ಬೆಂಗಳೂರು (ಸೆ.9) : ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಯುವ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶ ಬುಧವಾರ ತಡರಾತ್ರಿ ಪ್ರಕಟವಾಗಿದ್ದು, ರಾಜ್ಯದ 72 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಅಖಲ ಭಾರತ ಮಟ್ಟದ ಟಾಪ್ ಐದು ರಾರಯಂಕ್‌ನಲ್ಲಿ ರಾಜ್ಯದ ಇಬ್ಬರು, ಟಾಪ್ 10 ರಾರಯಂಕ್‌ನಲ್ಲಿ ಮೂವರು ಮತ್ತು ಟಾಪ್ 50 ರಾರಯಂಕ್‌ನಲ್ಲಿ ಒಂಬತ್ತು ವಿದ್ಯಾರ್ಥಿಗಳು ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಟಾಪ್ 3ನೇ ರಾರಯಂಕ್ ಪಡೆದಿರುವ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನ ಋುಷಿಕೇಶ್ ನಾಗಭೂಷಣ ಗಂಗೋಲೆ ರಾಜ್ಯಕ್ಕೆ ಮೊದಲ ರಾರಯಂಕ್, ರಾಷ್ಟ್ರಕ್ಕೆ 4ನೇ ರಾರಯಂಕ್ ಪಡೆದಿರುವ ವಿದ್ಯಾರ್ಥಿನಿ ರುಚಾ ಪಾವ್ಶೆ ರಾಜ್ಯಕ್ಕೆ ಎರಡನೇ ರಾರಯಂಕ್ ಪಡೆದಿದ್ದಾರೆ. ಇವರಿಬ್ಬರೂ ರಾಜ್ಯ ಸಿಇಟಿಯಲ್ಲೂ ವಿವಿಧ ವಿಭಾಗಗಳಲ್ಲಿ ರಾರಯಂಕ್ ಪಡೆದಿದ್ದರು.
NEET ಪರೀಕ್ಷೆಯಲ್ಲಿ ಬಲವಂತದಿಂದ ಒಳ ಉಡುಪು ಬಿಚ್ಚಿಸಿದ್ದ ಪ್ರಕರಣ; ಮರು ಪರೀಕ್ಷೆಗೆ ಅವಕಾಶ
ಉಳಿದಂತೆ ರಾಜ್ಯದ ಇತರೆ ವಿದ್ಯಾರ್ಥಿಗಳಾದ ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಎಸ್.ಆರ್. ಕೃಷ್ಣ ರಾಷ್ಟ್ರಕ್ಕೆ 8ನೇ ರಾರಯಂಕ್, ಉಡುಪಿಯ ಮಣಿಪಾಲ ಮಾಧವ ಕೃಪಾ ಇಂಗ್ಲೀಷ್ ಪಿಯು ಕಾಲೇಜಿನ ವ್ರಜೇಶ್ ವಿಣಾಧರ್ ಶೆಟ್ಟಿ13ನೇ ರಾರಯಂಕ್, ಶುಭಾ ಕೌಶಿಕ್ 17ನೇ ರಾರಯಂಕ್, ಅಂಕುಶ್ ಗೌಡ 18ನೇ ರಾರಯಂಕ್, ಮುರುಕಿ ಶ್ರೀ ಬಾರುನ್ 23ನೇ ರಾರಯಂಕ್, ಆದಿತ್ಯಾ ಕಾಮತ್ ಅಮೆಂಬಳ್ 28ನೇ ರಾರಯಂಕ್, ರೋಹಿತ್ ಆರ್.ಜೆ. 42ನೇ ರಾರಯಂಕ್ ಪಡೆದು ಸಾಧನೆ ಮಾಡಿದ್ದಾರೆ. ಬಹುತೇಕ ಟಾಪರ್‌ಗಳು ದೆಹಲಿಯ ಏಮ್ಸ್‌ನಲ್ಲಿ ಪ್ರವೇಶ ಪಡೆಯುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ಎಕ್ಸ್‌ಪರ್ಚ್‌ನ 1094 ವಿದ್ಯಾರ್ಥಿಗಳಿಗೆ ಅರ್ಹತೆ : ಮಂಗಳೂರಿನ ಎಕ್ಸ್‌ಪರ್ಚ್ ಪಿಯು ಕಾಲೇಜಿನ ಆದಿತ್ಯ ಕಾಮತ್ 28ನೇ ರಾರಯಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಜೊತೆಗೆ ಈ ಕಾಲೇಜಿನ 1168 ವಿದ್ಯಾರ್ಥಿಗಳಲ್ಲಿ 1094 ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ನೀಟ್ ಮೂಲಕ ಅರ್ಹತೆ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ. ಸಿಯುಇಟಿಯಲ್ಲಿ ವಿಲೀನವಾಗಲಿದೆ ನೀಟ್, ಜೆಇಇ..? ಕೇಂದ್ರ ಸರ್ಕಾರಕ್ಕೆ ಯುಜಿಸಿ ಪ್ರಸ್ತಾವ
ಅನೇಲ್ ಕಾಲೇಜು ವಿದ್ಯಾರ್ಥಿಗಳ ಸಾಧನೆ: ನೀಟ್ ಪರೀಕ್ಷೆಯಲ್ಲಿ ಅನೇಲ್ ಕೆರೆಯರ್ ಇನ್ಸ್‌ಟಿಟ್ಯೂಟ್‌ನ 9 ವಿದ್ಯಾರ್ಥಿಗಳು ಉತ್ತಮ ರಾರಯಂಕ್ ಪಡೆದುಕೊಂಡಿದ್ದಾರೆ. ಇಲ್ಲಿನ ಜಾನವಿ ಬನೋತ್ರಾ, ರೋಹಿತ್ ಸುರೇಶ್, ರಿನಿತ್ ರವಿಚಂದ್ರನ್, ಅನನ್ಯ ಶಹಿ, ರಾಹುಲ್ ಸುರೇಶ್ ಚಂದ್ರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉತ್ತಮ ರಾರಯಂಕ್ ಪಡೆದಿದ್ದಾರೆ ಎಂದು ತಿಳಿಸಿದೆ.