NEET ಪರೀಕ್ಷೆ ಮುಂದೂಡುವಂತೆ ಟ್ವೀಟ್ ಅಭಿಯಾನ, #NEETUGdelay ಟ್ರೆಂಡಿಂಗ್

By Suvarna News  |  First Published May 26, 2022, 6:13 PM IST

ಜುಲೈ 17 ರಂದು ಆಫ್‌ಲೈನ್ ಮೋಡ್‌ನಲ್ಲಿ ನಡೆಸಲು ಉದ್ದೇಶಿಸಿರುವ NEET UG ಪರೀಕ್ಷೆ ಮುಂದೂಡುವಂತೆ ಟ್ವಿಟ್ಟರ್ ಅಭಿಯಾನ


ನವದೆಹಲಿ (ಮೇ.26): ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ (NEET UG) ಗಾಗಿ ಆನ್‌ಲೈನ್ ತಿದ್ದುಪಡಿ ವಿಂಡೋವನ್ನು ತೆರೆದಿದೆ. ದೇಶಾದ್ಯಂತ ವೈದ್ಯಕೀಯ ಆಕಾಂಕ್ಷಿಗಳು ಇದೀಗ ಪರೀಕ್ಷೆಯನ್ನು ಮುಂದೂಡುವಂತೆ ಎನ್‌ಟಿಎಗೆ ಒತ್ತಾಯಿಸುತ್ತಿದ್ದಾರೆ.  NTA ಈ ಹಿಂದೆ NEET UG 2022 ಅನ್ನು ಜುಲೈ 17 ರಂದು ಆಫ್‌ಲೈನ್ ಮೋಡ್‌ನಲ್ಲಿ ನಡೆಸಲು ನಿಗದಿಪಡಿಸಿತ್ತು.

ವೈದ್ಯಕೀಯ ಪರೀಕ್ಷೆಯನ್ನು ಬರೆಯಲು ಬಯಸುವ ಅಭ್ಯರ್ಥಿಗಳು ಈಗ JEE ಮುಖ್ಯ ಪರೀಕ್ಷೆ ಮತ್ತು NEET UG 2022 ರ ಎರಡನೇ ಸೆಶನ್ ನಡುವೆ ಕಡಿಮೆ ಅಂತರವಿದೆ ಎಂದು ಹೇಳುತ್ತಿದ್ದು, ಈ ಮೂಲಕ NEET UG 2022 ಅನ್ನು ಮುಂದೂಡುವಂತೆಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದ್ದು,  #NEETUGdelay ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.

Tap to resize

Latest Videos

ಪುಸ್ತಕ ಸಂಗ್ರಹಣೆ ಅಭಿಯಾನಕ್ಕೆ Bengaluru Rural DC ಕೆ.ಶ್ರೀನಿವಾಸ್ ಚಾಲನೆ

ವಿದ್ಯಾರ್ಥಿಯೋರ್ವ ಟ್ವೀಟ್ ನಲ್ಲಿ  ಪರೀಕ್ಷೆಯ ದಿನಾಂಕಗಳನ್ನು ಮೊದಲಿನಂತೆಯೇ ಮಾಡಲು ಬಯಸುತ್ತೀರಿ ಎಂದು ನಮಗೆ ತಿಳಿದಿದೆ ಆದರೆ ಈ ವಿಧಾನವು ತಪ್ಪಾಗಿದೆ, ಇದರಿಂದಾಗಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ವಿಳಂಬ ನಮ್ಮ ತಪ್ಪಲ್ಲ ಎಂದು ಬರೆದುಕೊಂಡಿದ್ದಾನೆ. ಜುಲೈ 17 ರಂದು ಪರೀಕ್ಷೆಯನ್ನು ನಿಗದಿಪಡಿಸಿದ್ದಕ್ಕಾಗಿ ಹಲವಾರು ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. NEET UG 2022 ಗಾಗಿ ಆನ್‌ಲೈನ್ ತಿದ್ದುಪಡಿ ವಿಂಡೋ ಮೇ 27 ರಂದು ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತದೆ. ಎಲ್ಲಾ ಆಕಾಂಕ್ಷಿಗಳು neet.nta.nic.in ನಲ್ಲಿ ಪರಿಶೀಲನೆ ನಡೆಸಬಹುದು.

ಗರಿಷ್ಠ ವಯಸ್ಸಿನ ಮಿತಿ ರದ್ದು: ನೀಟ್ -ಯುಜಿ (NEET-UG) ಪರೀಕ್ಷೆ ಬರೆಯಲು ಗರಿಷ್ಠ ವಯಸ್ಸಿನ ಮಿತಿಯನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು  ಈ ನಿರ್ಧಾರವನ್ನು ಪ್ರಕಟಿಸಿದ್ದು,  ಇನ್ಮುಂದೆ ಎಲ್ಲಾ ವಯೋಮಾನದ ಅಭ್ಯರ್ಥಿಗಳು ಪರೀಕ್ಷೆ ನೀಟ್ -ಯುಜಿ ಬರೆಯಬಹುದು.

 ಈ ಮೊದಲು ನೀಟ್ ಯುಜಿ ಪರೀಕ್ಷೆ ಬರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿತ್ತು. ಇದರ ವಿರುದ್ಧ ದೇಶಾದ್ಯಂತ ಟೀಕೆ ವ್ಯಕ್ತವಾಗಿತ್ತು.

 ಸದ್ಯ ನಿಗದಿಯಾಗಿರುವ ವಯೋಮಿತಿ ಕೈಬಿಡಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಸಲಹೆಯ ಮೇರೆಗೆ ಪದವಿ ವೈದ್ಯಕೀಯ ಶಿಕ್ಷಣ ಮಂಡಳಿಯು ಈ ನಿರ್ಧಾರಕ್ಕೆ ಬಂದಿದೆ.

Tumakuru; ಇಂಗ್ಲಿಷ್‌ ಓದಲು ಕಷ್ಟವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ! 

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ನಾಲ್ಕನೇ ಎನ್‌ಎಂಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಡಾ.ಪುಲ್ಕೇಶ್ ಕುಮಾರ್ ತಿಳಿಸಿದ್ದಾರೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ (ಎನ್‌ಟಿಎ) ಬರೆದ ಪತ್ರದಲ್ಲಿ ಡಾ ಕುಮಾರ್ ಅವರು NEET-UG ಯ ಮಾಹಿತಿ ಬುಲೆಟಿನ್‌ನಿಂದ ಗರಿಷ್ಠ ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕುವಂತೆ ಏಜೆನ್ಸಿಗೆ ಮನವಿ ಮಾಡಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ, ರಾಷ್ಟ್ರೀಯ ವೈದ್ಯಕೀಯ ಆಯೋಗವು NEET-UG ಪರೀಕ್ಷೆಯಲ್ಲಿ ಬರೆಯಲು ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ. ಈ ನಿರ್ಧಾರವು ಮಹತ್ವಾಕಾಂಕ್ಷಿ ವೈದ್ಯರಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

SSLCಯಲ್ಲಿ ಶೂನ್ಯ ಸಾಧನೆಗೈದ BBMP ಶಾಲೆಗಳ ಶಿಕ್ಷಕರ ವಜಾ! 

click me!