ಮೈಸೂರಿನ ಎಚ್.ಡಿ ಕೋಟೆ ತಾಲೂಕಿನಲ್ಲಿರುವ ಮುಸ್ಲಿಂ ಕುಟುಂಬವೊಂದು ಸರ್ಕಾರಿ ಶಾಲೆಗಾಗಿ 50 ಲಕ್ಷ ರು. ಮೌಲ್ಯದ ಎರಡೂವರೆ ಎಕರೆ ಭೂಮಿಯನ್ನು ದಾನ ಮಾಡಿ ಮೆಚ್ಚುಗೆ ಗಳಿಸಿದೆ.
ಮೈಸೂರು: ರಾಜ್ಯಾದ್ಯಂತ ಹಿಜಾಬ್ (Hijab) ವಿವಾದ ತಾರಕಕ್ಕೇರುತ್ತಿದೆ, ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಇವೆಲ್ಲದರ ನಡುವೆ ಮೈಸೂರು (Mysuru) ಜಿಲ್ಲೆಯ ಎಚ್.ಡಿ ಕೋಟೆ (HD Kote) ತಾಲೂಕಿನ ದೂರದ ಹಳ್ಳಿಯೊಂದರ ಮುಸ್ಲಿಂ ಕುಟುಂಬವೊಂದು (Muslim Family) ಸರ್ಕಾರಿ ಶಾಲೆಗಾಗಿ 50 ಲಕ್ಷ ರು. ಮೌಲ್ಯದ ಎರಡೂವರೆ ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ.
ಅಕ್ಕಪಕ್ಕದ ಹಳ್ಳಿಗಳ ಮಕ್ಕಳ ಶೈಕ್ಷಣಿಕ (Education) ಅಗತ್ಯತೆ ಮತ್ತು ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಜಮೀನು ನೀಡುವುದಾಗಿ ವಾಗ್ದಾನ ಮಾಡಿದ್ದ ಮಾರ್ಚಳ್ಳಿ ಗ್ರಾಮದ ನಿವಾಸಿ ದಿವಂಗತ ತಂದೆ ಮಹಮ್ಮದ್ ಜಾಫರ್ ಅವರ ಕನಸನ್ನು ಮಕ್ಕಳು ನನಸಾಗಿಸಿದ್ದು, ಹಂಪಾಪುರ ಹೋಬಳಿಯ 63 ವರ್ಷದ ಉದ್ಯಮಿ ಮಹಮ್ಮದ್ ರಕೀಬ್ ಮತ್ತು ಇಬ್ಬರು ಸಹೋದರಿಯರು ಸೇರಿದಂತೆ ನಾಲ್ವರು ಸಹೋದರರು ಆರು ವರ್ಷಗಳ ಹಿಂದೆ ನಿಧನರಾದ ತಮ್ಮ ತಂದೆಯ ಸ್ಮರಣಾರ್ಥ ಇದೀಗ 2.5 ಎಕರೆ ಭೂಮಿ ದಾನ ಮಾಡಿದ್ದಾರೆ.
undefined
ಈ ಜಮೀನನ್ನು ಬಚ್ಚೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (Government Higher Primary School in Bachegowdanahalli ) ಹಸ್ತಾಂತರಿಸಲಾಗಿದ್ದು, ಮುಖ್ಯೋಪಾಧ್ಯಾಯರ ಹೆಸರಿಗೆ ನೋಂದಣಿ ಮಾಡಲಾಗಿದ್ದು, ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಮತ್ತು ಈ ಪ್ರದೇಶದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಸುಧಾರಿಸಲು ಶಾಲೆಗೆ ಭೂಮಿಯನ್ನು ದಾನ ಮಾಡಲು ನನ್ನ ತಂದೆ ವಾಗ್ದಾನ ಮಾಡಿದ್ದರು. ಅವರ ಆಸೆಯಂತೆ ನಾವು ಒಡಹುಟ್ಟಿದವರು ಶಾಲೆಗೆ ಭೂಮಿಯನ್ನು ಹಸ್ತಾಂತರಿಸಿದ್ದೇವೆ ಎಂದು ರಕೀಬ್ ತಿಳಿಸಿದ್ದಾರೆ.
