ವಿವಾದಕ್ಕೆ ಕಾರಣವಾಯ್ತು ಕುವೆಂಪು ವಿಶ್ವವಿದ್ಯಾನಿಲಯದಿಂದ ಹೊರಬಿದ್ದ ಎಂದೂ ಕಂಡರಿಯದಂತಹ ಸುತ್ತೋಲೆ!

By Gowthami KFirst Published May 29, 2023, 10:58 AM IST
Highlights

 ಕುವೆಂಪು ವಿಶ್ವವಿದ್ಯಾನಿಲಯದಿಂದ ಹೊರ ಬಿದ್ದಿರುವ ಹೊಸದೊಂದು ಸುತ್ತೋಲೆ ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ. 

ಶಿವಮೊಗ್ಗ (ಮೇ.29): ರಾಜ್ಯದ ಯಾವ ವಿಶ್ವವಿದ್ಯಾಲಯಗಳಲ್ಲೂ ಇರದ ಸುತ್ತೋಲೆ  ಕುವೆಂಪು ವಿಶ್ವವಿದ್ಯಾನಿಲಯದಿಂದ ಹೊರ ಬಿದ್ದಿದೆ. ಈ ಮೂಲಕ ಹೊಸ ರೀತಿಯ ಸುತ್ತೋಲೆ ಹೊರಡಿಸಿ ರಾಜ್ಯದಲ್ಲೇ ಸಂಚಲನ ಮೂಡಿಸಿದೆ.  ಯಾವ ವಿಶ್ವ ವಿದ್ಯಾನಿಲಯಗಳು ಹೊರಡಿಸದ ಸುತ್ತೋಲೆ ಹೊರಡಿಸಿ ಕುವೆಂಪು ವಿವಿಯ ಕುಲಪತಿಗಳು ಚರ್ಚೆಗೆ ಗ್ರಾಸವಾಗಿದ್ದಾರೆ. ತಮ್ಮ ಮಗಳ ಜನ್ಮದಿನದ ಔತಣಕೂಟಕ್ಕೆ ಆಗಮಿಸುವಂತೆ ಕುವೆಂಪು ವಿಶ್ವವಿ​ದ್ಯಾ​ಲಯ ಕುಲಪತಿ ವೀರಭದ್ರಪ್ಪ ಅವರು ವಿ.ವಿ. ಲೆಟರ್‌ಹೆಡ್‌ನಲ್ಲಿ ಸುತ್ತೋಲೆ ಹೊರಡಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

 1987 ಜೂನ್ 29 ರಂದು ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿ ಸ್ಥಾಪನೆಗೊಂಡ ಕುವೆಂಪು ವಿವಿ ಯ ಪ್ರಸಕ್ತ ಕುಲಪತಿ  ಪ್ರೊ. ಬಿ.ಪಿ.ವೀರಭದ್ರಪ್ಪ ಅವರು ತಮ್ಮ  ಮಗಳ ಹುಟ್ಟು ಹಬ್ಬಕ್ಕೆ ಅತಿಥಿ ಉಪನ್ಯಾಸಕರು, ಏಜೆನ್ಸಿ ನೌಕರರು, ಸಿಬ್ಬಂದಿಗಳು ಹಾಜರಾಗುವಂತೆ ವಾರದ ಹಿಂದೆ  ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯಲ್ಲಿ ನನ್ನ ಮಗಳು ಆಕಾಂಕ್ಷಾ ಜನ್ಮದಿನದ ಪ್ರಯುಕ್ತ ಮೇ 28ರಂದು ಭಾನುವಾರ ಮಧ್ಯಾಹ್ನ 12.30ಕ್ಕೆ ವಿಶ್ವವಿದ್ಯಾಲಯ ಆವರಣದಲ್ಲಿರುವ ಕುಲಪತಿಗಳ ಗೃಹದಲ್ಲಿ ಸಂತೋಷಕೂಟವನ್ನು ಏರ್ಪಡಿಸಿದೆ. ವಿ.ವಿ.ಯ ಎಲ್ಲ ಅಧ್ಯಾಪಕರು, ಅಧ್ಯಾಪಕೇತರ ನೌಕರರು, ಅತಿಥಿ ಉಪನ್ಯಾಸಕರು, ನೌಕರರು ತಪ್ಪದೇ ಹಾಜರಾಗಬೇಕೆಂದು ಕೋರಲಾಗಿದೆ. ಇದನ್ನು ವೈಯಕ್ತಿಕ ಆಹ್ವಾನವೆಂದು ಭಾವಿಸಿ ಎಲ್ಲರೂ ಈ ಸಂತೋಷಕೂಟದಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಸುತ್ತೋಲೆ ಕೊನೆಯಲ್ಲಿ ಇತರೆ ಸುತ್ತೋಲೆಗಳನ್ನು ಕಳುಹಿಸುವಾಗ ಯಾರ್ಯಾರಿಗೆ ಕಳುಹಿಸಲಾಗಿದೆ ಎಂಬ ಪಟ್ಟಿಕೊಡಲಾಗುತ್ತದೆ. ಈ ಸುತ್ತೋಲೆಯಲ್ಲಿ ಕೂಡ ಯಾರ್ಯಾರಿಗೆ ಎಂಬ ವಿ.ವಿ.ಯ ವಿವಿಧ ವಿಭಾಗಗಳ ಮುಖ್ಯಸ್ಥರ ಹೆಸರನ್ನು ಪಟ್ಟಿಮಾಡಲಾಗಿದೆ. ಇದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿದಿರಿನ ಜೋಪಡಿಯೇ ಹಸುಗೂಸುಗಳ ಅಂಗನವಾಡಿ,

