ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಬೇಕಾಗಿಲ್ಲ: ಸಿಎಂ ಇಬ್ರಾಹಿಂ

By Kannadaprabha News  |  First Published Dec 3, 2022, 2:56 PM IST

ಮುಸ್ಲಿಂ ಮಹಿಳೆಯರಿಗಾಗಿ ಪ್ರತ್ಯೇಕ ಕಾಲೇಜು ತೆರೆಯುವ ವಿವಾದವನ್ನು ಬಿಜೆಪಿ ಅವರು ಹುಟ್ಟುಹಾಕಿದ್ದಾರೆ. ಮುಸ್ಲಿಂ ಮಹಿಳೆಯರಿಗಾಗಿ ಕಾಲೇಜು ತೆರೆಯುವ ಅಗತ್ಯವೇ ಇಲ್ಲ. ನಾವೆಲ್ಲ ಮಠದಲ್ಲಿ ಓದಿರೋರು, ಪ್ರತ್ಯೇಕ ಕಾಲೇಜು ಬೇಕಾಗಿಲ್ಲ ಎಂದ ಇಬ್ರಾಹಿಂ


ಕಲಬುರಗಿ(ಡಿ.03):  ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕವಾಗಿ ಕಾಲೇಜು ತೆರೆಯುವುದು ಬೇಕಾಗಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರಿಗಾಗಿ ಪ್ರತ್ಯೇಕ ಕಾಲೇಜು ತೆರೆಯುವ ವಿವಾದವನ್ನು ಬಿಜೆಪಿ ಅವರು ಹುಟ್ಟುಹಾಕಿದ್ದಾರೆ. ಮುಸ್ಲಿಂ ಮಹಿಳೆಯರಿಗಾಗಿ ಕಾಲೇಜು ತೆರೆಯುವ ಅಗತ್ಯವೇ ಇಲ್ಲ. ನಾವೆಲ್ಲ ಮಠದಲ್ಲಿ ಓದಿರೋರು, ಪ್ರತ್ಯೇಕ ಕಾಲೇಜು ಬೇಕಾಗಿಲ್ಲ ಎಂದರು.

ವಕ್ಫ್‌ ಮಂಡಳಿ ಕಾಲೇಜು ತೆರೆದರೆ ಎಲ್ಲ ಧರ್ಮದವರು ಓದುತ್ತಾರೆ. ಒಂದೇ ಧರ್ಮದ ವಿದ್ಯಾರ್ಥಿಗಳ ಓದಿಗೆ ಸೀಮಿತವಾದರೆ ನಾನೇ ಹೋರಾಟ ಮಾಡುತ್ತೇನೆ ಎಂದರು. ಮಹಾರಾಷ್ಟ್ರದಲ್ಲಿ ಜನ ನಿರುದ್ಯೋಗಿಗಳಾಗಿದ್ದಾರೆ. ಅದಕ್ಕಾಗಿ ಜನರ ಮೈಂಡ್‌ ಡೈವರ್ಟ ಮಾಡಲು ಗಡಿ ವಿವಾದ ಹುಟ್ಟು ಹಾಕಿದ್ದಾರೆ. ಗಡಿ ವಿವಾದಕ್ಕೆ ಶಾಶ್ವತ ಪರಿಹಾರದ ಅಗತ್ಯವಿದೆ ಎಂದರು.

Tap to resize

Latest Videos

undefined

Muslim Women College: ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಸ್ತಾವನೆ ಇಲ್ಲವೆಂದ ಸಿಎಂ ಬೊಮ್ಮಾಯಿ

