IAS ಪಾಸ್ ಮಾಡಿ ಇತರರಿಗೆ ಮಾದರಿಯಾದ ಕಲ್ಯಾಣ ಸಾರಿಗೆ ಚಾಲಕನ ಮಗ

By Govindaraj S  |  First Published Jun 23, 2022, 5:05 AM IST

ಕಲ್ಯಾಣ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೀದರ್ ವಿಭಾಗದ ಭಾಲ್ಕಿ ಘಟಕದ ಚಾಲಕ ಶ್ರೀ. ಮಾಣಿಕ್ ರಾವ್‌ ರವರ‌ ಮಗನಾದ ಅನುರಾಗ್ ಧರು ಅವರು ಭಾರತೀಯ ಆಡಳಿತ ಸೇವೆಯ ಪರೀಕ್ಷೆಯಲ್ಲಿ 569ನೇ ಸ್ಥಾನ ಪಡೆದು, IPS ಗೆ ಸೇರ್ಪಡೆ ಆಗಿರುತ್ತಾರೆ. 


ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು (ಜೂ.23): ಕಲ್ಯಾಣ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೀದರ್ ವಿಭಾಗದ ಭಾಲ್ಕಿ ಘಟಕದ ಚಾಲಕ ಶ್ರೀ. ಮಾಣಿಕ್ ರಾವ್‌ ರವರ‌ ಮಗನಾದ ಅನುರಾಗ್ ಧರು ಅವರು ಭಾರತೀಯ ಆಡಳಿತ ಸೇವೆಯ ಪರೀಕ್ಷೆಯಲ್ಲಿ 569ನೇ ಸ್ಥಾನ ಪಡೆದು, IPS ಗೆ ಸೇರ್ಪಡೆ ಆಗಿರುತ್ತಾರೆ. ಸಾಮಾನ್ಯವಾಗಿ ಚಾಲಕ ನಿರ್ವಾಕರಿಗೆ ತಮ್ಮ ಮಕ್ಕಳು ಉನ್ನತ ಹುದ್ದೆಗೆ ಏರಲಿ ಅನ್ನೋ ಆಸೆ ಇದ್ದೆ ಇರುತ್ತೆ. ಅದ್ನ ಸಾಕಾರಗೊಳಿಸಿ ಹೆಮ್ಮೆಯುಂಟು ಮಾಡಿದ್ದಾನೆ ಅನುರಾಗ್. ಮಾಣಿಕ್ ರಾವ್ ಹಾಗು ಕಾಶಿಬಾಯಿ ದಂಪತಿಗಳ ಪುತ್ರ ಅನುರಾಗ್ ಗೆ ಐಎಸ್ ಆಗ್ಬೇಕು ಎಂಬ ಕನಸು ಹೊತ್ತಿದ್ದ. 

Tap to resize

Latest Videos

ಅದರಂತೆ ಕಷ್ಟದ ಜೀವನದ ಮಧ್ಯೆಯು ಅತ್ಯಂತ ಪರಿಶ್ರಮ ಶ್ರದ್ದೆಯಿಂದ ಓದಿ 569ನೇ ಸ್ಥಾನ ಪಡೆದು ಕೀರ್ತಿ ತಂದಿದ್ದಾನೆ. ಈ ಹಿನ್ನಲೆ ಬುಧವಾರ ಅನುರಾಗ್ ಹಾಗೂ ಪೋಷಕರನ್ನು ಕೆಎಸ್‌ಆರ್‌ಟಿಸಿ ಕೇಂದ್ರ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಚಾಲನಾ ಸಿಬ್ಬಂದಿಗಳು ಹಗಲಿರುಳು ಬಸ್ಸುಗಳನ್ನು ಚಾಲನೆ ಮಾಡುತ್ತಾ, ಕಷ್ಟಪಟ್ಟು ದುಡಿಯುತ್ತಿರುತ್ತಾರೆ.ಅಂತಹ ಸಂದರ್ಭದಲ್ಲಿಯೂ ಅವರ ಮಕ್ಕಳಿಗೆ ಅತ್ಯುನ್ನತ ವಿದ್ಯಾಭ್ಯಾಸ ನೀಡಿಸುವಲ್ಲಿ ಸಫಲರಾಗಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಇತರರಿಗೆ ಮಾದರಿ. 

ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ದೇವೇಗೌಡ

ಶ್ರೀ.ಅನ್ಬುಕುಮಾರ್ ಭಾಸೇ, ವ್ಯವಸ್ಥಾಪಕ‌ ನಿರ್ದೇಶಕರು ಮಾತನಾಡಿ, ಭಾರತೀಯ ಆಡಳಿತ ಸೇವೆ ( IAS) ಮಾಡಬೇಕೆಂಬುದು ಬಹಳಷ್ಟು ಮಂದಿಯ ಕನಸ್ಸಾಗಿದ್ದರೂ ಅದು ಒಂದು ತಪಸ್ಸು, ಸತತ ಪರಿಶ್ರಮ, ಶ್ರದ್ಧೆಯ ಮೂಲಕ ನಿರಂತರ ,ನಿಯಮ ಬದ್ಧ ಕಲಿಕೆಯ ಸಾಧನೆ. ನಮ್ಮ ಚಾಲಕರ‌ ಮಗ ಮಾಡಿರುವ ಈ ಸಾಧನೆ, ನಮ್ಮ ಸಂಸ್ಥೆಯ ಹೆಮ್ಮೆ ಹಾಗೂ ಗೌರವವಾಗಿದೆ‌. ನಿಮ್ಮ ಈ ಸಾಧನೆಗೆ ನಿಮ್ಮ ತಂದೆ ತಾಯಿಯ ಪಾತ್ರ ಬಹಳ ಹಿರಿದು ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಅಂತಂದ್ರು. ಇನ್ನು ನಮ್ಮ ಸಂಸ್ಥೆಯ ಬಹಳಷ್ಟು ಚಾಲಕ ನಿರ್ವಾಹಕ ಹಾಗೂ ಮೆಕ್ಯಾನಿಕ್ ಗಳ‌ ಮಕ್ಕಳು ಇಂಜಿನಿಯರಿಂಗ್, ಮೆಡಿಕಲ್,‌ IIT, IIM, MS, Navy ಯಲ್ಲಿದ್ದಾರೆಂಬುದು ಅತ್ಯಂತ ಸಂತೋಷ ಹಾಗೂ ಅಭಿಮಾನದ ವಿಷಯ. 

ಕರ್ನಾಟಕದಲ್ಲಿ ಪದವಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಪರದಾಟ..!

ಇದು ಹೀಗೆ ಮುಂದುವರೆಯಲಿ ,ಶ್ರೀ ಅನುರಾಗ್ ಅವರು ಸಮಾಜ ಪರ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ  ಡಾ.ನವೀನ್ ಭಟ್ ವೈ, ಭಾಆಸೇ, ನಿರ್ದೇಶಕರು (ಸಿಬ್ಬಂದಿ & ಭದ್ರತಾ ), ಶ್ರೀ ಮಾಣಿಕ್ ರಾವ್ ಚಾಲಕರು, ( ಶ್ರೀ.ಅನುರಾಗ್ ಅವರ ತಂದೆ) ಶ್ರೀಮತಿ ಕಾಶಿಬಾಯಿ ( ಶ್ರೀ. ಅನುರಾಗ್ ಅವರ ತಾಯಿ) ಅವರ ಸಂಬಂಧಿಕರು ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

click me!