ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ: ಪರೀಕ್ಷೆ ಬಗ್ಗೆ ಕಷ್ಟ ಹೇಳಿಕೊಂಡ ವಿದ್ಯಾರ್ಥಿ...!

By Suvarna News  |  First Published Jan 9, 2021, 8:04 PM IST

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತುಮಕೂರು ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ದಾರೆ.


ತುಮಕೂರು, (ಜ.09): ಕೊರೋನಾ ಭೀತಿಯ ನುಡುವೆಯೂ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಅದರಂತೆ ಇಂದು (ಶನಿವಾರ)ತುಮಕೂರಿನ ಮಧುಗಿರಿ, ಪಾವಗಡ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಸಚಿವರ ಭೇಟಿ ಕೊರೋನಾ ಮುಂಜಾಗೃತ ಕ್ರಮಗಳನ್ನ ಪರಿಶೀಲನೆ ಮಾಡಿದರು.

Tap to resize

Latest Videos

ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿ ಆರಂಭ: ಯಾವಾಗಿನಿಂದ..?

 ಮಧುಗಿರಿ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ ಶಿಕ್ಷಣ ಸಚಿವರ ಎದುರು ಗುಂಡಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸಮಸ್ಯೆ ಹೇಳಿಕೊಂಡಿದ್ದಾಳೆ.

ಮಾರ್ಚ್ ನಲ್ಲಿ ಪರೀಕ್ಷೆ ನಡೆಸಿದರೆ ಕಷ್ಟವಾಗುತ್ತದೆ. ಜೂನ್ ನಲ್ಲಿ ಎಕ್ಸಾಂ ನಡೆಸಿ ಎಂದು ವಿದ್ಯಾರ್ಥಿ, ಸಚಿವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ಜೂನ್‌ಗೆ ಎಕ್ಸಾಂ ಮಾಡಿದರೆ ರಿಸಲ್ಟ್  ಯಾವಾಗ ಕೊಡೊದು? ಸಪ್ಲಿಮೆಂಟರಿ ಎಕ್ಸಾಂ ಮಾಡಾದು ಯಾವಾಗ? ಎಂದು ವಿದ್ಯಾರ್ಥಿಗೆ ಸದ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದರು.

click me!