ಕುಮಾರ ಸ್ವಾಮಿ ನಮ್ಮ ಸಿಎಂ ಅಭ್ಯರ್ಥಿ. ಸಿಎಂ ಅಭ್ಯರ್ಥಿ ಗೊಂದಲ ಕಾಂಗ್ರೆಸ್‌ , ಬಿಜೆಪಿಯಲ್ಲಿದೆ , ನಮ್ಮಲ್ಲಿಲ್ಲ ಎಂದರು. ಜಾರಕಿಹೊಳಿ ಜೆಡಿಎಸ್‌ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇನ್ನೂ ಅನೇಕರು ನಮ್ಮ ಪಕ್ಷಕ್ಕೆ ಬರುವವರಿದ್ದಾರೆ ಎಂದು ಹೇಳಿದರು. ಜನತಾದಳಕ್ಕೂ ರೌಡಿಸಂ ಪದಕ್ಕೂ ಸಂಬಂಧವಿಲ್ಲ. ಬಿಜೆಪಿ ರೌಡಿಗಳನ್ನು ವೈಭವೀಕರಣ ಮಾಡುತ್ತಿದೆ. ಇದು ರಾಜ್ಯದ ದುರ್ದೈವದ ಸಂಗತಿ ಎಂದರು.

ಮಹೇಶ್ವರಿ ವಾಲಿ ಗೆಲ್ಲಿಸಿ: ದೇವೇಗೌಡ

ಆಳಂದ: ಆಳಂದದಲ್ಲಿ ಜೆಡಿಎಸ್‌ ಅಭ್ಯರ್ಥಿ ಮಹೇಶ್ವರಿಗೆ ಗೆಲ್ಲಿಸುವಂತೆ ಜನರಲ್ಲಿ ದೇವೇಗೌಡರು ಕೋರಿದರು. ಶ್ರೀರಾಮ ಮಾರುಕಟ್ಟೆಯಲ್ಲಿ ಜೆಡಿಎಸ್‌ ನಾಯಕಿ ಮಹೇಶ್ವರಿ ವಾಲಿ ನೇತೃತ್ವದಲ್ಲಿ ಶುಕ್ರವಾರ ಪಕ್ಷದ ಬೃಹತ್‌ ಸಮಾವೇಶ ಹಾಗೂ ಸಾವಿರಾರು ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹೇಶ್ವರಿ ಆಳಂದ ಕ್ಷೇತ್ರದಲ್ಲಿ ಗ್ರಾಮವಾಸ್ತ್ಯವ ಮಾಡಿ ಅವರು ಕೊಟ್ಟಿದ್ದು ಉಂಡು ಜನರ ಸಮಸ್ಯೆ ಅರಿತುಕೊಂಡಿದ್ದಾರೆ. ಮಹಿಳಾ ಸಂಘಟನೆ ಮಾಡಿದ್ದು ಇದು ರಾಜ್ಯದಲ್ಲಿ ಎಲ್ಲಿಯೂ ಆಗಿಲ್ಲ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷ, 50 ಲಕ್ಷದ ವರೆಗೆ ಉಚಿತ ಆರೋಗ್ಯ ಸೇವೆ ನೀಡೋದಾಗಿ ಹೇಳಿದರು.

ಗಿಡ್ಡ- ಉದ್ದ ಕೊಡುಗೆ ಶೂನ್ಯ:

ಜೆಡಿಎಸ್‌ ರಾಜಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಮಾತನಾಡಿ, ರಾಜ್ಯದಲ್ಲಿ ಮತ್ತೆ ಜೆಡಿಎಸ್‌ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಸಿಎಂ ಆಗಲು ಖರ್ಗೆ ಮೋದಿ ಅವರ ಆಟ ನಡೆಯದು. ರಾಜ್ಯದ ಏಳು ಕೋಟಿ ಜನರಿಗಾಗಿ ಪಕ್ಷದ ಪಂಚರತ್ನ ಯೋಜನೆ ಪ್ರಣಾಳಿಕೆಯಾಗಿದೆ. ಬಿಜೆಪಿಯದ್ದು ಇಂಥ ಒಂದೂ ಜನಪರ ಕಾರ್ಯಕ್ರಮವಿಲ್ಲ ಎಂದರು.

