5, 8ನೇ ತರಗತಿ ಮಕ್ಕಳಿಗೆ ಈ ವರ್ಷ ಹೊಸ ಪರೀಕ್ಷೆ: ಬಿ.ಸಿ.ನಾಗೇಶ್‌

Published : Oct 14, 2022, 10:00 AM IST
5, 8ನೇ ತರಗತಿ ಮಕ್ಕಳಿಗೆ ಈ ವರ್ಷ ಹೊಸ ಪರೀಕ್ಷೆ: ಬಿ.ಸಿ.ನಾಗೇಶ್‌

ಸಾರಾಂಶ

ಕಲಿಕಾ ಗುಣಮಟ್ಟ ಮೌಲ್ಯಮಾಪನ ಟೆಸ್ಟ್‌, ಯಾರನ್ನೂ ಫೇಲ್‌ ಮಾಡಲ್ಲ: ನಾಗೇಶ್‌

ಬೆಂಗಳೂರು(ಅ.14):  ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಂತಕ್ಕೆ ತಲುಪುವ ಮುನ್ನ ಅವರ ಕಲಿಕಾ ಮಟ್ಟಮೌಲ್ಯಮಾಪನ ಮಾಡುವ ದೃಷ್ಟಿಯಿಂದ 5 ಮತ್ತು 8ನೇ ತರಗತಿ ಹಂತದಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಈ ವರ್ಷದಿಂದಲೇ ಆರಂಭಿಸಲು ಚಿಂತನೆ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ನಗರದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 10ನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ಎದುರಿಸುವ ಮುನ್ನ 5 ಮತ್ತು 8ನೇ ತರಗತಿಯಲ್ಲಿ ಅವರ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡಲು ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

5, 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಪ್ರಸ್ತಾವನೆ ಕೈಬಿಡಲು ರುಪ್ಸಾ, ಎಐಡಿಎಸ್‌ಒ ಆಗ್ರಹ

ಆದರೆ, ಈ ಪರೀಕ್ಷೆಗಳು ಪಬ್ಲಿಕ್‌ ಪರೀಕ್ಷೆಗಳಾಗಿರುವುದಿಲ್ಲ. ಸಾಮಾನ್ಯ ಪರೀಕ್ಷೆಯಾಗಿರುತ್ತದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಬದಲಿಗೆ ಪರೀಕ್ಷೆ ಅಥವಾ ಮೌಲ್ಯಮಾಪನದಲ್ಲಿ ಯಾವುದೇ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದಿರುವುದು ಕಂಡು ಬಂದರೆ ಅಂತಹವರಿಗೆ ಕೆಲ ತಿಂಗಳು ಮತ್ತೆ ತರಗತಿ ನಡೆಸಿ ಅಥವಾ ತರಬೇತಿ ನೀಡಿ ಮತ್ತೊಮ್ಮೆ ಪರೀಕ್ಷೆ ಬರೆಸಲಾಗುತ್ತದೆ. ಆ ಮೂಲಕ ಅವರ ಕಲಿಕಾ ಮಟ್ಟಸುಧಾರಿಸಿ ಮುಂದಿನ ತರಗತಿಗೆ ಇತರೆ ವಿದ್ಯಾರ್ಥಿಗಳ ಜೊತೆಯಲ್ಲೇ ಕಳುಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಈ ಎರಡು ತರಗತಿ ಮಕ್ಕಳಿಗೆ ಈ ವರ್ಷದಿಂದಲೇ ಪರೀಕ್ಷೆ ಆರಂಭಿಸುವ ಚಿಂತನೆ ಇದೆ. ಪರೀಕ್ಷೆ ಹೇಗೆ ನಡೆಸಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು ಶೀಘ್ರ ರೂಪರೇಷೆ ಸಿದ್ದಪಡಿಸಲಾಗುತ್ತದೆ ಎಂದರು.
 

PREV
Read more Articles on
click me!

Recommended Stories

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; VTU-Google ನಡುವೆ ಐತಿಹಾಸಿಕ ಒಪ್ಪಂದ
ಸರ್ಪಂಚ್ ಕನಸು ನನಸಾಗಿಸಲು ಪುಸ್ತಕ ಹಿಡಿದ ಮಹಿಳೆ – 63ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಪಾಸ್