Covid-19 Crisis: ಕೊರೋನಾ ಮಧ್ಯೆ ಮತ್ತೆ ಶಾಲೆ ಪುನಾರಂಭ?

By Kannadaprabha NewsFirst Published Jan 27, 2022, 7:59 AM IST
Highlights

*  ದಾವಣಗೆರೆ ಜಿಲ್ಲೆಯ 6 ಶಾಲೆ, 11 ಕಾಲೇಜಿಗೆ ರಜೆ ಘೋಷಿಸಿ ಡಿಸಿ ಆದೇಶ
*  246 ಮಕ್ಕಳು ಸೇರಿ 514 ಕೇಸ್‌, ಸೋಂಕಿಗೆ ಮಹಿಳೆ ಬಲಿ
*  ವಾರದ ಕೋವಿಡ್‌ ಪ್ರಕರಣ ಆಧರಿಸಿ ತೀರ್ಮಾನ: ಡಾ ತ್ರಿಲೋಕಚಂದ್ರ
 

ಬೆಂಗಳೂರು(ಜ.27): ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಕೋವಿಡ್‌ ಕಠಿಣ ನಿಯಮಗಳ ಸಡಿಲಿಕೆ ಬಗ್ಗೆ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಾ. ತ್ರಿಲೋಕಚಂದ್ರ ತಿಳಿಸಿದ್ದಾರೆ.

ಬುಧವಾರ ಬಿಬಿಎಂಪಿ(BBMP) ಮುಖ್ಯ ಕಚೇರಿಯ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ(Republic Day) ಆಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಾಗಿದೆ. ಇಡೀ ವಾರದ ಕೋವಿಡ್‌(Covid-19) ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಶುಕ್ರವಾರದವರೆಗೂ ಅಂಕಿ ಅಂಶ, ಆಸ್ಪತ್ರೆ ದಾಖಲಾತಿ ಮುಂತಾದ ಅಂಶ ಆಧರಿಸಿ ಕಠಿಣ ನಿಯಮ ಸಡಿಲಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

Covid 3rd Wave: ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಕೊರೋನಾ ಸೋಂಕು

ಶಾಲೆ(Schools) ಆರಂಭಕ್ಕೂ ಕೊರೋನಾ(Coronavirus) ಸೋಂಕಿತ ಪ್ರಕರಣಗಳ ವರದಿಯನ್ನು ಪರಿಗಣಿಸಲಾಗುವುದು. ಸೋಂಕಿತ ಮಕ್ಕಳ ಸಂಖ್ಯೆ ಹಾಗೂ ಗುಣಮುಖರಾಗುತ್ತಿರುವ ದರದ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ಶುಕ್ರವಾರದ ಅಂಕಿ ಅಂಶ ನೋಡಿ ಎಲ್ಲವನ್ನೂ ತೀರ್ಮಾನ ಮಾಡಲಾಗುವುದು. ಈ ಕುರಿತು ಶುಕ್ರವಾರ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ಆಗಲಿದೆ. ತಜ್ಞರು ಮತ್ತು ಪಾಲಿಕೆ ಸಭೆಯಲ್ಲಿ ಕೊರೋನಾ ಅಂಕಿ ಸಂಖ್ಯೆಗಳ ವರದಿಯನ್ನು ನೀಡಲಿದೆ ಎಂದು ಹೇಳಿದರು.

ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸುವ ಶೇಕಡ 90ರಷ್ಟು ಜನರಲ್ಲಿ ಒಮಿಕ್ರಾನ್‌(Omicron) ಕಂಡು ಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರಾನ್‌ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ದಿನಕ್ಕೆ 300 ಜನರ ಗಂಟಲು ದ್ರವ (ಸ್ವಾಬ್‌) ಪಡೆದು ಜಿನೊಮ್‌ ಸಿಕ್ವೆನ್ಸಿಂಗ್‌ ಪರೀಕ್ಷೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ವಿದ್ಯಾರ್ಥಿಗಳು ಸೋಂಕು, ಶಾಲೆ ಬಂದ್‌

