10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್ ಎಂದ ಛತ್ತೀಸ್​ಗಢ ಸರ್ಕಾರ

By Suvarna News  |  First Published May 19, 2021, 10:23 PM IST

* 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಛತ್ತೀಸ್​ಗಢ ಸರ್ಕಾರ
*4.61 ಲಕ್ಷ ಮಕ್ಕಳು ಪರೀಕ್ಷೆಗೆ ರಿಜಿಸ್ಟಾರ್​
* ಶೇ.96.81 ರಷ್ಟು ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್


ರಾಯ್‌ಪುರ, (ಮೇ.19) : ಭಾರತದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಳವಾಗಿದ್ದು, ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ವಿದ್ಯಾರ್ಥಿಗಳ ಭವಿಷ್ಯದ ಮುಖ್ಯ ಘಟ್ಟವಾದ 10 ಹಾಗೂ 12ನೇ ತರಗತಿ ಪರೀಕ್ಷೆಗಳಿಗೆ ಅಡ್ಡಿಯಾಗಿದೆ.

ಇನ್ನು ಎಲ್ಲಾ ರಾಜ್ಯಗಳು ಒಂದೊಂದು ನಿರ್ಧಾರ ತೆಗೆದುಕೊಳ್ಳುತ್ತಿವೆ. ಇದೀಗ, ಛತ್ತೀಸ್​ಗಢ ಸರ್ಕಾರ 10ನೇ ತರತಿಯ ಎಲ್ಲಾ ಮಕ್ಕಳನ್ನ ಪಾಸ್​ ಮಾಡಿ ಆದೇಶ ಹೊರಡಿಸಿದ್ದಾರೆ.

Tap to resize

Latest Videos

undefined

SSLC,PUC ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ

ಛತ್ತೀಸ್​ಗಢ ಬೋರ್ಡ್​ ಆಫ್​ ಸೆಕೆಂಡರಿ ಎಜುಕೇಷನ್​ ಇಂದು (ಬುಧವಾರ) ಈ ನಿರ್ಧಾರವನ್ನ ತೆಗೆದುಕೊಂಡಿದ್ದು, ಎಲ್ಲಾ 10ನೇ ತರಗತಿಯ ಮಕ್ಕಳನ್ನ ಪಾಸ್​ ಮಾಡಿದೆ. ಈವರೆಗೂ 2.24 ವಿದ್ಯಾರ್ಥಿಗಳು, 2.31ವಿದ್ಯಾರ್ಥಿನಿಯರು ಸೇರಿದಂತೆ ಸುಮಾರು 4.61 ಲಕ್ಷ ಮಕ್ಕಳು 10ನೇ ತರಗತಿ ಪರೀಕ್ಷೆ ಬರೆಯೋದಕ್ಕೆ ರಿಜಿಸ್ಟಾರ್​ ಮಾಡಿಕೊಂಡಿದ್ರು.

ಈ ಪೈಕಿ ಶೇ.96.81 ರಷ್ಟು ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್,  9024  ವಿದ್ಯಾರ್ಥಿಗಳು ಸೆಕೆಂಡ್ ಹಾಗೂ 5676  ವಿದ್ಯಾರ್ಥಿಗಳು​ ಮೂರನೇ ಶ್ರೇಯಾಂಕದಲ್ಲಿ ಉತ್ತೀರ್ಣರಾಗಿದ್ದಾರೆ. 

ಇನ್ನು ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

click me!