ನಗರದಲ್ಲಿ 6000 ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ: ಸಮೀಕ್ಷೆ

By Kannadaprabha NewsFirst Published Nov 8, 2021, 6:19 AM IST
Highlights
  •  ನಗರದಲ್ಲಿ 6000 ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ 
  • ‘ಸಮಗ್ರ ಶಿಕ್ಷಣ ಕರ್ನಾಟಕ’ (ಎಸ್‌ಎಸ್‌ಕೆ) ನಡೆಸಿದ ಸಮೀಕ್ಷಾ ವರದಿಯಲ್ಲಿ ಬೆಳಕಿಗೆ

ಬೆಂಗಳೂರು (ನ.08): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ (BBMP) 6-16 ವರ್ಷದೊಳಗಿನ 6600 ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಶಾಲೆಯಿಂದ (School) ಹೊರಗುಳಿದಿರುವುದು ‘ಸಮಗ್ರ ಶಿಕ್ಷಣ ಕರ್ನಾಟಕ’ (SSK) ನಡೆಸಿದ ಸಮೀಕ್ಷಾ ವರದಿಯಲ್ಲಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಎಸ್‌ಎಸ್‌ಕೆ (SSK) ಸಮೀಕ್ಷೆ ನಡೆಸಿದ್ದು ಇದರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 34,411 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲೇ (BBMP) 6608 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿರುವುದು ಕಂಡು ಬಂದಿದೆ.

6608 ಮಕ್ಕಳ ಪೈಕಿ 6ರಿಂದ 14 ವರ್ಷದವರೆಗಿನ ಮಕ್ಕಳ ಸಂಖ್ಯೆ 2143 ಇದ್ದರೆ, 14ರಿಂದ 16 ವರ್ಷದೊಳಗಿನ ಮಕ್ಕಳ ಸಂಖ್ಯೆ 4,465 ಆಗಿದೆ. ಕೋವಿಡ್‌ ಮತ್ತು ಲಾಕ್‌ಡೌನ್‌ (Lpckdown) ಸಂದರ್ಭದಲ್ಲಿ ಅನೇಕ ಕುಟುಂಬಗಳು ಉದ್ಯೋಗ ಕಳೆದುಕೊಂಡು, ವ್ಯಾಪಾರ, ಕೆಲಸ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದರಿಂದ ಸಾಕಷ್ಟುಜನ ತಮ್ಮ ಮಕ್ಕಳನ್ನು ಶಾಲೆ (School) ಬಿಡಿಸಿದ್ದಾರೆ. ಅಂತಹ ಮಕ್ಕಳಲ್ಲಿ ಬಹಳಷ್ಟುತಮ್ಮ ಕುಟುಂಬಕ್ಕೆ ನೆರವಾಗಲು ಕೆಲಸಕ್ಕೆ ಸೇರಿರುವುದು ಕಂಡುಬಂದಿದೆ. ಇದನ್ನು ಮನೆ ಮನೆ ಸಮೀಕ್ಷೆ ವೇಳೆ ಆಯಾ ಮಕ್ಕಳ ಪೋಷಕರೇ ಹೇಳಿಕೆ ನೀಡಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಒಂದನೇ ತರಗತಿ ಒಳಗಿನ ಮಕ್ಕಳಿಗೂ ಶುರು :   ದೀಪಾವಳಿ (Deepavali) ನಂತರ ಒಂದೊಂದೆ ಶುಭ ಸುದ್ದಿಗಳು ಸಿಗುತ್ತಿವೆ. ಕೋವಿಡ್(Coronavirus) ನಿಯಮ ಪಾಲನೆ ಮಾಡಿ LKG-UKG ಪ್ರಾರಂಭಕ್ಕೆ ಸರ್ಕಾರದ ಒಪ್ಪಿಗೆ ನೀಡಿದೆ. ಈ ಬಗ್ಗೆ ಮಾರ್ಗಸೂಚಿಯನ್ನು ಕರ್ನಾಟಕ ಸರ್ಕಾರ (Karnataka Govt) ಬಿಡುಗಡೆ ಮಾಡಿದೆ.

ಅರ್ಧ ದಿನ ಮಾತ್ರ ತರಗತಿಗಳನ್ನ ಪ್ರಾರಂಭ ಮಾಡಬೇಕು ಶೇ. 2 ಒಳಗೆ ಕೊರೊನಾ ಕೇಸ್ ಇರೋ ತಾಲೂಕುಗಳಲ್ಲಿ ಮಾತ್ರ LKG-UKG ಪ್ರಾರಂಭ ಮಾಡಬೇಕು. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು. ನಿತ್ಯ ಶಾಲಾ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಬೇಕು ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು‌. 50 ವರ್ಷ ಮೇಲ್ಪಟ್ಟವರು ಫೇಸ್ ಶೀಲ್ಡ್ ಧರಿಸಬೇಕು. ಶಿಕ್ಷಕರು, ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ತಿಳಿಸಲಾಗಿದೆ.

