* ಬೆಂಗಳೂರಿನಲ್ಲಿ ಶಾಲೆ ಪ್ರಾರಂಭಿಸಬೇಕು ಅನ್ನೋ ಅಭಿಪ್ರಾಯ ಇದೆ
* ಶಾಲೆ ಪ್ರಾರಂಭಿಸಿ ಅಂತ ನಾನು ಕೂಡ ಸಿಎಂ ಗಮನಕ್ಕೆ ತರತ್ತೇನೆ
* ಶಾಲೆ ಪ್ರಾರಂಭಕ್ಕೆ ರುಪ್ಸಾ ಒತ್ತಾಯ
ಬೆಂಗಳೂರು(ಜ.27): ಸೋಮವಾರದಿಂದ(ಜ.31) ಬೆಂಗಳೂರಿನಲ್ಲಿ(Bengaluru) ಶಾಲೆ ತೆರೆಯಲು ಶಿಕ್ಷಣ ಇಲಾಖೆ(Department of Education) ಚಿಂತನೆ ನಡೆದಿದೆ. ಕೊರೊನಾ ಹೆಚ್ಚಾಗಿದ್ದರಿಂದ ಬೆಂಗಳೂರಿನಲ್ಲಿ 1 ರಿಂದ 9 ನೇ ತರಗತಿಗಳು ಬಂದ್ ಆಗಿವೆ. ಬೆಂಗಳೂರು ಹೊರತುಪಡಿಸಿ ಉಳಿದ ಕಡೆ ಶಾಲೆ ಓಪನ್ ಆಗಿದೆ. ಇದೀಗ ಬೆಂಗಳೂರಿನಲ್ಲಿ ಶಾಲೆ ಪ್ರಾರಂಭಿಸಲು ಸಿಎಂ ಜೊತೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ತಿಳಿಸಿದ್ದಾರೆ.
ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ನಾಗೇಶ್, ನಾವು ಕೂಡ ಬೆಂಗಳೂರಿನಲ್ಲಿ ಶಾಲೆ(School) ಪ್ರಾರಂಭಿಸಬೇಕು ಅನ್ನೋ ಅಭಿಪ್ರಾಯ ಇದೆ. ಶಾಲೆ ಪ್ರಾರಂಭಿಸಿ ಅಂತ ನಾನು ಕೂಡ ಸಿಎಂ ಗಮನಕ್ಕೆ ತರತ್ತೇನೆ. ನಾಳಿನ(ಶುಕ್ರವಾರ) ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ.
undefined
Schools Reopen: ಬೆಂಗಳೂರು ಬಿಟ್ಟು ಉಳಿದೆಡೆ ಶಾಲೆಗಳು ಆರಂಭ
ರಾಜ್ಯದ(Karnataka) ಸುಮಾರು 27 ಜಿಲ್ಲೆಗಳಲ್ಲಿ 250 ಶಾಲೆಗಳು ಮಾತ್ರ ಬಂದ್ ಆಗಿದೆ. ಕೊರೋನಾ(Coronavirus) ಪಾಸಿಟಿವ್ ಬಂದ ಶಾಲೆಯಲ್ಲಿ 4 ದಿನ ಮಾತ್ರ ಬಂದ್ ಆಗಿರುತ್ತೆ. ಅದು ಮುಗಿದ ಮೇಲೆ ಶಾಲೆ ಓಪನ್ ಮಾಡಿಕೊಳ್ತಾರೆ. ಪರೀಕ್ಷೆ ಹತ್ತಿರ ಬರ್ತಿದೆ. ಕೊರೋನಾದಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ. ಹೀಗಾಗಿ ನಾಳಿನ ಸಭೆಯಲ್ಲಿ ಬೆಂಗಳೂರಿನಲ್ಲಿ ಶಾಲೆ ಪ್ರಾರಂಭಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ. 1 ರಿಂದ 9 ನೇ ತರಗತಿವರೆಗೂ ಶಾಲೆ ಪ್ರಾರಂಭಿಸಲು ನಾವು ಈಗಾಗಲೇ ತಯಾರಿ ಮಾಡಿಕೊಂಡಿದ್ದೇವೆ ಅಂತ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.
SSLC ಹಾಗೂ ಪಿಯುಸಿ ಪರೀಕ್ಷೆ ಯಾವಾಗ?
SSLC ಹಾಗೂ ಪಿಯುಸಿ(PUC) ಪರೀಕ್ಷೆ(Exam) ನಿಗದಿಯಾಗಿರುವ ದಿನಾಂಕದಂದೇ ನಡೆಯಲಿದೆ. ಪರೀಕ್ಷೆಯನ್ನ ನಡೆಸಲು ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಪರೀಕ್ಷೆ ಕಡೆ ಗಮನ ಕೊಡಬೇಕು. ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ತರಗತಿ ನಡೆಯಲಿದೆ. ವಿದ್ಯಾರ್ಥಿಗಳಿಗೆ(Students) ಈ ವರ್ಷ ಹಾಜರಾತಿ ಕಡ್ಡಾಯ ಇಲ್ಲ ಅಂತ ತಿಳಿಸಿದ್ದಾರೆ.
