NTSE ಪರೀಕ್ಷೆ ಮುಂದೂಡಿಕೆ; ಮುಂದಿನ ಆದೇಶದವರೆಗೆ ತಡೆ: NCERT

By BK Ashwin  |  First Published Oct 7, 2022, 12:36 PM IST

ಎನ್‌ಸಿಇಆರ್‌ಟಿ ಎನ್‌ಟಿಎಸ್‌ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ. ಈ ಯೋಜನೆಯನ್ನು 31 ಮಾರ್ಚ್, 2021 ರವರೆಗೆ ಅನುಮೋದಿಸಲಾಗಿದೆ. ಆದರೆ, ಸದ್ಯ ಅನುಮೋದಿಸಲಾಗಿಲ್ಲವಾದ್ದರಿಂದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಎನ್‌ಸಿಇಆರ್‌ಟಿ ಮಾಹಿತಿ ನೀಡಿದೆ. 


ಎನ್‌ಟಿಎಸ್‌ಇ (NTSE) ಪರೀಕ್ಷೆ ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಯೋಜನೆಯನ್ನು (National Talent Search Scheme) ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (National Council of Educational Research and Training) (ಎನ್‌ಸಿಇಆರ್‌ಟಿ) ತಿಳಿಸಿದೆ. ಶಿಕ್ಷಣ ಸಚಿವಾಲಯದಿಂದ ಧನಸಹಾಯ ಪಡೆದ ಕೇಂದ್ರ ವಲಯದ ಈ ಯೋಜನೆಯನ್ನು ಮಾರ್ಚ್ 31, 2021 ರವರೆಗೆ ಅನುಮೋದಿಸಲಾಗಿತ್ತು. ಆದರೆ, ಸದ್ಯ, ಈ ಯೋಜನೆಯ ಮುಂದಿನ ಅನುಷ್ಠಾನವನ್ನು ಅನುಮೋದಿಸಲಾಗಿಲ್ಲ ಎಂದು ಎನ್‌ಸಿಇಆರ್‌ಟಿ (NCERT) ಮಾಹಿತಿ ನೀಡಿದ್ದು, ಈ ಹಿನ್ನೆಲೆ ಎನ್‌ಟಿಎಸ್‌ಇ ಪರೀಕ್ಷೆಗೆ ಸದ್ಯ ತಡೆ ನೀಡಲಾಗಿದೆ ಎಂದು ತಿಳಿಸಿದೆ. 

"ರಾಷ್ಟ್ರೀಯ ಟ್ಯಾಲೆಂಟ್ ಸರ್ಚ್ ಸ್ಕೀಮ್ ಕೇಂದ್ರೀಯ ವಲಯದ ಯೋಜನೆಯಾಗಿದ್ದು, ಇದು ಭಾರತ ಸರ್ಕಾರದ (Government of India) ಶಿಕ್ಷಣ ಸಚಿವಾಲಯ (Ministry of Education) (MOE) ದಿಂದ ಸಂಪೂರ್ಣವಾಗಿ ಅನುದಾನವನ್ನು ಹೊಂದಿದೆ. NCERT NTS ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ. ಈ ಯೋಜನೆಯನ್ನು 31 ಮಾರ್ಚ್, 2021 ರವರೆಗೆ ಅನುಮೋದಿಸಲಾಗಿದೆ. ಆದರೆ, ಈ ಯೋಜನೆಯ ಮುಂದಿನ ಅನುಷ್ಠಾನವನ್ನು ಅದರ ಪ್ರಸ್ತುತ ರೂಪದಲ್ಲಿ ಅನುಮೋದಿಸಲಾಗಿಲ್ಲ ಮತ್ತು ಈ ಹಿನ್ನೆಲೆ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಇದು ಸಂಬಂಧಪಟ್ಟ ಎಲ್ಲರ ಮಾಹಿತಿಗಾಗಿ'' ಎಂದು ಎನ್‌ಸಿಇಆರ್‌ಟಿಯ ಶೈಕ್ಷಣಿಕ ಸಮೀಕ್ಷೆ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಇಂದ್ರಾಣಿ ಎಸ್.ಭಾದುರಿ ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ನ.3ರಂದು NTSE ಪರೀಕ್ಷೆ: ಅರ್ಜಿ ಆಹ್ವಾನ

ಡಾಕ್ಟರೇಟ್ ಹಂತದವರೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು NTSE ಪರೀಕ್ಷೆಯನ್ನು ನಡೆಸಲಾಗುತ್ತದೆ. 10ನೇ ತರಗತಿಯ ವಿದ್ಯಾರ್ಥಿಗಳು ಸಹ ಈ ಪರೀಕ್ಷೆಗೆ ಹಾಜರಾಗಬಹುದು. ಇನ್ನು, ಈ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು 11 ಮತ್ತು 12 ನೇ ತರಗತಿಗಳಲ್ಲಿ ತಿಂಗಳಿಗೆ 1,250 ರೂ., ಯುಜಿ, ಪಿಜಿ ಸಮಯದಲ್ಲಿ ತಿಂಗಳಿಗೆ 2,000 ರೂ. ಮತ್ತು ಪಿಎಚ್‌ಡಿ ಹಂತದಲ್ಲಿ ಯುಜಿಸಿ ನಿಯಮಗಳ ಪ್ರಕಾರ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.

ಅಭ್ಯರ್ಥಿಗಳು ಮೊದಲು ರಾಜ್ಯ ಮಟ್ಟದಲ್ಲಿ (ಹಂತ 1) ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ನಂತರ ಆ ಪರೀಕ್ಷೆಯಲ್ಲಿ ಆಯ್ಕೆಯಾದ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ (ಹಂತ 2) ಎನ್‌ಸಿಇಆರ್‌ಟಿ ಪರೀಕ್ಷೆ ನಡೆಸುತ್ತದೆ, ಬಳಿಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. 

ಇದನ್ನೂ ಓದಿ: ಮಕ್ಕಳ ಆತಂಕಕ್ಕೆ ಪರೀಕ್ಷೆ, ಫಲಿತಾಂಶ ಕಾರಣ: ಎನ್‌ಸಿಇಆರ್‌ಟಿ ಅಧ್ಯಯನ

ಇತ್ತೀಚೆಗೆ, ಅಕ್ಟೋಬರ್ 24, 2021 ರಲ್ಲಿ ದೇಶಾದ್ಯಂತ 68 ಪರೀಕ್ಷಾ ಕೇಂದ್ರಗಳಲ್ಲಿ ಎನ್‌ಟಿಎಸ್‌ಇ 2021 ಪರೀಕ್ಷೆ ನಡೆಸಲಾಗಿತ್ತು. ಹಾಗೂ, ಎನ್‌ಸಿಆರ್‌ಟಿಯ ಅಧಿಕೃತ ವೆಬ್‌ಸೈಟ್‌ ncert.nic.in ವೆಬ್‌ಸೈಟ್‌ನಲ್ಲಿ ಫೆಬ್ರವರಿ 18 ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗಿತ್ತು. ಅಲ್ಲದೆ, ಅದಕ್ಕೂ ಮುನ್ನ ಫೆಬ್ರವರಿ 9, 2022 ರಂದು ತಾತ್ಕಾಲಿಕ ಫಲಿತಾಂಶ ಹಾಗೂ ಓಎಂಆರ್‌ ಶೀಟ್‌ ಅನ್ನು ಎನ್‌ಸಿಆರ್‌ಟಿ ಮಂಡಳಿ ಬಿಡುಗಡೆ ಮಾಡಿತ್ತು. 

click me!