ಗುಲಬರ್ಗಾ ವಿವಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಕ್ಯಾನ್ಸಲ್

By Suvarna News  |  First Published May 26, 2022, 4:41 PM IST

* ಗುಲಬರ್ಗಾ ವಿವಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಕ್ಯಾನ್ಸಲ್
* ಬಿ.ಕಾಂ.5ನೇ ಸೆಮಿಸ್ಟರ್ ಪರೀಕ್ಷೆ ರದ್ದು
* ಮಾನ್ವಿ ಪಟ್ಟಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಆರೋಪ


ರಾಯಚೂರು, (ಮೇ.26): ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಹುದ್ದೆ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎನ್ನುವ ಆರೋಪಗಳು ಇವೆ. ಅದರಲ್ಲೂ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ಸಿಐಡಿ ತನಿಖೆ ಮುಂದುವರೆಸಿದೆ. ಇದರ ಮಧ್ಯೆ ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.

ಹೌದು...ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಲೀಕ್ ಆಗಿದೆ. ಮೂರು- ನಾಲ್ಕು ಬಾರಿ ದಿನಾಂಕಗಳು ಮುಂದೂಡಿಕೆ ಮಾಡಿ ಇಂದು(ಗುರುವಾರ) ಮಧ್ಯಾಹ್ನ ನಡೆಯಬೇಕಿದ್ದ ಬಿ.ಕಾಂ.5ನೇ ಸೆಮಿಸ್ಟರ್ ನ ಮ್ಯಾನೇಜ್ಮೆಂಟ್ ಅಕೌಂಟಿಂಗ್ ಪೇಪರ್ ನ ಪರೀಕ್ಷೆ ಗುಲಬರ್ಗಾ ವಿಶ್ವವಿದ್ಯಾಲಯ ರದ್ದು ಮಾಡಿದೆ.

Latest Videos

undefined

 ರಾಯಚೂರು ಜಿಲ್ಲೆಯ ಮಾನವಿ ಸೇರಿದಂತೆ ನಾನಾ ಕಡೆಗಳಲ್ಲಿ ಇಂದು ನಡೆಯಬೇಕಾದ ಮ್ಯಾನೇಜ್ಮೆಂಟ್ ಅಕೌಂಟಿಂಗ್ ಪೇಪರ್ ಸೋಷಿಯಲ್ ಮೀಡಿಯಾ ಮತ್ತು ವಾಟ್ಸಾಪ್ ಗಳಲ್ಲಿ ಹರಿದಾಟ ನಡೆಸಿತ್ತು. ಇದನ್ನು ನೋಡಿದ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಗೊಂದಲಕ್ಕೆ ಒಳಗಾಗಿದ್ರು. 

Vijayapura: ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವಿದ್ಯಾರ್ಥಿನಿಯರಿಗೆ ಡ್ರೋನ್‌ ಟ್ರೈನಿಂಗ್!

ಈ ವಿಚಾರಕ್ಕೆ ಸಂಬಂಧಿಸಿದಂತೆ ಸುವರ್ಣನ್ಯೂಸ್ ಜೊತೆಗೆ  ಮಾತನಾಡಿದ ಗುಲಬರ್ಗಾ ವಿವಿಯ ರಿಜಿಸ್ಟರ್ ಡಾ. ಮೇಧಾವಿನಿ ಕಟ್ಟಿ..ಪರೀಕ್ಷೆ ಪತ್ರಿಕೆ ಲೀಕ್ ಆಗಿರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಪತ್ರಿಕೆ ಹರಿದಾಡುತ್ತಿದೆ. ಹೀಗಾಗಿ ಬಿ.ಕಾಂ. 5ನೇ ಸೆಮಿಸ್ಟರ್ ನ ಇಂದಿನ ಪರೀಕ್ಷೆ ಮಾತ್ರ ರದ್ದುಗೊಳಿಸಲಾಗಿದೆ. ಜೊತೆಗೆ ಪ್ರಶ್ನೆ ಪತ್ರಿಕೆ ‌ಸೋರಿಕೆ ಕುರಿತು ಬಗ್ಗೆ ತೀವ್ರ ನಿಗಾವಹಿಸುವುದಾಗಿ ಸ್ಪಷ್ಟಪಡಿಸಿದರು. 

ಯಾರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೋ ಅಂತವರ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇನ್ನೂ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಆರೋಪಗಳಿದ್ದು, ಪೊಲೀಸರು ಪ್ರಕರಣಗಳ ದಾಖಲಿಸಿಕೊಂಡ ತನಿಖೆ ಮುಂದುವೆರಿಸಿದ್ದಾರೆ.

click me!