ಕರ್ನಾಟಕದ ಎಲ್ಲಾ ಶಾಲಾ, ಕಾಲೇಜು, ಮದರಸಾಗಳ ಮೇಲೆ ರಾಷ್ಟ್ರ ಧ್ವಜ ಹಾರಾಟ ಕಡ್ಡಾಯ

Published : Jul 19, 2022, 03:45 PM ISTUpdated : Jul 19, 2022, 03:56 PM IST
ಕರ್ನಾಟಕದ ಎಲ್ಲಾ ಶಾಲಾ, ಕಾಲೇಜು, ಮದರಸಾಗಳ ಮೇಲೆ ರಾಷ್ಟ್ರ ಧ್ವಜ ಹಾರಾಟ ಕಡ್ಡಾಯ

ಸಾರಾಂಶ

ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯಗೊಂಡು ಆಗಸ್ಟ್ 15ಕ್ಕೆ 75 ವರ್ಷಗಳು ಪೂರೈಸುತ್ತದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ವಿಜ್ರಭಂಣೆಯಿಂದ ಆಚರಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ, ಕಾಲೇಜು, ಮದರಸಾಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶಿಸಿದೆ.

ಬೆಂಗಳೂರು, (ಜುಲೈ.19): ಸ್ವಾತಂತ್ರ್ಯೋತ್ಸವದ ಅಜಾದಿ ಕಾ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲಾ ಶಾಲಾ, ಕಾಲೇಜು, ಮದರಸಾಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಸೌಲಭ್ಯ ಪಡೆಯುವವರು ಸರ್ಕಾರದ ನಿಯಮ ಪಾಲಿಸೋದು ಕಡ್ಡಾಯವಾಗಿದೆ. ಹೀಗಾಗಿ ಯಾವುದೇ ಕುಂಟು ನೆಪ ಹೇಳದೆ ಎಲ್ಲಾ ಮದರಾಸಗಳಲ್ಲಿ ಕಡ್ಡಾಯವಾಗಿ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜು, ಮದರಸಾಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಎಲ್ಲಾ ಶಿಕ್ಷಣ ಸಿಬ್ಬಂದಿಗಳು ತಮ್ಮ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸುವಂತೆ ಸೂಚಿಸಲಾಗಿದೆ.

India@75: ಬ್ರಿಟಿಷರ ವಿರುದ್ಧ ಹೋರಾಡಿದ ಅಯೋಧ್ಯೆಯ ಹಿಂದೂ ಮುಸ್ಲಿಮರು

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಹಿನ್ನೆಲೆ ಆಗಸ್ಟ್ 11 ರಿಂದ 17 ರವರೆಗೆ 6 ದಿನ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಆದೇಶಿಸಿದ ಸರ್ಕಾರ, ಶಾಲಾ ಕಾಲೇಜು, ಮದರಸಾಗಳಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ಗೀತಗಾಯನ, ಪ್ರಭಂದ, ಕ್ವಿಜ್, ಸ್ವಾತಂತ್ರ್ಯ ಹೋರಾಟಗಾರ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ. 

ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯಗೊಂಡು ಆಗಸ್ಟ್ 15ಕ್ಕೆ 75 ವರ್ಷಗಳು ಪೂರೈಸುತ್ತದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ವಿಜ್ರಭಂಣೆಯಿಂದ ಆಚರಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಬಿಜೆಪಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ: ನಾಗೇಶ್
ಬೆಂಗಳೂರು: ಬಿಜೆಪಿ ಸರ್ಕಾರ ಶಿಕ್ಷಣ ಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಕೊರೊನಾದಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿದು ಬಿಟ್ಟರು. ಕೊವಿಡ್ ಟೈಮನಲ್ಲಿ ದೇಶದಲ್ಲಿ ಯಾವ ರಾಜ್ಯಗಳು ಶಾಲೆ ಆರಂಭ ಮಾಡಿರಲಿಲ್ಲ. ಆದರೆ ನಾವು ಕೋವಿಡ್ ಇದ್ದರು ಶಾಲೆ ಆರಂಭ ಮಾಡಿದ್ವಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದದ್ದಾರೆ. 