ಶಾಲೆ ಪ್ರಾರಂಭಕ್ಕೆ ರುಪ್ಸಾ ಒತ್ತಾಯ
ಬೆಂಗಳೂರಿನಲ್ಲಿ ಶಾಲೆ ಪ್ರಾರಂಭಕ್ಕೆ ರುಪ್ಸಾ(Rupsa) ಒತ್ತಾಯ ಮಾಡಿದೆ. ನಾಳೆ ನಡೆಯುವ ಸಭೆಯಲ್ಲಿ ಶಾಲೆ ಪ್ರಾರಂಭಿಸುವಂತೆ ಮನವಿ ಮಾಡಿಕೊಂಡಿದೆ. ಈಗಾಗಲೇ ಪರೀಕ್ಷೆ ಹತ್ತಿರವಾಗುತ್ತಿದೆ. ಸೋಂಕು ಹೆಚ್ಚಾದ್ರೂ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಹೀಗಾಗಿ ಬೆಂಗಳೂರಿನಲ್ಲೂ ಶಾಲೆಗಳನ್ನ ಪ್ರಾರಂಭಿಸಿ. 1 ರಿಂದ 9 ನೇ ತರಗತಿವರೆಗೆ ಶಾಲೆ ಬಂದ್ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಮಕ್ಕಳಿಗೆ ಅಷ್ಟೊಂದು ಪರಿಣಾಮಕಾರಿಯಾಗಿ ಶಿಕ್ಷಣ ಸಿಗುತ್ತಿಲ್ಲ. ನೀವು ಶಾಲೆ ಪ್ರಾರಂಭಕ್ಕೆ ಅನುಮತಿ ಕೊಡದೇ ಹೋದ್ರೆ ನಾವೇ ಶಾಲೆ ಪ್ರಾರಂಭಿಸುತ್ತೇವೆ. ಸೋಮವಾರದಿಂದ ಬೆಂಗಳೂರಿನಲ್ಲಿ ಶಾಲೆ ಪ್ರಾರಂಭ ಮಾಡೇ ಮಾಡುತ್ತೇವೆ ಅಂತ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
Covid-19 Crisis: ಸೋಂಕು ಹೆಚ್ಚಳ: 25ರ ವರೆಗೆ 9 ಶಾಲೆಗಳಿಗೆ ರಜೆ
ವಿದ್ಯಾರ್ಥಿಗಳು ಸೋಂಕು, ಶಾಲೆ ಬಂದ್
ಕೊಪ್ಪಳ(Koppal) ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪಟ್ಟಣದ ರುದ್ರಸ್ವಾಮಿ ಪ್ರೌಢಶಾಲೆಯ ಮಕ್ಕಳಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಉಪವಿಭಾಗಧಿಕಾರಿ ನಾರಾಯಣರಡ್ಡಿ ಕನಕರೆಡ್ಡಿ ಜ. 29ರ ವರೆಗೆ ಶಾಲೆ ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ರುದ್ರಸ್ವಾಮಿ ಪ್ರೌಢಶಾಲೆಯ 9 ಹಾಗೂ ಚಿಕ್ಕಮಾದಿನಾಳದ ಸರ್ಕಾರಿ ಪ್ರೌಢಶಾಲೆಯ 23 ಮಕ್ಕಳಿಗೆ ಕೋವಿಡ್ ದೃಢಪಟ್ಟಿರುವ ಕುರಿತು ಮಾಹಿತಿ ಪಡೆದಿರುವ ಉಪವಿಭಾಗಧಿಕಾರಿ, ತರಗತಿ ನಡೆಸದಂತೆ ಆದೇಶಿಸಿದ್ದು, ಸೋಂಕು ದೃಢಪಟ್ಟಮಕ್ಕಳನ್ನು ಕೋವಿಡ್ ಕೇರ್‌ಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಜ. 30ರಂದು ಏಕಾಏಕಿ ಶಾಲೆ ಆರಂಭಿಸಬೇಡಿ. ಮಕ್ಕಳ ಕೋವಿಡ್ ವರದಿ ಆಧರಿಸಿ ತರಗತಿ ನಡೆಸಬೇಕು ಎಂದು ಮುಖ್ಯೋಪಾಧ್ಯಾಯರಿಗೆ ಪತ್ರದಲ್ಲಿ ಸೂಚಿಸಿದ್ದಾರೆ.