಸಲು ಮುಂದಾಗಿವೆ. ಇದರ ಸಾಧ್ಯತೆಗಳನ್ನು ಪರಿಶೀಲಿಸಲು ಉನ್ನತ ಸಮಿತಿ ರಚಿಸಲಾಗುವುದು. ಇದನ್ನು ಆಧರಿಸಿ ಕ್ಯುಪೇಕಾ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು. ಕಾಮೆಡ್‌-ಕೆ ಸ್ಥಗಿತಗೊಂಡರೆ ಸರ್ಕಾರವು ಸಿಇಟಿ ಪರೀಕ್ಷೆ ನಡೆಸಲಿದೆ. ಇದರಲ್ಲಿ ವಿದ್ಯಾರ್ಥಿಗಳು ಪಡೆಯುವ ರಾರ‍ಯಂಕಿಂಗ್‌ ಆಧರಿಸಿ ಈಗಿನಂತೆಯೇ ಸೀಟು ಹಂಚಿಕೆ ಮಾಡಲಾಗುವುದು. ಸಿಇಟಿ ಪರೀಕ್ಷೆ ಒಂದೇ ನಡೆಸುವುದರಿಂದ ಪ್ರಸ್ತುತ ಆಗುತ್ತಿರುವ ಗೊಂದಲ ಮತ್ತು ಅಪವ್ಯಯ ಎರಡೂ ನಿವಾರಣೆಯಾಗಲಿವೆ ಎಂದು ಹೇಳಿದರು.
 

click me!