 ಇದೀಗ ಹಳ್ಳಿಗಳ ಶಾಲೆಗಳಲ್ಲಿ ಮಕ್ಕಳು ದಾಖಲಾತಿ ಸಂಖ್ಯೆ ಜಾಸ್ತಿ ಆಗುತ್ತಿದೆ. ಶಿಕ್ಷಣದಲ್ಲಿ ತುಂಬಾ ಬದಲಾವಣೆ ತಂದಿದ್ದೇವೆ. ಶಾಲಾ ಕೊಠಡಿ ಸರಿಮಾಡುವ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಹೊಸದಾಗಿ 7 ಸಾವಿರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಶೇ 60% ರಷ್ಟು ಹೊಸ ಶಿಕ್ಷಕರ ಆಯ್ಕೆ ಮಾಡಿಕೊಳುತ್ತೇವೆ. 35 ಸಾವಿರ ಅತಿಥಿ ಶಿಕ್ಷಕರನ್ನ ನೇಮಕಾತಿ ಮಾಡಿದ್ದೇವೆ. ಕೊರೊನಾದಿಂದ ತುಂಬಾ ಮಕ್ಕಳಿಗೆ ತೊಂದರೆ ಆಗಿದೆ ಅಂತ ವರದಿ ಹೇಳಿವೆ. ಪಾಠಗಳನ್ನು ಮಕ್ಕಳು ಮರೆದು ಬಿಟ್ಟಿದ್ದಾರೆ. ಹೀಗಾಗಿ ಕಲಿಕೆ ಚೇತರಿಕೆ ಅಂತ ಮಾಡಿದ್ದೇವೆ. ಮಕ್ಕಳು ಮರೆತಿರುವ ವಿಷಯಗಳ ರೀವಿಜನ್ ಮಾಡುತ್ತಿದ್ದೇವೆ. ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕಲಿಕ ಚೇತರಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ ತೆರೆಯಲು ನಿರ್ಧಾರ ಮಾಡಿದ್ದು, ಶಾಸಕರ ಅನುದಾನದಲ್ಲಿ ವಾಹನ ಕೊಡಿಸಲು ಕೂಡ ನಿರ್ಧಾರ ಮಾಡಲಾಗುವುದು. 10 ಮಕ್ಕಳು ಇರುವ ಶಾಲೆಯಲ್ಲೂ ಓರ್ವ ಶಿಕ್ಷಕ ನಿಯೋಜನೆ ಮಾಡಲಾಗಿದ್ದು, 11ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ. ಮಕ್ಕಳಿಗೆ ಇಂದು ಇಂಗ್ಲಿಷ್ ಭಾಷೆ ಅನಿವಾರ್ಯವಾಗಿದೆ. ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಸಲು ವ್ಯವಸ್ಥೆ ಮಾಡಲಾಗಿದೆ. ಸದ್ಯ ಇಂಗ್ಲಿಷ್​ ಶಿಕ್ಷಕರೇ ಸ್ಪೋಕನ್ ಇಂಗ್ಲಿಷ್ ಮಾಡುತ್ತಿದ್ದಾರೆ. ಇದೇ ವರ್ಷದಿಂದ ನೈತಿಕ ಶಿಕ್ಷಣ ನೀಡುವ ಚಿಂತನೆ ಇದೆ. 1, 2 ಹಾಗೂ 3ನೇ ತರಗತಿಯಲ್ಲಿ NEP ಶಿಕ್ಷಣ ಅಳವಡಿಕೆಗೆ ತಯಾರಿ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಜಿಲ್ಲೆ ಮಕ್ಕಳಿಗೆ ಪೌಷ್ಠಿಕಾಂಶ ಕೊರತೆಯಿದ್ದು, ಹೀಗಾಗಿ ಮೊಟ್ಟೆ ನೀಡಲು ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