ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಟರ್ಮ್ 1, 2022 ಫಲಿತಾಂಶವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ. ವರದಿಗಳ ಪ್ರಕಾರ ಸಿಬಿಎಸ್‌ಇ'ಯು 10ನೇ ತರಗತಿ ಮತ್ತು 12 ನೇ ತರಗತಿ ಟರ್ಮ್ 1 ಪರೀಕ್ಷೆಯ ಫಲಿತಾಂಶ ಪ್ರಕಟಿಸಲಿದೆ.
ನವದೆಹಲಿ(ಜ.12): ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಟರ್ಮ್ 1, 2022 ಫಲಿತಾಂಶವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ. ವರದಿಗಳ ಪ್ರಕಾರ ಸಿಬಿಎಸ್‌ಇ'ಯು 10ನೇ ತರಗತಿ ಮತ್ತು 12 ನೇ ತರಗತಿ ಟರ್ಮ್ 1 ಪರೀಕ್ಷೆಯ ಫಲಿತಾಂಶ ಪ್ರಕಟಿಸಲಿದೆ. ಆದರೆ 10, 12 ನೇ ತರಗತಿಯ ಫಲಿತಾಂಶದ ದಿನಾಂಕವನ್ನು ಮಂಡಳಿಯು ಇನ್ನೂ ಬಹಿರಂಗಪಡಿಸಿಲ್ಲ. 10, 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು CBSEಯ (Central Board of Secondary Education) ಅಧಿಕೃತ ಸೈಟ್ ನಲ್ಲಿ https://www.cbse.gov.in/ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು.
ಸದ್ಯ ವಿದ್ಯಾರ್ಥಿಗಳು ಟರ್ಮ್ 1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನಷ್ಟೇ ಬಿಡುಗಡೆ ಮಾಡಲಿದ್ದು, ವಿದ್ಯಾರ್ಥಿಗಳು ಪಾಸ್ ಅಥವಾ ಫೇಲ್ ಎಂಬುದನ್ನು ತಿಳಿಸುವುದಿಲ್ಲ ಎಂದು ತಿಳಿದುಬಂದಿದೆ. ಸಿಬಿಎಸ್‌ಇ ಟರ್ಮ್ 1 ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಲು ವಿದ್ಯಾರ್ಥಿಗಳು cbse.gov.in ಅಥವಾ cbseresults.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.
ಫಲಿತಾಂಶವನ್ನು ಟರ್ಮ್ 1 ಪರೀಕ್ಷೆ ಮತ್ತು ಇಂಟರ್‌ನಲ್ ಮಾರ್ಕ್ಸ್ ಹಾಗೂ ಟರ್ಮ್ 2 ಪರೀಕ್ಷೆ ಮತ್ತು ಇಂಟರ್‌ನಲ್ ಮಾರ್ಕ್ಸ್ ಆಧಾರದಲ್ಲಿ ಅಂದರೆ ಶೇಕಡ.50 ಅಂಕಗಳ ವ್ಹೇಟೇಜ್ ನೀಡಿ ಫಲಿತಾಂಶ ಪ್ರಕಟಿಸಲಾಗುತ್ತದೆ.
IGNOU PhD: ಪಿಎಚ್‌ಡಿ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆ ವಿಸ್ತರಿಸಿದ ಇಗ್ನೋ
ಸಿಬಿಎಸ್‌ಇ ಫಲಿತಾಂಶ ಚೆಕ್ ಮಾಡುವ ವಿಧಗಳು: ವಿದ್ಯಾರ್ಥಿಗಳು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್ cbse.gov.in ಅಥವಾ cbseresults.nic.in ಗೆ ಭೇಟಿ ನೀಡಿ. ಓಪನ್ ಅದ ಪೇಜ್‌ನಲ್ಲಿ ರಿಜಿಸ್ಟ್ರೇಷನ್ ನಂಬರ್ ನೀಡಿ ಲಾಗಿನ್ ಆಗಿ. ಫಲಿತಾಂಶ ಚೆಕ್ ಮಾಡಿ. ಅಗತ್ಯವಿದ್ದಲ್ಲಿ ದಾಖಲೆಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಡಿಜಿ ಲಾಕರ್ ಮೂಲಕವು ವೀಕ್ಷಿಸಬಹುದು: ಡಿಜಿಲಾಕರ್ ಆ್ಯಪ್‌ನಲ್ಲಿ ಅಭ್ಯರ್ಥಿಗಳು ತಮ್ಮ 10, 12ನೇ ತರಗತಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಅಥವಾ ವೆಬ್‌ಸೈಟ್ digilocker.gov.in ನಲ್ಲಿ ಪರಿಶೀಲಿಸಬಹುದು.