ಕನಕಗಿರಿ:  ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪಟ್ಟಣದ ರುದ್ರಸ್ವಾಮಿ ಪ್ರೌಢಶಾಲೆಯ ಮಕ್ಕಳಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಉಪವಿಭಾಗಧಿಕಾರಿ ನಾರಾಯಣರಡ್ಡಿ ಕನಕರೆಡ್ಡಿ ಜ. 29ರ ವರೆಗೆ ಶಾಲೆ ಬಂದ್‌ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ರುದ್ರಸ್ವಾಮಿ ಪ್ರೌಢಶಾಲೆಯ 9 ಹಾಗೂ ಚಿಕ್ಕಮಾದಿನಾಳದ ಸರ್ಕಾರಿ ಪ್ರೌಢಶಾಲೆಯ 23 ಮಕ್ಕಳಿಗೆ ಕೋವಿಡ್‌ ದೃಢಪಟ್ಟಿರುವ ಕುರಿತು ಮಾಹಿತಿ ಪಡೆದಿರುವ ಉಪವಿಭಾಗಧಿಕಾರಿ, ತರಗತಿ ನಡೆಸದಂತೆ ಆದೇಶಿಸಿದ್ದು, ಸೋಂಕು ದೃಢಪಟ್ಟಮಕ್ಕಳನ್ನು ಕೋವಿಡ್‌ ಕೇರ್‌ಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಜ. 30ರಂದು ಏಕಾಏಕಿ ಶಾಲೆ ಆರಂಭಿಸಬೇಡಿ. ಮಕ್ಕಳ ಕೋವಿಡ್‌ ವರದಿ ಆಧರಿಸಿ ತರಗತಿ ನಡೆಸಬೇಕು ಎಂದು ಮುಖ್ಯೋಪಾಧ್ಯಾಯರಿಗೆ ಪತ್ರದಲ್ಲಿ ಸೂಚಿಸಿದ್ದಾರೆ.

Omicron ಚರ್ಮದ ಮೇಲೆ 8 ಗಂಟೆ, ಪ್ಲಾಸ್ಟಿಕ್‌ ಮೇಲೆ 8 ದಿನ ಜೀವಂತ..!

ಕೊರೋನಾ ಸೋಂಕಿಗೆ ಮಹಿಳೆ ಬಲಿ

ದಾವಣಗೆರೆ: ಜಿಲ್ಲೆಯಲ್ಲಿ 18 ವರ್ಷದ ಒಳಗಿನ 246 ಮಕ್ಕಳು ಸೇರಿದಂತೆ ಬುಧವಾರ 514 ಜನರಲ್ಲಿ ಕೊರೋನಾ ದೃಢಪಟ್ಟಿದ್ದು, ಸೋಂಕಿನಿಂದ ಓರ್ವ ವ್ಯಕ್ತಿ ಸಾವನ್ನಪ್ಪುವುದರೊಂದಿಗೆ ಸಕ್ರಿಯ ಕೇಸ್‌ಗಳ ಸಂಖ್ಯೆ 2462ಕ್ಕೆ ತಲುಪಿದೆ. ಇಲ್ಲಿನ ಶ್ರೀನಿವಾಸ ನಗರದ 46 ವರ್ಷದ ಮಹಿಳೆ ಸೋಂಕಿನಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 610ಕ್ಕೆ ಏರಿದೆ. 

ಜಿಲ್ಲೆಯಲ್ಲಿ(Davanagere) ಬುಧವಾರ ಹೊಸದಾಗಿ 514 ಜನರಲ್ಲಿ ಸೋಂಕು ಕಂಡು ಬಂದಿದ್ದು, 314 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 2462 ಸಕ್ರಿಯ ಕೇಸ್‌ಗಳಲ್ಲಿ ಸೋಂಕಿತರಿಗೆ ಜಿಲ್ಲಾ, ತಾಲೂಕು, ಖಾಸಗಿ ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ದಾವಣಗೆರೆ ತಾಲೂಕಿನಲ್ಲಿ 129 ಪಾಸಿಟಿವ್‌, 133 ಜನ ಬಿಡುಗಡೆ, ಜಗಳೂರು 100 ಪಾಸಿಟಿವ್‌, 52 ಬಿಡುಗಡೆ, ಹೊನ್ನಾಳಿ 97 ಕೇಸ್‌, 56 ಬಿಡುಗಡೆ, ಚನ್ನಗಿರಿ 86 ಪಾಸಿಟಿ ವ್‌, 52 ಬಿಡುಗಡೆ, ಹರಿಹರ 80 ಪಾಸಿಟಿವ್‌, 39 ಬಿಡುಗಡೆ, ಅನ್ಯ ಜಿಲ್ಲೆಯಿಂದ 22 ಪಾಸಿಟಿವ್‌ ಕೇಸ್‌, 7 ಜನ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 55472 ಪಾಸಿ ಟಿವ್‌ ಕೇಸ್‌ ಬಂದಿದ್ದು, 52400 ಜನ ಬಿಡುಗಡೆ, 610 ಜನ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ(Death). ಜಿಲ್ಲೆಯಲ್ಲಿ ದಿನದ ಪಾಸಿಟಿವಿಟಿ ಪ್ರಮಾಣ ಶೇ.40.38 ಇದ್ದು, ವಾರದ ಪಾಸಿಟಿವಿಟಿ ಪ್ರಮಾಣ ಶೇ.11.77ರಷ್ಟು ಇದೆ.
 

click me!