ಆನ್​ಲೈನ್​ ಕ್ಲಾಸ್​ ವೇಳೆ ಪ್ಲೇ ಆಯ್ತು ಸೆಕ್ಸ್ ವಿಡಿಯೋ​:ನೋಡಿ ದಂಗಾದ ವಿದ್ಯಾರ್ಥಿನಿಯರು

Published : Jan 10, 2021, 10:40 PM IST
ಆನ್​ಲೈನ್​ ಕ್ಲಾಸ್​ ವೇಳೆ ಪ್ಲೇ ಆಯ್ತು ಸೆಕ್ಸ್ ವಿಡಿಯೋ​:ನೋಡಿ ದಂಗಾದ ವಿದ್ಯಾರ್ಥಿನಿಯರು

ಸಾರಾಂಶ

ಕೊರೋನಾ ಸೋಂಕು​ ಕಾಣಿಸಿಕೊಂಡ ಬಳಿಕ ಅನೇಕ ಜನರು ಆನ್​ಲೈನ್​ ಮೊರೆ ಹೋಗಿದ್ದಾರೆ. ಈ ವೇಳೆ ಹಲವು ಅನಾಹುತಗಳ ಸಹ ನಡೆದಿವೆ.

ಕುರುಕ್ಷೇತ್ರ, (ಜ.10): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಆನ್​ಲೈನ್​ ಮೂಲಕ ನಡೆಸಲಾಗುತ್ತಿದೆ. ಐಟಿ ಕಂಪೆನಿಯವರು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದು, ವಿಡಿಯೋ ಕಾಲಿಂಗ್​ ಮೂಲಕ ಮೀಟಿಂಗ್ ಅಟೆಂಡ್​ ಮಾಡುತ್ತಿದ್ದಾರೆ. 

ಈ ವೇಳೆ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ. ಈಗ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲೂ ಶಾಲಾ ಶಿಕ್ಷಕರು ಇರುಸು-ಮುರುಸಿಗೆ ಒಳಗಾಗುವ ಪ್ರಕರಣವೊಂದು ನಡೆದಿದೆ.

ಆನ್‌ಲೈನ್‌ ಕ್ಲಾಸ್ ವೇಳೆ ಪ್ರಸಾರವಾಯ್ತು ಪೋರ್ನ್, ಕಕ್ಕಾಬಿಕ್ಕಿಯಾದ ಮಕ್ಕಳು, ಟೀಚರ್..!

ಕುರೇಕ್ಷೇತ್ರ ವಿಶ್ವವಿದ್ಯಾಲಯದ ಮಾಸ್ಟರ್​ ಆಫ್​ ಸೋಷಿಯಲ್​ ವರ್ಕ್​ (ಎಂಎಸ್​ಡಬ್ಲ್ಯು) ವಿಭಾಗದ 40ಕ್ಕೂ ಅಧಿಕ ವಿದ್ಯಾರ್ಥಿಗಳು ಆನ್​ಲೈನ್​ ಕ್ಲಾಸ್​ಗೆ ಹಾಜರಾಗಿದ್ದರು. ಕ್ಲಾಸ್​ ನಡೆಯುತ್ತಿರುವ ಮಧ್ಯೆಯೇ ಬ್ಲೂ ಫಿಲಂ ಪ್ರಸಾರಗೊಂಡಿದೆ. 

ಅನಿರೀಕ್ಷಿತ ಘಟನೆಯಿಂದ ಬೆಚ್ಚಿಬಿದ್ದ ವಿದ್ಯಾರ್ಥಿನಿಯರು ಕ್ಲಾಸ್​ನಿಂದ ಎಕ್ಸಿಟ್​ ಆಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಕುರುಕ್ಷೇತ್ರ ವಿವಿ ಛಾನ್ಸಲರ್ ವಿಶೇಷ ತನಿಖಾ ತಂಡ ರಚಿಸಿದ್ದಾರೆ.

PREV
click me!

Recommended Stories

ಕೊರತೆಗಳ ಕುಂಪೆಯಾಗಿದ್ದ ಸರ್ಕಾರಿ ಶಾಲೆಗೆ ಎಐ, ಇಂಟರ್‌ನೆಟ್ ಎಲ್ಲ ಅಳವಡಿಸಿ ಹೈಟೆಕ್ ಸ್ಪರ್ಶ ನೀಡಿದ ಶಿಕ್ಷಕ!
3700 ಸರ್ಕಾರಿ ಶಾಲೆ, ಕಾಲೇಜಲ್ಲಿ ಸದ್ಯದಲ್ಲೇ ಸ್ಮಾರ್ಟ್‌ ಕ್ಲಾಸ್‌ ಶುರು, ಖಾಸಗಿ ಶಾಲೆಗಳ ಮಾದರಿ ಡಿಜಿಟಲ್‌ ಶಿಕ್ಷಣಕ್ಕೆ ಸರ್ಕಾರ ಸಿದ್ಧತೆ