Education in India: ಕೌಶಲ್ಯಾಧಾರಿತ ಶಿಕ್ಷಣವೇ ದೇಶದ ಭವಿಷ್ಯ: ಕೇಂದ್ರ ಸಚಿವ ಆರ್‌ಸಿ

By Kannadaprabha News  |  First Published Jan 26, 2022, 5:30 AM IST

*   ಇನ್ನು ಮುಂದೆ ವಿವಿಧ ಕೌಶಲ್ಯ, ಡಿಜಿಟಲ್‌ ಕೌಶಲ್ಯಆಧರಿತ ಉದ್ಯೋಗಾವಕಾಶ
*   ಪೋಷಕರು ಮಕ್ಕಳಿಗೆ ಬಹುಕೌಶಲ್ಯ ತರಬೇತಿ ಕೊಡಿಸಬೇಕು
*   ಭಾರತದ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ
 


ಬೆಂಗಳೂರು(ಜ.26):  ಮುಂದಿನ ಎರಡು ದಶಕದಲ್ಲಿ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗುವ ಬಹುಪಾಲು ಉದ್ಯೋಗಾವಕಾಶಗಳು(Jobs) ವಿವಿಧ ಕೌಶಲ್ಯ ಮತ್ತು ಡಿಜಿಟಲ್‌ ಕೌಶಲ್ಯ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಬಹು ಕೌಶಲ್ಯ ತರಬೇತಿ ಕೊಡಿಸುವುದು ಬಹಳ ಮುಖ್ಯ. ಕೌಶಲ್ಯಾಧಾರಿತ ಶಿಕ್ಷಣವೇ ಭಾರತದ(India) ಭವಿಷ್ಯ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮ್ಮಿಟ್‌ ಇಂಡಿಯಾ ವತಿಯಿಂದ ಟೆಕ್‌ ಅವತ್‌ ಗಾರ್ಡ್‌ ಸಂಸ್ಥೆಯ ಸಹಯೋಗದಲ್ಲಿ ವರ್ಚುವಲ್ಲಾಗಿ ಆಯೋಜಿಸಿರುವ ‘ವಸುದೈವ ಶಿಕ್ಷಣ ಸಮ್ಮೇಳನ-2022’ರ ಎರಡನೇ ದಿನದ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣದ ಜತೆಗೆ ಕೌಶಲ್ಯ ತರಬೇತಿಯೊಂದಿಗೆ ನಮ್ಮ ಮಕ್ಕಳನ್ನು ಮುಂದಿನ ಜಾಗತಿಕ ಅವಕಾಶಗಳಲ್ಲಿ ಸ್ಪರ್ಧಿಸಲು ಅಣಿಗೊಳಿಸಬೇಕಾಗಿದೆ. ಇದು ಭಾರತದ ಭವಿಷ್ಯವನ್ನು ರೂಪಿಸಲಿದೆ.

