*ಪ್ರೊಫೆಸನಲ್ ಕರಿಯರ್ ರೂಪಿಸಿಕೊಳ್ಳಲು ಸಾರ್ವಜನಿಕ ಸಂಪರ್ಕ ವೃತ್ತಿಪರ ಉದ್ಯೋಗಗಳು
*ಸರ್ಕಾರಿ, ಖಾಸಗಿ, ಪಬ್ಲಿಕ್ ಕಂಪನಿಗಳಲ್ಲೂ ಹೆಚ್ಚಿನ ಉದ್ಯೋಗಗಳು ದೊರೆಯುತ್ತವೆ
*ಜರ್ನಲಿಸಮ್ ಓದುತ್ತಿದ್ದರೆ, ಈ ಕ್ಷೇತ್ರದತ್ತಲೂ ವಿದ್ಯಾರ್ಥಿಗಳು ತಮ್ಮ ಲಕ್ ಪರೀಕ್ಷಿಸಬಹುದು
ಬೆಂಗಳೂರು(ಜ.26): ಪ್ರೊಫೆಷನಲ್ ಕರಿಯರ್ ರೂಪಿಸಿಕೊಳ್ಳಲು ಬಯಸುವವರಿಗೆ ಪಬ್ಲಿಕ್ ರಿಲೇಶನ್ಸ್ (PR) ವೃತ್ತಿಪರರ ಹುದ್ದೆಗಳು ಬೆಸ್ಟ್ ಎನ್ನಬಹುದು. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ವಿವಿಧ ವಲಯಗಳು, ಉದ್ಯಮಗಳಲ್ಲಿ ಪಬ್ಲಿಕ್ ರಿಲೇಷನ್ ಆಫೀಸರ್ (Public Relation Officer) ಹುದ್ದೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಕೇವಲ ಖಾಸಗಿ ಸಂಸ್ಥೆಗಳಲ್ಲಷ್ಟೇ ಅಲ್ಲ, ಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲೂ ಸಂಪರ್ಕ ಅಧಿಕಾರಿ ಹುದ್ದೆಗಳಿರುತ್ತವೆ. ದೊಡ್ಡ ದೊಡ್ಡ ಉದ್ಯಮಗಳು ಹಾಗೂ ಸಾರ್ವಜನಿಕರ ನಡುವೆ ಸೇತುವೆಯಾಗಿ ಅಧಿಕಾರಿಯೊಬ್ಬರು ನಿಲ್ಲಬೇಕಾಗುತ್ತದೆ. ಆ ಅಧಿಕಾರಿಯೇ ಸಾರ್ವಜನಿಕ ಸಂಪರ್ಕ ಅಧಿಕಾರಿ. ನೀವು ಬುದ್ಧಿವಂತರಾಗಿದ್ದರೆ ಮತ್ತು ಉತ್ತಮ ಸಂವಹನಕಾರರಾಗಿದ್ದರೆ, ಇದು ನಿಮಗೆ ಉತ್ತಮ ವೃತ್ತಿಯಾಗಿರಬಹುದು. ಗ್ರಾಹಕರ ಅಭಿಪ್ರಾಯ ಮತ್ತು ನಡವಳಿಕೆ ಮೇಲೆ ಮಾಧ್ಯಮ ಕೇಂದ್ರಗಳ ಗಮನವನ್ನು ಸೆಳೆಯಲು ಕಾರ್ಯತಂತ್ರಗಳನ್ನು ಸಿದ್ಧಪಡಿಸುವುದು ಪಿಆರ್ ಕೆಲಸವಾಗಿರುತ್ತದೆ.
