School Holiday ಶಾಲೆ ಬಂದ್ ಬಗ್ಗೆ ಸಭೆ, ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ಕೊಟ್ಟ ಶಿಕ್ಷಣ ಸಚಿವ

Published : Jan 12, 2022, 05:26 PM ISTUpdated : Jan 12, 2022, 05:27 PM IST
School  Holiday ಶಾಲೆ ಬಂದ್ ಬಗ್ಗೆ ಸಭೆ, ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ಕೊಟ್ಟ ಶಿಕ್ಷಣ ಸಚಿವ

ಸಾರಾಂಶ

* ಕರ್ನಾಟಕದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳ * ಶಾಲೆ ಬಂದ್ ಮಾಡುವ ಬಗ್ಗೆ ಪರ-ವಿರೋಧ ಚರ್ಚೆ * ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡ ಶಿಕ್ಷಣ ಸಚಿವರು

ಬೆಂಗಳೂರು, (ಜ.12): ಕರ್ನಾಟಕದಲ್ಲಿ (Karnataka) ಕೊರೋನಾ ಅಬ್ಬರ ಜೋರಾಗುತ್ತಿದೆ. ಅದರಲ್ಲೂ ಶಾಲಾ-ಕಾಲೇಜಿನ(Schools-college ) ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದಿರಂದ ಪೋಷಕರಲ್ಲಿ ಆತಂಕ ಮನೆಮಾಡಿದೆ.

ಈ ಹಿನ್ನೆಲೆಯಲ್ಲಿ ಶಾಲೆಗಳನ್ನ ಬಂದ್ ಮಾಡಬೇಕಾ? ಬೇಡ್ವಾ ಎನ್ನುವ ಗೊಂದಲದಲ್ಲಿ ರಾಜ್ಯ ಸರ್ಕಾರ ಇದೆ. ಅಲ್ಲದೇ ಈ ಬಗ್ಗೆ ಸಾರ್ವಜನಿಕರಲ್ಲೂ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

Coronavirus ಬೆಂಗಳೂರಿನಲ್ಲಿ ಶಾಲೆಗಳ ರಜೆ ಅವಧಿ ವಿಸ್ತರಣೆ, ಶಿಕ್ಷಣ ಇಲಾಖೆ ಆದೇಶ

ಕೆಲವರು ಮಕ್ಕಳ ಹಿತದೃಷ್ಟಯಿಂದ ಶಾಲೆ ಬಂದ್ ಮಾಡುವುದು ಒಳಿತು ಎಂದು ಹೇಳುತ್ತಿದ್ರೆ, ಇನ್ನೂ ಕೆಲವರು ಶಾಲೆ ಬಂದ್ ಮಾಡುವುದು ಬೇಡ. ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ (School)ನಡೆಸುವುದು ಉತ್ತಮ ಎನ್ನುವ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ವಿದ್ಯಾರ್ಥಿಗಳಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಸಭೆ ಮಾಡಿದ್ದು,  ಸಭೆಯಲ್ಲಿ ಶಿಕ್ಷಣ(Education) ಇಲಾಖೆ ಅಧಿಕಾರಿಗಳು, ಡಿಡಿಪಿಐ, ಬಿಇಒಗಳು ಭಾಗಿಯಾಗಿದ್ರು. ಇನ್ನು ಸಭೆಯಲ್ಲಿ ರಾಜ್ಯದ ಶಾಲೆಗಳ ಬಂದ್ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.

ಸಭೆ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕೊರೋನಾ ಕೇಸ್ ಹೆಚ್ಚಾದ್ರೂ ರಾಜ್ಯದಲ್ಲಿ ಶಾಲೆ ಬಂದ್ ಆಗಲ್ಲ. ರಾಜ್ಯದ ಎಲ್ಲ ಶಾಲೆಗಳ ಬಂದ್ ನಿಂದ ಶಿಕ್ಷಣ ಇಲಾಖೆ ಹಿಂದೆ ಸರಿದಿದೆ. ಒಂದು ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಸೋಂಕು ಕಂಡು ಬಂದರೆ. ಎಲ್ಲ ವಿದ್ಯಾರ್ಥಿಗಳಿಗೂ ಕೋವಿಡ್ ಟೆಸ್ಟ್ ಮಾಡಿಸಿ. ತುಂಬಾ ಗಂಭೀರವಾಗಿದ್ರೆ ಮಾತ್ರ ಶಾಲೆ ಬಂದ್ ಮಾಡಿ ಎಂದು ಸೂಚನೆ ಕೊಟ್ಟಿದ್ದಾರೆ.

