ಎಜುಟೆಕ್‌ ಕಂಪನಿಗಳ ವಿದೇಶಿ ಪಿಹೆಚ್‌ಡಿಗೆ ಮಾನ್ಯತೆ ಇಲ್ಲ: ವಿದ್ಯಾರ್ಥಿಗಳಿಗೆ ಯುಜಿಸಿ ಎಚ್ಚರಿಕೆ

By Kannadaprabha NewsFirst Published Oct 29, 2022, 8:52 AM IST
Highlights

ಎಜುಟೆಕ್‌ ಕಂಪನಿಗಳು ವಿದೇಶಿ ವಿವಿಗಳ ಜತೆ ಒಪ್ಪಂದ ಮಾಡಿಕೊಂಡು ನಡೆಸುವ ಆನ್‌ಲೈನ್‌ ಪಿಹೆಚ್‌ಡಿ ಕೋರ್ಸುಗಳಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಶುಕ್ರವಾರ ಘೋಷಿಸಿವೆ.

ನವದೆಹಲಿ: ಎಜುಟೆಕ್‌ ಕಂಪನಿಗಳು ವಿದೇಶಿ ವಿವಿಗಳ ಜತೆ ಒಪ್ಪಂದ ಮಾಡಿಕೊಂಡು ನಡೆಸುವ ಆನ್‌ಲೈನ್‌ ಪಿಹೆಚ್‌ಡಿ ಕೋರ್ಸುಗಳಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಶುಕ್ರವಾರ ಘೋಷಿಸಿವೆ.

ಈ ವರ್ಷ ಯುಜಿಸಿ ನೀಡಿರುವ 2ನೇ ಎಚ್ಚರಿಕೆ ಇದಾಗಿದೆ. ಈ ಮೊದಲು ಯುಜಿಸಿ (UGC) ಹಾಗೂ ಎಐಸಿಟಿಇ(AICTE), ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳು ಎಜುಟೆಕ್‌ ಕಂಪನಿಗಳ (edutech companies) ಜತೆ ಒಪ್ಪಂದ (agreements) ಮಾಡಿಕೊಂಡು ದೂರಶಿಕ್ಷಣ ಆನ್‌ಲೈನ್‌ ಕೋರ್ಸುಗಳನ್ನು ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದವು. ಇದರ ಬೆನ್ನಲ್ಲೇ ಈಗ ಮತ್ತೊಂದು ಅಂಥದ್ದೇ ಆದೇಶ ಹೊರಡಿಸಿದೆ.

ರೆಸ್ಯೂಮ್‌ ಹಿಡ್ಕೊಂಡು ಐದು ದಿನ ರಸ್ತೆಯಲ್ಲಿ ನಿಂತ ವ್ಯಕ್ತಿಗೆ ಸಿಕ್ತು ಬಂಪರ್‌ ಆಫರ್‌!

ಎಲ್ಲ ಶೈಕ್ಷಣಿಕ ಸಂಸ್ಥೆಗಳು (educational institutes) ಯುಜಿಸಿ ರೂಪಿಸಿದ ನಿಯಮದ ಅನುಸಾರ ಪಿಹೆಚ್‌ಡಿ (PhD) ಎಂಫಿಲ್‌( MPhil)ಪದವಿಗಳನ್ನು ನೀಡಬೇಕು. ಆದರೆ ಕೆಲವು ಎಜುಟೆಕ್‌ ಕಂಪನಿಗಳು (edutech companies) ವಿದೇಶಿ ಶಿಕ್ಷಣ ಸಂಸ್ಥೆಯೊಂದಿಗೆ (foreign educational institutions) ಒಪ್ಪಂದ ಮಾಡಿಕೊಂಡು ಯುಜಿಸಿ ಪದವಿ ನೀಡುವುದಾಗಿ ಹೇಳುತ್ತವೆ. ವಿದ್ಯಾರ್ಥಿಗಳು ಇಂಥ ದಾರಿತಪ್ಪಿಸುವ ಜಾಹೀರಾತುಗಳ ಬಗ್ಗೆ ಎಚ್ಚರದಿಂದ ಇರಬೇಕು. ವಿದೇಶಿ ಸಂಸ್ಥೆಗಳ ಜತೆ ಎಜುಟೆಕ್‌ ಕಂಪನಿಗಳು ಒಪ್ಪಂದ ಮಾಡಿಕೊಂಡು ನೀಡುವ ಪಿಹೆಚ್‌ಡಿಗಳಿಗೆ ಮಾನ್ಯತೆ ನೀಡುವುದಿಲ್ಲ ಎಂದು ಯುಜಿಸಿ ಮತ್ತು ಎಐಸಿಟಿಇ ಹೇಳಿದೆ.

IIT ಸೇರಿಕೊಂಡ್ರೆ ವಿದ್ಯಾರ್ಥಿಗಳಿಗೆ ವಾಸಿಸಲು ಫ್ಲ್ಯಾಟ್ ಕೊಡ್ತಾರಾ?

ಇತ್ತೀಚೆಗೆ, ಕೊರೋನಾ ಉಪಟಳ ಶುರುವಾದ ಬಳಿಕ ಮನೆಯಿಂದಲೇ ಶಿಕ್ಷಣ ಪಡೆಯುವ ವ್ಯವಸ್ಥೆ ಜಾರಿಗೆ ಬಂತು. ಆಗ ದೂರ ಶಿಕ್ಷಣ ನೀಡುವ ಎಜುಟೆಕ್‌ ಕಂಪನಿಗಳ ಹಾವಳಿ ಆರಂಭವಾಗಿ ತಾರಕಕ್ಕೇರಿತ್ತು. ಇವುಗಳ ನಿಯಂತ್ರಣಕ್ಕೆ ಸರ್ಕಾರ ನಾನಾ ಕ್ರಮ ಜರುಗಿಸುತ್ತಿದೆ.
 

click me!