NEET, JEE ಸೇರಿ ಇತರೆ ಸಾಮಾನ್ಯ ಪ್ರವೇಶ ಪರೀಕ್ಷೆ ರದ್ದು ಮಾಡಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ!

By Suvarna News  |  First Published Jul 23, 2021, 9:20 PM IST
  • NEET, ಇತರೆ ಪ್ರವೇಶ ಪರೀಕ್ಷೆ ನಿಗದಿಯಂತೆ ನಡೆಯಲಿದೆ
  • ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ಆಯೋಜನೆ
  • ಪರೀಕ್ಷೆ ರದ್ದು ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ

ನವದೆಹಲಿ(ಜು.22):  ಕೊರೋನಾ ವೈರಸ್ ಕಾರಣ ಹಲವು ಪರೀಕ್ಷೆಗಳು ರದ್ದಾಗಿದ್ದರೆ, ಮತ್ತೆ ಹಲವು ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಇದರ ನಡುವೆ ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ ಹೊರಡಿಸಿದೆ. ನೀಟ್ ಮತ್ತು ಇತರೆ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ರದ್ದು ಮಾಡುವ ಯಾವುದೇ ಚಿಂತನೆ ಕೇಂದ್ರ ಸರ್ಕಾರದ ಮುಂದಿಲ್ಲ. ನೀಟ್-(ಸ್ನಾತಕ-ಪಿಜಿ) ಮತ್ತು ನೀಟ್-(ಸ್ನಾತಕಪೂರ್ವ(ಪದವಿ)-ಯುಜಿ) 2021 ಪರೀಕ್ಷೆಗಳು ನಿಗದಿಯಂತೆ ಕ್ರಮವಾಗಿ 11 ಸೆಪ್ಟೆಂಬರ್ 2021 ಮತ್ತು 12 ಸೆಪ್ಟೆಂಬರ್ 2021ರಂದು ಜರುಗಲಿವೆ.

ಕೇಂದ್ರ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ : ಡಿಸಿಎಂ

Tap to resize

Latest Videos

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಇಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಸೂಕ್ತ ನಡವಳಿಕೆ ಕಾಪಾಡುವುದು ಸೇರಿದಂತೆ ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಿ ಮತ್ತು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪರೀಕ್ಷೆ ಆಯೋಜಿಸಲಾಗುವುದು. ಜತೆಗೆ, ಅಭ್ಯರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗೆ ಹೆಚ್ಚುವರಿ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ:

ವಿದ್ಯಾರ್ಥಿಗಳು ಗುಂಪುಗೂಡುವುದನ್ನು ನಿಯಂತ್ರಿಸಲು ಮತ್ತು ದೂರದ ಪ್ರಯಾಣ ನಿಯಂತ್ರಿಸಲು ದೇಶಾದ್ಯಂತ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಅಭ್ಯರ್ಥಿಗಳಿಗೆ ಹೊರಡಿಸುವ ಪ್ರವೇಶ  ಕಾರ್ಡ್ ಕೋವಿಡ್ ಇ-ಪಾಸ್ ಹೊಂದಿರುತ್ತದೆ. ಇದು ಅಭ್ಯರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಸರಾಗವಾಗಿ ಪ್ರವೇಶಿಸಲು ಮತ್ತು ನಿರ್ಗಮಿಸಲು ಅವಕಾಶ ಕಲ್ಪಿಸಲಾಗುತ್ತದೆ.

DRDO ನೇಮಕಾತಿ: 68 ಎಂಜಿನಿಯರ್ ಹುದ್ದೆಗಳಿಗೆ 70,000 ರೂ. ಮಾಸಿಕ ಸ್ಟೈಫಂಡ್

ಪ್ರವೇಶ ಬಿಂದುಗಳಲ್ಲಿ ಅಭ್ಯರ್ಥಿಗಳ ಸಮಗ್ರ ತಪಾಸಣೆ ಮಾಡಲಾಗುತ್ತದೆ. ದೇಹದ ಉಷ್ಣಾಂಶ ಮಾಪನ ಮಾಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಪ್ರಯೋಗಾಲಯಗಳು ಸ್ಥಾಪನೆಯಾಗಿರುತ್ತವೆ.   ಅಭ್ಯರ್ಥಿಗಳಿಗೆ ಮಾಸ್ಕ್ ಕಡ್ಡಾಯ. ಅವರಿಗೆ ಸಂರಕ್ಷಣಾತ್ಮಕ ಗೇರ್ ಸೇಫ್ಟಿ ಕಿಟ್ ನೀಡಲಾಗುತ್ತದೆ. ಇದರಲ್ಲಿ ಫೇಸ್ ಶೀಲ್ಡ್, ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಇರುತ್ತವೆ.

ಪರೀಕ್ಷಾ ಕೇಂದ್ರಗಳ ಹೊರಗಡೆ ಗುಂಪು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಕಲೆ ಮತ್ತು ವಿಜ್ಞಾನ ವಿಷಯಗಳ ಪರೀಕ್ಷೆಗಳು ಈಗಾಗಲೇ ನಿಗದಿಪಡಿಸಿರುವ ದಿನಗಳಂದು ಆಯಾ ವಿಶ್ವವಿದ್ಯಾಲಯಗಳು ಮತ್ತು ರಾಜ್ಯಗಳ ಚಿಂತನೆ(ಯೋಜನೆ)ಯಂತೆ ನಡೆಯಲಿವೆ.  

click me!