ಹೀಗೆ ಕುವೆಂಪು ವಿವಿ ಕುಲಪತಿ ಪ್ರೊ ವೀರಭದ್ರಪ್ಪ ಹೊರಡಿಸಿದ ಸುತ್ತೋಲೆ ಸಾರ್ವತ್ರಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಇದುವರೆಗೂ 10  ಕುಲಪತಿಗಳನ್ನು ಕಂಡಿರುವ ಕುವೆಂಪು ವಿವಿಯಲ್ಲಿ ಈವರೆಗೆ ಇಂತಹ ಯಾವುದೇ ಸುತ್ತೋಲೆ  ಹೊರಡಿಸಿಲ್ಲ. ಇದಕ್ಕೂ ಮುನ್ನ  ಶಾಂತಿನಾಥ ದೇಸಾಯಿ, ಎಂ.ಆರ್ ಗಜೇಂದ್ರಗಢ, ಎಸ್.ಪಿ ಹಿರೇಮಠ್, ಬ್ಯಾರಿ,  ವೆಂಕಟರಮಣಪ್ಪರಂತಹ  ಸೇರಿದಂತೆ  10  ಕುಲಪತಿಗಳು ಇಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಯಾವುದೇ ಕುಲಪತಿಗಳು ತಮ್ಮ ಮಗಳ ಹುಟ್ಟುಹಬ್ವಕ್ಕೆ ಸುತ್ತೋಲೆಗಳನ್ನ ಹೊರಡಿಸಿರಲಿಲ್ಲ. ಸಾಮಾನ್ಯವಾಗಿ ವಿವಿಯ ಶೈಕ್ಷಣಿಕ ಸುತ್ತೋಲೆಗಳನ್ನು ಹೊರಡಿಸುವ ಅಧಿಕಾರ ಕುಲಪತಿಗೆ ಇರುತ್ತದೆ.

ಕರ್ನಾಟಕ ಜಾನಪದ ವಿವಿಯಲ್ಲಿ ರಾತ್ರೋರಾತ್ರಿ ಅಕ್ರಮ ನೇಮಕಾತಿ!

ಸುತ್ತೋಲೆಯಲ್ಲ, ಕರೆಯೋಲೆ!
ನಾನು ನನ್ನ ಮಗಳ ಜನ್ಮದಿನಕ್ಕೆ ಸಂತೋಷಕೂಟವನ್ನು ಏರ್ಪಡಿಸಿದ್ದು, ಇದಕ್ಕೆ ಎಲ್ಲ ಅಧ್ಯಾಪಕ ಹಾಗೂ ಇತರೆ ಸಿಬ್ಬಂದಿಯನ್ನು ಆಹ್ವಾನಿಸಿದ್ದೇನೆ. ಇದು ಸುತ್ತೋಲೆಯಲ್ಲ, ಕರೆಯೋಲೆ ಅಷ್ಟೇ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

click me!