ಮನೆಯಿಂದಲೇ ಮಕ್ಕಳು ಉಪಹಾರ ಮತ್ತು ಕುಡಿಯುವ ನೀರು ತರಲು ಅವಕಾಶ ಕೊಡಬೇಕು. ಶಾಲೆಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕಕ್ಕೆ ರೂಪಾಂತರಿ ಆತಂಕ ಇಲ್ಲ; ಸುಧಾಕರ್

ನವೆಂಬರ್  8  ರಿಂದ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸಲಾಗುತ್ತಿದೆ. ಕೇಂದ್ರವನ್ನ ಮೊದಲು ಸ್ವಚ್ಛಗೊಳಿಸಬೇಕು. ರಾಸಾಯನಿಕ ದ್ರಾವಣ ಸಿಂಪಡಿಸಬೇಕು.  ಮಕ್ಕಳು ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ. ಮಕ್ಕಳ ಪೋಷಕರಿಗೂ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿ ಆಗಿರಬೇಕು.   ತರಗತಿಗಳು ಬೆಳಗ್ಗೆ 9:30 ರಿಂದ  ಮಧ್ಯಾಹ್ನ3:30 ಗಂಟೆವರೆಗೆ ನಡೆಯಲಿವೆ ಕೋವಿಡ್ ಲಕ್ಷಣ ಇರುವ ಮಕ್ಕಳಿಗೆ ಪ್ರವೇಶ ಇಲ್ಲ.

ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಪ್ರಾಥಮಿಕ ಶಾಲೆಗಳನ್ನು ಸರ್ಕಾರ ಹಂತ ಹಂತವಾಗಿ ಆರಂಭ ಮಾಡಿತ್ತು. ಈಗ ಎಲ್‌ ಕೆಜಿಗೂ ಅವಕಾಶ ನೀಡಿದ್ದು ಪೂರ್ಣ ಪ್ರಮಾಣದಲ್ಲಿ ಎಲ್ಲ ಶೈಕ್ಷಣಿಕ ಚಟುವಟಿಕೆ ಆರಂಭವಾದಂತೆ ಆಗಿದೆ.

ಕರ್ನಾಟಕದಲ್ಲಿ (Karnataka)  ನವೆಂಬರ್ 3 ರಂದು ಹೊಸದಾಗಿ 254 ಕೊರೋನಾ ಪಾಸಿಟಿವ್ (Coronavius Positive) ಕೇಸ್ ಪತ್ತೆಯಾಗಿದ್ದು,  ಸೋಂಕಿನಿಂದ 2 ಜನರ ಸಾವನ್ನಪ್ಪಿದ್ದರು.  ವಿಶ್ವ ಆರೋಗ್ಯ ಸಂಸ್ಥೆ ಭಾರತದ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಿತ್ತು. 

ಸೋಂಕಿತರ ಪೈಕಿ 29,42,588 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದರೆ. ರಾಜ್ಯದಲ್ಲಿ ಪ್ರಸ್ತುತ 8,306 ಸಕ್ರಿಯ ಪ್ರಕರಣಗಳಿವೆ. ಇದರೊಂದಿಗೆ ಕೋವಿಡ್-19 ಮರಣ ಪ್ರಮಾಣ ಶೇ.0.78 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.33 ರಷ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ತಿಳಿಸಿತ್ತು.

ಜಿಲ್ಲಾವಾರು ಕೊರೋನಾ ಕೇಸ್  ನವೆಂಬರ್ 03ರ ಅಂಕಿ ಅಂಶ
ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 151, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 4, ಚಿತ್ರದುರ್ಗ 1, ದಕ್ಷಿಣ ಕನ್ನಡ 12, ದಾವಣಗೆರೆ 0, ಧಾರವಾಡ 1, ಗದಗ 0, ಹಾಸನ 8, ಹಾವೇರಿ 0, ಕಲಬುರಗಿ 0, ಕೊಡಗು 5, ಕೋಲಾರ 0, ಕೊಪ್ಪಳ 0, ಮಂಡ್ಯ 6, ಮೈಸೂರು 19, ರಾಯಚೂರು 1, ರಾಮನಗರ 1, ಶಿವಮೊಗ್ಗ 1, ತುಮಕೂರು 11, ಉಡುಪಿ 11, ಉತ್ತರ ಕನ್ನಡ 12, ವಿಜಯಪುರ 0, ಯಾದಗಿರಿಯಲ್ಲಿ ಶೂನ್ಯ ಕೊವಿಡ್ 19 ಪ್ರಕರಣಗಳು ದಾಖಲಾಗಿದ್ದವು.

click me!