ಪಠ್ಯ ಪರಿಷ್ಕರಣೆ ಗೊಂದಲ ನಿವಾರಣೆ: ಸಚಿವ ಅಶ್ವತ್ಥ್ ನಾರಾಯಣ್

Published : Jun 12, 2022, 05:00 AM IST
ಪಠ್ಯ ಪರಿಷ್ಕರಣೆ ಗೊಂದಲ ನಿವಾರಣೆ: ಸಚಿವ ಅಶ್ವತ್ಥ್ ನಾರಾಯಣ್

ಸಾರಾಂಶ

ಪಠ್ಯ ಪರಿಷ್ಕರಣೆಯಲ್ಲಿನ ಎಲ್ಲ ಗೊಂದಲಗಳು ನಿವಾರಣೆಯಾಗಿವೆ. ತಪ್ಪಾಗಿದ್ದರೆ ಸರಿಪಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಯಾರ ಭಾವನೆಗೂ ಧಕ್ಕೆ ಮಾಡದಂತೆ ಕ್ರಮ ವಹಿಸಲಾಗಿದೆ. ಈ ಬಗ್ಗೆ ಮತ್ತೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದರು. 

ಹುಬ್ಬಳ್ಳಿ (ಜೂ.12): ಪಠ್ಯ ಪರಿಷ್ಕರಣೆಯಲ್ಲಿನ ಎಲ್ಲ ಗೊಂದಲಗಳು ನಿವಾರಣೆಯಾಗಿವೆ. ತಪ್ಪಾಗಿದ್ದರೆ ಸರಿಪಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಯಾರ ಭಾವನೆಗೂ ಧಕ್ಕೆ ಮಾಡದಂತೆ ಕ್ರಮ ವಹಿಸಲಾಗಿದೆ. ಈ ಬಗ್ಗೆ ಮತ್ತೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯದಲ್ಲಿ ಮೊಘಲರ ವೈಭವೀಕರಣ ಹೆಚ್ಚಾಗಿದೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಸಮರ್ಥಿಸಿಕೊಂಡರು. ಭಾರತದ ಇತಿಹಾಸ ದೊಡ್ಡದಿದೆ. ಸತ್ಯಾಸತ್ಯತೆ ತಿಳಿಸುವ ಕೆಲಸ ಮಾಡಲಾಗುವುದು. ಎಲ್ಲ ವಿಚಾರ, ಕಾಲ ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಸೂಕ್ತ ಕಲಿಕೆಯ ವಾತಾವರಣ ಸೃಷ್ಟಿಸಲಾಗುವುದು ಎಲ್ಲರ ಭಾವನೆ, ಸಲಹೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸೈಬರ್ ವಂಚನೆಗಳಿಗೆ ಪರಿಹಾರದ ಅಗತ್ಯವಿದೆ : ಅಶ್ವತ್ಥ್ ನಾರಾಯಣ 

ಶಾಂತಿ ಕಾಪಾಡಲು ಮನವಿ: ಪ್ರವಾದಿ ಕುರಿತು ಹೇಳಿಕೆಯ ಒಂದು ವಿಷಯನ್ನಿಟ್ಟುಕೊಂಡು ಹಿಂಸಾಚಾರ ನಡೆಸುವುದು ಸರಿಯಲ್ಲ. ಇನ್ನೊಂದು ಧರ್ಮದ ಭಾವನೆಗೆ ಧಕ್ಕೆ ತರಬಾರದು. ಶಾಂತಿ ಕಾಪಾಡಬೇಕಾಗಿದೆ. ಇಂತಹ ವಿಷಯದಲ್ಲಿ ರಾಜಕೀಯ ಮಾಡುವುದು ಖಂಡನೀಯ ಎಂದರು.

ಕರ್ನಾಟಕದಲ್ಲಿ ಮತ್ತೆ ಆಪರೇಷನ್ ಕಮಲ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ. ಆಗಲೇ ರಾಜಕೀಯ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡುತ್ತಿದ್ದಾರೆ.   ಇದರ ಮಧ್ಯೆ ಸಚಿವರೊಬ್ಬರು ಆಪರೇಷನ್ ಕಮಲದ ಸುಳಿವು ಕೊಟ್ಟಿದ್ದಾರೆ. ಹೌದು! ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಮತ್ತಷ್ಟು ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮತ್ತೊಂದು ಆಪರೇಷನ್ ಕಮಲದ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುಟುಂಬ ಪಕ್ಷಗಳ ನಿಲುವಿನಿಂದ ಬೇಸತ್ತು ಕೆಲವರು ಬಿಜೆಪಿಗೆ ಬರುತ್ತಾರೆ ಕಾದು ನೋಡಿ ಎಂದರು. ಪರಿಸ್ಥಿತಿಗೆ ಅನುಗುಣವಾಗಿ ಯಾರ್ಯಾರು ಬರುತ್ತಾರೆ ಅನ್ನೋದು ಗೊತ್ತಾಗುತ್ತೆ. ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ  ಅದೇ ರೀತಿ ಅವಕಾಶಗಳಿವೆ. ಹೀಗಾಗಿ ಇನ್ನೂ ಹಲವು ಜನ ಬಿಜೆಪಿಗೆ ಸೇರಲಿದ್ದಾರೆ ಎಂದರು.

ಯುಪಿ ಹಿಂಸಾಚಾರ ಸರಿಯಲ್ಲ: ಯುಪಿಯಲ್ಲಿ ಹಿಂಸಾಚಾರ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ, ಒಂದು ಹೇಳಿಕೆಯನ್ನಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ, ಇದು ಸರಿಯಲ್ಲ‌. ದೇಶದ ಐಕ್ಯತೆ ವಿಚಾರದಲ್ಲಿ ಹಿಂಸಾಚಾರ ನಡೆಸುವುದು ಸರಿಯಲ್ಲ‌ ಎಂದರು. ರಾಜ್ಯಸಭೆ ಚುನಾವಣೆಯಲ್ಲಿ ಎ ಟೀಮ್ ಬಿ ಟೀಂ ಅಂತ ಅನ್ನೋ ಪ್ರಶ್ನೆಯೇ ಇಲ್ಲ. ನಮ್ಮ ಸಂಖ್ಯಾಬಲ ಜಾಸ್ತಿ ಇತ್ತು. 

ರಾಜ್ಯದಲ್ಲಿ ಶೀಘ್ರವೇ ಡಿಸೈನ್ ನೀತಿ, ಬಿಟಿಎಸ್ ಜತೆಯಲ್ಲೇ ಬೆಂಗಳೂರು ಡಿಸೈನ್ ಫೆಸ್ಟಿವಲ್ ಆಯೋಜನೆ

ನಾವು ಒಂದಾಗಿ ಕೆಲಸ ಮಾಡಿದೆವು. ಜೆಡಿಎಸ್ ಮತ್ತು ಕಾಂಗ್ರೆಸ್ ನವರು ಒಂದಾಗಲಿಲ್ಲ. ಹೀಗಾಗಿ ಸಹಜವಾಗಿ ಗೆಲುವಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಎಲ್ಲ ಗೊಂದಲಗಳು ನಿವಾರಣೆಯಾಗಿದೆ. ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಲು ತೀರ್ಮಾನಿಸಲಾಗಿದೆ. ಪಠ್ಯ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಲಾಗಿದೆ. ಈ ಬಗ್ಗೆ ಮತ್ತೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