ಆಳಂದದ ಅಮರ್ಜಾ ಅಣೆಕಟ್ಟೆಗೆ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಮರೆಯಬಾರದು. ಇಲ್ಲಿನ ರಾಜಕೀಯ ದೈತ್ಯಶಕ್ತಿಯಾಗಿ ಇಬ್ಬರು ಗಿಡ್ಡ, ಉದ್ದ ಇದ್ದಾರೆ. ಅವರಿಂದ ಅಭಿವೃದ್ಧಿ ಆಗಿಲ್ಲ ಎಂದು ಮಾಜಿ ಶಾಸಕ ಬಿಆರ್‌ ಪಾಟೀಲ್‌ ಹಾಗೂ ಹಾಲಿ ಶಾಸಕ ಸುಭಾಸ ಗುತ್ತೇದಾರರನ್ನು ಟೀಕಿಸಿದರು.

ಭಾರತದ ಮುಸ್ಲಿಂ ಮಹಿಳೆಯರಿಗೆ ಇರಾನ್ ಮಾದರಿಯಾಗಬೇಕು: ಶೋಭಾ ಕೆರಂದ್ಲಾಜೆ

ಮೈಸೂರಿನ ಜೆಡಿಎಸ್‌ ವಕ್ತಾರೆ ನಜೀಮಾ ನಜೀರ್‌, ಜಿಲ್ಲಾಧ್ಯಕ್ಷ ಸುರೇಶ ಮಹಾಗಾಂವಕರ್‌ ಹಾಗೂ ಕಾರ್ಯಾಧ್ಯಕ್ಷ ಸೈಯದ್‌ ಜಫಾರ್‌ ಹುಸೇನ, ಶಂಕರ ಕಟ್ಟಿಸಂಗಾವಿ, ಅಶೋಕ ಗುತ್ತೇದಾರ ಬಡದಾಳ, ಸಮ್ಮಿರ್‌ ಭಾಗವಾನ, ತಾಲೂಕು ಅಧ್ಯಕ್ಷ ಶರಣು ಕುಲಕರ್ಣಿ, ಜೈರಾಂ ರಾಠೋಡ, ಕಿರಣ ಪಾಟೀಲ, ಪ್ರವೀಣ ಕೋಣೆ, ಫಯಾಜ್‌ ಶೇಖ, ಆನಂದ ಸಣ್ಣೂರಕರ್‌ ಇದ್ದರು. ಜೆಡಿಎಸ್‌ ವಕಾರ ನಗ್ಮಾ ನಜೀರ್‌ ಪ್ರಾಸ್ತಾವಿಕ ಮಾತನಾಡಿದರು. ಶಾಸಕಿ ಅನಿತಾ ಕುಮಾರಸ್ವಾಮಿ ಮಹೇಶ್ವರಿ ಜೊತೆ 5000 ಮಹಿಳೆಯರಿಗೆ ಉಡಿ ತುಂಬಿದರು. ಶರಣು ಕುಲಕರ್ಣಿ ಸ್ವಾಗತಿಸಿದರು. ಶಂಕರ ಕಟ್ಟಿಸಂಗಾವಿ ನಿರೂಪಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋನಿಯಾ ಗಾಂಧಿ ಚಿಂತೆ, ಆದರೆ, ಕುಮಾರಸ್ವಾಮಿಗೆ ರೈತರ ಚಿಂತೆಯಾಗಿದೆ. ಕೇಂದ್ರ ಸರ್ಕಾರ ಚುನಾವಣೆ ಬಂದಾಗ ಮಾತ್ರ ಹಿಂದೂ ಜಪ ಮಾಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಪಂಚ ಯಾತ್ರೆಯ ಮೂಲಕ ಹಲವು ಯೋಜನೆ ಜಾರಿ ಮಾಡಲಾಗುತ್ತದೆ ಜೆಡಿಎಸ್‌ ರಾಜಾಧ್ಯಕ್ಷ ಸಿ.ಎಂ. ಇಬ್ರಾಹಿಂ ನುಡಿದರು.
 

click me!