ಜು.17ರಂದು ದೇಶಾದ್ಯಂತ ನೀಟ್ ಪರೀಕ್ಷೆ, ಕರ್ನಾಟಕದ 1.19 ಲಕ್ಷ ವಿದ್ಯಾರ್ಥಿಗಳು ನೋಂದಣಿ

By Suvarna NewsFirst Published Jul 16, 2022, 11:18 PM IST
Highlights

ನಾಳೆ(ಜುಲೈ17) ದೇಶಾದ್ಯಂತ ನೀಟ್ ಪರೀಕ್ಷೆ ನಡೆಯಲಿದ್ದು, ಕರ್ನಾಟಕದ ಒಟ್ಟು 1,19,626 ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ 18,72,371 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 

ಬೆಂಗಳೂರು, (ಜುಲೈ.16) :ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್-22) ನಾಳೆ(ಜುಲೈ.17) ದೇಶಾದ್ಯಂತ ನಡೆಯಲಿದೆ.

ಭಾನುವಾರ ಬೆಳಗ್ಗೆ ನಗರದ ವಿವಿಧ  ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ತಯಾರಿ ಮಾಡಿಕೊಳ್ಳಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಒಟ್ಟು 1,19,626 ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ 18,72,371 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 63 ವೈದ್ಯಕೀಯ ಕಾಲೇಜುಗಳಿಂದ 7,411 ವೈದ್ಯಕೀಯ ಮತ್ತು 2,849 ದಂತ ವೈದ್ಯಕೀಯ ಸೇರಿ 10,260 ಸೀಟುಗಳ ಪ್ರವೇಶಕ್ಕೆ ಪರೀಕ್ಷೆ ನಡೆಯಲಿದೆ.

Latest Videos

NEET UG 2022 ಹಾಲ್‌ ಟಿಕೆಟ್‌ neet.nta.nic.in ನಲ್ಲಿ ರಿಲೀಸ್‌, ಹೀಗೆ ಡೌನ್‌ಲೋಡ್ ಮಾಡಿ

ಈಗಾಗಲೇ ಅಭ್ಯರ್ಥಿಗಳಿಗೆ ಹಲವು ಸುತ್ತಿನ ಪರಿಶೀಲನೆ ನಡೆಸುವುದರಿಂದ ನಾಳೆ(ಶುಕ್ರವಾರ) ಮಧ್ಯಾಹ್ನ 12.20ರೊಳಗೆ ಪರೀಕ್ಷಾ ಕೇಂದ್ರದ ಪ್ರವೇಶ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. 1.30ಕ್ಕೆ ಪ್ರವೇಶ ದ್ವಾರವನ್ನು ಮುಚ್ಚಲಾಗುತ್ತದೆ. ನಂತರ ಬರುವಂತಹ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದಿಲ್ಲ ಎಂದು ನೀಟ್ ಬೋರ್ಡ್ ತಿಳಿಸಿದೆ.

 ಆಲ್ಲದೆ ವಿದ್ಯಾರ್ಥಿಗಳು ಪರೀಕ್ಷೆಗೆ  ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರವೇಶ ಪತ್ರದಲ್ಲಿ ತಿಳಿಸಲಾಗಿದೆ. ಪರೀಕ್ಷೆಗೆ ನಿಗದಿ ಮಾಡಿರುವ ಮಾನದಂಡಗಳನ್ನು ಕಟ್ಟು ನಿಟ್ಟಾಗಿ ಪರೀಕ್ಷಾ ಕೇಂದ್ರದಲ್ಲಿ ಜಾರಿಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಸೂಚನೆ ಕೊಟ್ಟಿರುವ ಮಾರ್ಗಸೂಚಿ ಅನ್ವಯದಂತೆ ಪರೀಕ್ಷೆ ಬರೆಯಲು ಸೂಚನೆ ಕೊಡಲಾಗಿದೆ.

NEET UG 2022 ಹಾಲ್‌ ಟಿಕೆಟ್‌ ಡೌನ್‌ಲೋಡ್ ಮಾಡುವುದು ಹೇಗೆ?

* ಮೊದಲು ಅಧಿಕೃತ ವೆಬ್‌ಸೈಟ್ neet.nta.nic.in ಗೆ ಹೋಗಿ
* ಮುಖಪುಟದಲ್ಲಿ NEET ಪ್ರವೇಶ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ
* ಇದರ ನಂತರ ಹೊಸ ಪುಟ ತೆರೆಯುತ್ತದೆ, ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ
* ಪ್ರವೇಶ ಕಾರ್ಡ್ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ
* ಈ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ

ಈ ಕೋರ್ಸ್‌ಗಳಿಗೆ ಪ್ರವೇಶ 
NEET ಯುಜಿ ಪ್ರವೇಶಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ MBBSE, BDS, BAMS, BUMS, BSMS, BHMS ಮತ್ತು ಇತರ ವೈದ್ಯಕೀಯ ಪದವಿ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯುತ್ತಾರೆ. ಪರೀಕ್ಷೆಯ ನಂತರ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕಾಲೇಜು ಹಂಚಿಕೆ ಮಾಡಲಾಗುತ್ತದೆ.

click me!