PR ವೃತ್ತಿಪರರಾಗಿ, ನೀವು ಸಂಸ್ಥೆಗೆ ಆಂತರಿಕವಾಗಿ ಕೆಲಸ ಮಾಡಬಹುದು ಅಥವಾ ಗ್ರಾಹಕರ ವ್ಯಾಪ್ತಿಯೊಂದಿಗೆ ವ್ಯವಹರಿಸುವ ಏಜೆನ್ಸಿಯ ಭಾಗವಾಗಿರಬಹುದು. ಸೆಲೆಬ್ರಿಟಿಗಳೊಂದಿಗೆ ಬೆರೆಯುವುದು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಕೆಲಸವು ಮನಮೋಹಕ ಮತ್ತು ಲಾಭದಾಯಕವಾಗಿರುತ್ತದೆ. PR ಪತ್ರಿಕೋದ್ಯಮ (Journalism), ಮಾಧ್ಯಮ ವಿಜ್ಞಾನ (Media Science), ಜಾಹೀರಾತು (Advertisement) ಮತ್ತು ಕಾರ್ಪೊರೇಟ್ ಸಂವಹನ (Corporate Communication) ಗಳಂತಹ ಸಂವಹನ ಕ್ಷೇತ್ರಗಳನ್ನು ಒಳಗೊಂಡಿದೆ.
ಯಾವುದಾದರೂ ವಿಷಯದಲ್ಲಿ ಪದವಿ ಮುಗಿದ ನಂತರ, ನೀವು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು. ನೀವು ಸಾರ್ವಜನಿಕ ಸಂಪರ್ಕ ಅಥವಾ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೊಮಾವನ್ನು ಮುಂದುವರಿಸಲು ಆಯ್ಕೆ ಮಾಡಬಹುದು. PR ಪದವಿ ಅಥವಾ ಕೋರ್ಸ್ ಪಡೆದವರು ಹಲವು ರೀತಿಯ ಹುದ್ದೆಗಳನ್ನು ನಿರ್ವಹಿಸಬಹುದು. ಪಬ್ಲಿಕ್ ರಿಲೇಶನ್ಸ್ ನಿಂದ ಉತ್ತಮ ವೃತ್ತಿಗಳನ್ನ ಆಯ್ಕೆ ಮಾಡಿಕೊಳ್ಳಬಹುದು.
EAST COAST RAILWAY RECRUITMENT 2022: ನರ್ಸಿಂಗ್ ಸೂಪರಿಂಟೆಂಡೆಂಟ್ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
Public relations executive: ಈವೆಂಟ್‌ಗಳನ್ನು ಸಂಘಟಿಸಲು ಮತ್ತು ಕ್ಲೈಂಟ್‌ನ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಲು, ಪ್ರಚಾರಗಳನ್ನು ಕಾರ್ಯಗತಗೊಳಿಸಲು ಪತ್ರಿಕಾ ಸಂವಹನದ ಉಸ್ತುವಾರಿಯನ್ನು ನಿರ್ವಹಿಸಬೇಕಾಗುತ್ತದೆ. ಪಬ್ಲಿಕ್ ರಿಲೇಶನ್ಸ್ ಎಕ್ಸಿಕ್ಯೂಟಿವ್ , ತಮ್ಮ ಗ್ರಾಹಕರ ವಿಶ್ವಾಸಾರ್ಹತೆಯನ್ನು ನಿರ್ವಹಿಸಲು ಎಲ್ಲಾ ರೀತಿಯ ಮಾಧ್ಯಮ ಮತ್ತು ನೆಟ್‌ವರ್ಕಿಂಗ್ ಅನ್ನು ಬಳಸುತ್ತಾರೆ.
Media relations officer: ಇವರು ಮಾಧ್ಯಮಗಳ ಮೂಲಕ ನಿರ್ದಿಷ್ಟ ವ್ಯಾಪಾರ, ಏಜೆನ್ಸಿ, ಸಾರ್ವಜನಿಕ ವ್ಯಕ್ತಿ ಅಥವಾ ಉತ್ಪನ್ನಕ್ಕಾಗಿ ಧನಾತ್ಮಕ ಚಿತ್ರಣವನ್ನು ರೂಪಿಸಿ ನಿರ್ವಹಿಸುತ್ತಾರೆ. ಮಾರ್ಕೆಟಿಂಗ್ ಪ್ರಚಾರಗಳು ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಾರೆ.