ಉಮಂಗ್ ಮೂಲಕವು ಪರಿಶೀಲಿಸಬಹುದು: CBSE ವಿದ್ಯಾರ್ಥಿಗಳು UMANG ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೂಡ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. UMANG ಅಪ್ಲಿಕೇಶನ್ ಅನ್ನು Google Play ಅಪ್ಲಿಕೇಶನ್ ಮೂಲಕ ಡೌನ್‌ಲೋಡ್ ಮಾಡಬಹುದು.
Multiple Universities Admission Tips: ವಿಶ್ವವಿದ್ಯಾಲಯ ಪ್ರವೇಶ ಹೇಗೆ? ಗೊಂದಲಗಳಿವೆಯೇ?
ಒಬ್ಬಳೇ ಹೆಣ್ಣು ಮಗಳಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ: ಸಿಬಿಎಸ್‌ಇ ಯು ಪೋಷಕರಿಗೆ ಒಬ್ಬಳೆ ಹೆಣ್ಣು ಮಗಳಾದ ವಿದ್ಯಾರ್ಥಿಗಳಿಂದ ಮೆರಿಟ್ ವಿದ್ಯಾರ್ಥಿ ವೇತನ (Merit Scholarship) ಸ್ಕೀಮ್‌ಗೆ ಅರ್ಜಿ ಆಹ್ವಾನಿಸಿದೆ. ಜೊತೆಗೆ ಹಿಂದಿನ ವರ್ಷ ಅಂದರೆ 2020ರಲ್ಲಿ ಮೆರಿಟ್ ಸ್ಕಾಲರ್‌ಶಿಪ್ ಯೋಜನೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿರುವವರು ಕೂಡ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಿಬಿಎಸ್‌ಇ ಸಿಂಗಲ್ ಗರ್ಲ್ ಚೈಲ್ಡ್ ಮೆರಿಟ್ (CBSE Merit Scholarship Scheme for Single Girl Child) ವಿದ್ಯಾರ್ಥಿ ವೇತನ ಸ್ಕೀಮ್‌ಗೆ ಬೋರ್ಡ್‌ನ ಅಧಿಕೃತ ವೆಬ್‌ಸೈಟ್ www.cbse.gov.in ಗೆ ಭೇಡಿ ನೀಡಿ ಜನವರಿ 17, 2022 ರೊಳಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
ಅರ್ಹತೆಗಳು: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಹೆತ್ತವರಿಗೆ ಒಬ್ಬಳೇ ಹೆಣ್ಣು ಮಗುವಾಗಿರಬೇಕು. 10ನೇ ತರಗತಿ ಪಾಸ್ ಮಾಡಿ 11 ನೇ ತರಗತಿಯನ್ನು ಸಿಬಿಎಸ್‌ಇ ಸಂಯೋಜಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. 10ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 60% ರಷ್ಟು ಗ್ರೇಡ್ ಪಾಯಿಂಟ್ ಸರಾಸರಿಯನ್ನು ಹೊಂದಿರಬೇಕು. 10 ನೇ ತರಗತಿಯಲ್ಲಿ ಅರ್ಜಿದಾರರ ಬೋಧನಾ ಶುಲ್ಕವು ತಿಂಗಳಿಗೆ ರೂ 1500 ಮೀರಬಾರದು. ವಿದ್ಯಾರ್ಥಿನಿಯು 10 ಮತ್ತು 12 ನೇ ತರಗತಿಗಳಿಗೆ ಸಿಬಿಎಸ್‌ಇ ಶಾಲೆಗೆ ದಾಖಲಾಗಿರಬೇಕು. ಪ್ಲಸ್-2 ಕೋರ್ಸ್‌ಗಳಲ್ಲಿನ ಶಾಲಾ ಶುಲ್ಕವು 10 ನೇ ತರಗತಿಗಿಂತ ಶೇಕಡಾ 10% ಕ್ಕಿಂತ ಹೆಚ್ಚಿರಬಾರದು.