ಕೊರೋನಾ ಸಂಕಷ್ಟ: ಮಕ್ಕಳ ಮುಂದಿನ ಶಿಕ್ಷಣಕ್ಕೆ ಸುರೇಶ್ ಕುಮಾರ್ ಕ್ರಮ

By Suvarna News  |  First Published May 19, 2021, 10:41 PM IST

* ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಶಿಕ್ಷಣ ಸಚಿವರು ಸಭೆ 
* ಮುಂದಿನ ಶೈಕ್ಷಣಿಕ ವರ್ಷದ ಕುರಿತು ಸಮಗ್ರ ಚರ್ಚೆ
* ಮಕ್ಕಳು ಕಲಿಕೆಯಿಂದ ಹೊರಗುಳಿಯದಂತೆ ಕ್ರಮ


ಬೆಂಗಳೂರು, (ಮೇ.19): ಮನೆಯಿಂದ ಹೊರಗಡೆ ಬಂದ್ರೆ ಎಲ್ಲಿ ಕೊರೋನಾ ಬಂದ್​ಬಿಡುತ್ತೋ ಅನ್ನೋ ಆತಂಕದಲ್ಲಿ ಜನರು ದಿನ ದೂಡುವಂತಾಗಿದೆ. ಇದರ ಮಧ್ಯೆ ಪೋಷಕರು ಮಕ್ಕಳ ಶಿಕ್ಷಣದ ಭವಿಷ್ಯದ ಬಗ್ಗೆ ಚಿಂತನೆಗಳನ್ನು ಸಹ ಮಾಡುತ್ತಿದ್ದಾರೆ.

ಕೊರೋನಾದಿಂದ ಶಾಲೆಗಳು ಬಂದ್ ಆಗಿ, ಮಕ್ಕಳು ಹೊರಗುಳಿದಿದ್ದಾರೆ. ಆದರೆ, ಈಗ ಮಕ್ಕಳು ಕಲಿಕೆಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗಿದೆ. ತಜ್ಞರ ಸಮಿತಿ ರಚಿಸಿ ಮಾಹಿತಿ ಪಡೆಯಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಭೆ ನಡೆಸಿದರು.

Latest Videos

undefined

2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿಲ್ಲ. ಕೊರೋನಾ ಹಿನ್ನೆಲೆ ನಿಗದಿಯಂತೆ ಶಾಲೆಗಳು ಆರಂಭವಾಗಿಲ್ಲ. ಅದರಿಂದಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಶಿಕ್ಷಣ ಸಚಿವರು ಸಭೆ ನಡೆಸಿ ಚರ್ಚಿಸಿದರು.

10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್ ಎಂದ ಛತ್ತೀಸ್​ಗಢ ಸರ್ಕಾರ

ಕೊವಿಡ್ 3ನೇ ಅಲೆಗೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ. ಸಕಾಲಕ್ಕೆ ಮಕ್ಕಳಿಗೆ ಪಠ್ಯ ಪುಸ್ತಕ ಪೂರೈಕೆಗೆ ಸೂಚನೆ ನೀಡಲಾಗಿದೆ. ಮುಂದಿನ 2 ತಿಂಗಳ ಅವಧಿಯಲ್ಲಿ ಪುಸ್ತಕ ತಲುಪಿಸಬೇಕು. ವಿದ್ಯಾರ್ಥಿಗಳಿಗೆ ಪುಸ್ತಕ ತಲುಪಿಸುವಂತೆ ಅಧಿಕಾರಿಗಳಿಗೆ ಸಚಿವ ಸುರೇಶ್‌ಕುಮಾರ್ ಸೂಚಿಸಿದರು.

ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳನ್ನು ಕಲಿಕೆಯಿಂದ ವಿಮುಖರಾಗದಂತೆ ಕ್ರಮ ಕೈಗೊಳ್ಳಲು ಮತ್ತು ಮಕ್ಕಳ ಶಿಕ್ಷಣದ ಹಕ್ಕು ರಕ್ಷಿಸುವ ಸಲುವಾಗಿ ಪರ್ಯಾಯ ಕ್ರಮಕ್ಕೆ ಸಮಿತಿ ರೂಪು ರೇಷೆ ಸಿದ್ದಪಡಿಸಲಿದ್ದು, ಮುಂದಿನ ಶೈಕ್ಷಣಿಕ ವರ್ಷದ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ. 

click me!