ನಾವು ಆರು ಮಂದಿ ಒಡಹುಟ್ಟಿದವರು, ನಾಲ್ಕು ಸಹೋದರರು ಮತ್ತು ಇಬ್ಬರು ಸಹೋದರಿಯರು. ನಮ್ಮ ತಂದೆಯ ಇಚ್ಛೆಯಂತೆ ನಾವು ಚರ್ಚಿಸಿ 2.5 ಎಕರೆಯನ್ನು ನೀಡಲು ನಿರ್ಧರಿಸಿ, ಫೆಬ್ರವರಿ 15 ರಂದು ನಾವು ಶಾಲೆಗೆ ಜಮೀನನ್ನು ನೋಂದಾಯಿಸಿದ್ದೇವೆ. ಈ ಜಮೀನನ್ನು ಶಾಲೆಯ ಮೈದಾನಕ್ಕಾಗಿ ಮತ್ತು ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯಾಗಿ ಮೇಲ್ದರ್ಜೆಗೇರಿಸಲು ಬಳಸಬಹುದು ಎಂದಿದ್ದಾರೆ.
ಕೃಷಿಯಲ್ಲಿ ತೊಡಗಿರುವ ಈ ಕುಟುಂಬವು ಗ್ರಾಮದಲ್ಲಿ 12 ಎಕರೆಗೂ ಹೆಚ್ಚು ಜಮೀನು ಹೊಂದಿದ್ದು, ಹೊಂದಿದ್ದಾರೆ. ಅದರಲ್ಲಿ 2.5 ಎಕರೆಯನ್ನು ದಾನ ಮಾಡಿದರು. ಪ್ರಸ್ತುತ ಮಾರುಕಟ್ಟೆ ಬೆಲೆ ಎಕರೆಗೆ 20 ಲಕ್ಷ ರೂ. ತರಗತಿ ಕೊಠಡಿಗಳ ಕೊರತೆಯಿದ್ದರೆ, ದಾನವಾಗಿ ನೀಡಿದ ಭೂಮಿಯಲ್ಲಿ ಹೊಸದಾಗಿ ನಿರ್ಮಿಸಬಹುದು ಅಥವಾ ಮಕ್ಕಳ ಆಟದ ಮೈದಾನವಾಗಿ ಪರಿವರ್ತಿಸಬಹುದು ಅಥವಾ ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಬಹುದು ಎಂಬುದು ಅವರ ಆಶಯ.
TUMAKURU ANGANAWADI RECRUITMENT 2022: ತುಮಕೂರು ಜಿಲ್ಲೆಯಾದ್ಯಂತ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಹೆಚ್.ಡಿ.ಕೋಟೆ ಬ್ಲಾಕ್ ಶಿಕ್ಷಣಾಧಿಕಾರಿ ಚಂದ್ರಕಾಂತ್, '' ಕುಟುಂಬವು ಭೂಮಿಯನ್ನು ದಾನ ಮಾಡುವ ಪ್ರಸ್ತಾಪದೊಂದಿಗೆ ನಮ್ಮನ್ನು ಸಂಪರ್ಕಿಸಿತು. ದಾನವಾಗಿ ನೀಡಿದ ಜಮೀನನ್ನು ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಹಾಗೂ ಅಗತ್ಯವಿದ್ದಲ್ಲಿ ಹೊಸ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು. ಕುಟುಂಬದ ಈ ನಡೆ ಅನುಕರಣೀಯವಾಗಿದೆ ಮತ್ತು ಸಹಾಯ ಮಾಡಲು ಇತರರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕ ಮರಿಕಾಳಯ್ಯ ಎಂ ಮಾತನಾಡಿ "ಈ ವರ್ಷ ನಾವು 1 ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭಿಸಿದ್ದೇವೆ. ಅದನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೇರಿಸುವುದು ನಮ್ಮ ಕನಸು ಮತ್ತು ಅದಕ್ಕೆ ಭೂಮಿ ಸಿಕ್ಕಿದೆ" ಮುಂದೆ 12 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲಿಷ್-ಮಾಧ್ಯಮ ಶಿಕ್ಷಣವನ್ನು ನೀಡಲಾಗುವುದು ಎಂದರು. 1961 ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಪ್ರಸ್ತುತ 1 ಮತ್ತು 7 ನೇ ತರಗತಿಗಳ ನಡುವೆ 205 ವಿದ್ಯಾರ್ಥಿಗಳು ಇದ್ದಾರೆ.