Communications specialist: ಈ ವೃತ್ತಿಪರರು ಕಂಪನಿಯ ಆಂತರಿಕ ಮತ್ತು ಬಾಹ್ಯ ಸಂವಹನಗಳನ್ನು ನಿರ್ವಹಿಸುವ ಮೂಲಕ ವ್ಯವಹಾರಗಳಿಗೆ ಸಹಾಯ ಮಾಡುತ್ತಾರೆ. ಕಂಪನಿಯ ಕಾರ್ಯಾಚರಣೆಗಳ ಬಗ್ಗೆ ಹೊರಗಿನ ಪ್ರಪಂಚಕ್ಕೆ ತಿಳಿಸುವ ಕೆಲಸ ಮಾಡುತ್ತಾರೆ. ಪತ್ರಿಕಾ ಪ್ರಕಟಣೆ ಹೊರಡಿಸುವುದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸುವುದು, ದಾಖಲೆಗಳನ್ನು ಸಂಗ್ರಹಿಸುವುದು, ಈವೆಂಟ್ ಮತ್ತು ಪತ್ರಿಕಾಗೋಷ್ಠಿಗಳನ್ನು ಆಯೋಜಿಸುತ್ತಾರೆ.
RRB NTPC CBT 2 Exam 2022 : ರೈಲ್ವೆ ನೇಮಕಾತಿಯ ಸಿಬಿಟಿ-2 ಪರೀಕ್ಷೆಯ ದಿನಾಂಕ ಬಿಡುಗಡೆ
Events executive: ಇವರು ಕ್ಲೈಂಟ್‌ಗಳು ಮತ್ತು ಮಾರಾಟಗಾರರೊಂದಿಗೆ ನಿಕಟವಾಗಿ ಸಹಕರಿಸುವುದು, ಲಾಜಿಸ್ಟಿಕ್ಸ್ ಅನ್ನು ಮೇಲ್ವಿಚಾರಣೆ ಮಾಡುವುದು, ಬಜೆಟ್ ಮತ್ತು ಬುಕ್‌ಕೀಪಿಂಗ್, ಅಪಾಯ ನಿರ್ವಹಣೆ ಮತ್ತು ಈವೆಂಟ್ ದಾಖಲಾತಿಗಳಂತಹ ಕಾರ್ಯಗಳನ್ನು ನಿರ್ವಹಿಸುತ್ತಾರೆ.
Guest relations officer: ಇವರು ಸಾಮಾನ್ಯವಾಗಿ ಆತಿಥ್ಯ ಉದ್ಯಮದಲ್ಲಿ ಕೆಲಸ ಮಾಡುವ ಮತ್ತು ಅತಿಥಿಗಳಿಗೆ ಸಹಾಯ ಮಾಡುವ ಗ್ರಾಹಕ ಸೇವಾ ಪ್ರತಿನಿಧಿಗಳಾಗಿ ಕೆಲಸ ನಿರ್ವಹಿಸುತ್ತಾರೆ. ಸಂದರ್ಶಕರಾಗಿಯೂ ಕೆಲಸ ನಿರ್ವಹಿಸುತ್ತಾರೆ,
Customer service manager: ಇವರು ತಮ್ಮ ಬೆಂಬಲ ತಂಡವನ್ನು ನಿರ್ವಹಿಸುವ ಮತ್ತು ಪ್ರೇರೇಪಿಸುವ ಮೂಲಕ ಗ್ರಾಹಕ ಸೇವೆಯನ್ನು ಒದಗಿಸುತ್ತಾರೆ. ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಗ್ರಾಹಕ ಸೇವಾ ಉದ್ದೇಶಗಳನ್ನು ಅಭಿವೃದ್ಧಿಪಡಿಸುತ್ತಾರೆ.