ಮಕ್ಕಳಿಗೆ ಕಳೆದ ಒಂದೂವರೆ ವರ್ಷಗಳಿಂದ ಸಮರ್ಪಕ ಶಿಕ್ಷಣ ಸಿಕ್ಕಿಲ್ಲ. ನಾವು ಏನೇ ಪರ್ಯಾಯ ಮಾರ್ಗ ಅನುಸರಿಸಿದ್ರೂ ಅಷ್ಟಕಷ್ಟೆ. ಭೌತಿಕ ತರಗತಿಗಳಷ್ಟೇ ಮಕ್ಕಳ ಭವಿಷ್ಯಕ್ಕೆ ಅಡಿಪಾಯ. ಪರ್ಯಾಯ ಮಾರ್ಗ ಪರಿಣಾಮಕಾರಿ ಆಗೊಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ಶಾಲೆ ಬಂದ್ ಮಾಡುವಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಕಳೆದ 2 ಅಲೆಗಳಲ್ಲಿ ಶಾಲಾ ಕಾಲೇಜ್​ಗಳನ್ನ ಸಂಪೂರ್ಣವಾಗಿ ‌ಮುಚ್ಚಲಾಗಿತ್ತು. ಈ ಭಾರೀ ಪಾಸಿಟಿವಿಟಿ ರೇಟ್ ನೋಡಿಕೊಂಡು ಅಯಾ ಜಿಲ್ಲೆ, ತಾಲೂಕು ಮಟ್ಟದ ಶಾಲೆಗಳನ್ನ ಕ್ಲೋಸ್​ಗೆ ನಿರ್ಧಾರ ಮಾಡಲಾಗಿದೆ. ಶಾಲೆ ಬಂದ್ ಆದ್ರೂ, ಆನ್ ಲೈನ್ ಹಾಗೂ ವಿದ್ಯಾಗಮದ ಮೂಲಕ ಮಕ್ಕಳಿಗೆ ಶಿಕ್ಷಣ ‌ಕೊಡುವಂತೆ ಸಚಿವರು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಹಾಗೂ ಡಿಡಿಪಿಐ ಹಾಗೂ ಬಿಇಒ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಬಂದ್ ಅಧಿಕಾರ
ಯೆಸ್...ಶಾಲೆ ಬಂದ್ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರ, ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದೆ. ಜಿಲ್ಲೆಯಲ್ಲಿ ಕೊರೋನಾ ಹೆಚ್ಚಾಗಿ ಪಾಸಿಟಿವಿಟಿ ದರ ಹೆಚ್ಚಾದ್ರೆ, ಶಾಲೆ ಬಂದ್ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಒಂದು ವೇಳೆ ಪಾಸಿಟಿವಿಟಿ ದರ ಕಡಿಮೆ ಇದ್ದು, ಕೇವಲ ಎಲ್ಲೋ ಒಂದು ಶಾಲೆಯ ವಿದ್ಯಾರ್ಥಿಗೆ ಸೋಂಕು ತಗುಲಿದ್ರೆ, ಆ ಶಾಲೆಗೆ ಮಾತ್ರ ರಜೆ ಘೋಷಣೆ ಮಾಡಬಹುದು.

ಬೆಂಗ್ಳೂರಲ್ಲಿ ಶಾಳೆ ಬಂದ್ ವಿಸ್ತರಣೆ
ಕೊರೋನಾ 3ನೇ ಅಲೆ ವ್ಯಾಪಕವಾಗಿ (Corona Third wave) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ(Bengaluru) ಜನವರಿ 31ರವರೆಗೆ ಶಾಲೆಗಳಿಗೆ ರಜೆ ವಿಸ್ತರಿಸಿ ಕರ್ನಾಟಕ ಶಿಕ್ಷಣ ಇಲಾಖೆ(Karnataka Education Department) ಆದೇಶ ಹೊರಡಿಸಿದೆ. 

ಈ ಮೊದಲು ಜನವರಿ 19ರವರೆಗೆ ಮಾತ್ರ ಶಾಲೆಗಳಿಗೆ ರಜೆ (Schools holiday) ನೀಡಲಾಗಿತ್ತು. ಆದ್ರೆ, ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಪ್ರಮಾಣ ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಸೋಂಕು ಮಿತಿ ಮೀರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ರಜೆ ವಿಸ್ತರಣೆ ಮಾಡಲಾಗಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