Latest Videos

undefined

Guest Lecturers: ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಗಳ ಮಹಾಪೂರ

ಜಾಗತೀಕರಣದಿಂದ(Globalization) ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಕೌಶಲ್ಯ ಹಾಗೂ ಡಿಜಿಟಲ್‌ ಕೌಶಲ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಹಾಗಾಗಿ ನಮ್ಮ ದೇಶದ ಮಕ್ಕಳಿಗೆ(Children) ಪೋಷಕರು ಬಹು ಕೌಶಲ್ಯ ತರಬೇತಿಗೆ ಒತ್ತು ನೀಡಬೇಕು. ಅದರಲ್ಲೂ ಡಿಜಿಟಲ್‌ ಕೌಶಲ್ಯ ತರಬೇತಿ(Digital Skills Training) ಅಗತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಭಾರತ ಅಥವಾ ಭಾರತೀಯರು ಬರುವ ದಿನಗಳಲ್ಲಿ ಕೇವಲ ತಮ್ಮ ದೇಶದ ಆರ್ಥಿಕತೆಯ(Economy) ಅಭಿವೃದ್ಧಿಯಷ್ಟೇ ಅಲ್ಲದೆ, ಜಾಗತಿಕ ಆರ್ಥಿಕತೆಯನ್ನು ಸುಧಾರಿಸುವ ಶಕ್ತಿಯಾಗಲಿದ್ದಾರೆ. ಇದು ಈಗಾಗಲೇ ಜಗತ್ತಿನ ರಾಷ್ಟ್ರಗಳಿಗೆ ಅರ್ಥವಾಗಿದ್ದು ಹಾಗಾಗಿಯೇ ಜಗತ್ತು ಭಾರತವನ್ನು ಬಹಳ ಗೌರವದಿಂದ ಕಾಣುತ್ತಿವೆ. ಇದನ್ನು ಇತ್ತೀಚೆಗೆ ದುಬೈನಲ್ಲಿ(Dubai) ನಡೆದ ಜಾಗತಿಕ ಕೌಶಲ್ಯಾಭಿವೃದ್ಧಿ ಸಚಿವರ ಸಮ್ಮೇಳನದಲ್ಲಿ ಅಲ್ಲಿನ ಸರ್ಕಾರದ ಹಿರಿಯ ನಾಯಕರೊಬ್ಬರು ಸಾರ್ವಜನಿಕವಾಗಿ ಹೇಳಿದರು. ಹಾಗಾಗಿ ವಿಶ್ವದ ಕಣ್ಣು ಇಂದು ಭಾರತದ ಮೇಲಿದೆ ಎಂದು ಸಚಿವರು ತಿಳಿಸಿದರು.

ಶಿಕ್ಷಣ ಮತ್ತು ಕೌಶಲ್ಯ ಎರಡೂ ಮುಖ್ಯ. ಶಿಕ್ಷಣ(Education) ನಮ್ಮ ಸಮಾಜ, ಪರಿಸರ, ವ್ಯವಸ್ಥೆಯ ಅಧ್ಯಯನಕ್ಕೆ ಕಾರಣವಾದರೆ, ಕೌಶಲ್ಯ ತರಬೇತಿ ನಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ನೇತೃತ್ವದ ನಮ್ಮ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy) ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.

SSLC Exam ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ರಾಜ್ಯ ಸಚಿವೆ ಅನ್ನಪೂರ್ಣದೇವಿ, ಆದಿವಾಸಿ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ರೇಣುಕಾ ಸಿಂಗ್‌, ಎನ್‌ಇಪಿ ಕರಡು ರಚನಾ ಸಮಿತಿ ಸದಸ್ಯ ಎಂ.ಕೆ.ಶ್ರೀಧರ್‌, ಎನ್‌ಸಿಇಆರ್‌ಟಿ ನಿರ್ದೇಶಕ ಬಿಸ್ವಜಿತ್‌ ಸಹ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಎಂಎ ಕೋರ್ಸ್ ಆರಂಭ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (Indira Ghandhi National Open University- IGNOU) ಮಾಸ್ಟರ್ ಆಫ್ ಆರ್ಟ್ಸ್ (Corporate Social Responsibility- MACSR) ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (IGNOU) ಮುಕ್ತ ಮತ್ತು ದೂರಶಿಕ್ಷಣ (Open and Distance Learning -ODL) ಮೋಡ್‌ನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ-MACSR) ಕಾರ್ಯಕ್ರಮವನ್ನು ನೀಡುತ್ತಿದೆ.IGNOU ಈ ಕಾರ್ಯಕ್ರಮವನ್ನು ಜನವರಿ ಮತ್ತು ಜುಲೈ ಎರಡೂ ಅವಧಿಗಳಲ್ಲಿ ನೀಡಲಾಗುತ್ತದೆ.  IGNOU ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕುರಿತ MA ಪ್ರೋಗ್ರಾಂನಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಈ  ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನಾಂಕವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ignouadmission.samarth.edu.inನಲ್ಲಿ ಅರ್ಜಿ ಸಲ್ಲಿಸಬಹುದು. 
 

click me!