Koppala ಟಿಸಿಗಾಗಿ ತಾಳಿ ಮಾರಲು ಸಿದ್ದವಾಗಿದ್ದ ತಾಯಿ!

By Suvarna NewsFirst Published Jun 2, 2022, 4:09 PM IST
Highlights

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಮಾರುತಿರಾವ್ ಹಾಗೂ ರುಕ್ಮೀಣಿ ಎನ್ನುವರ ಮಗ ದರ್ಶನ್ ಗಂಗಾವತಿ ತಾಲೂಕಿನ ಕೆಸರಟ್ಟಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2019 ರಲ್ಲಿ 5 ನೇ ತರಗತಿಗೆ ಅಡ್ಮಿಶನ್ ಮಾಡಿಸಿದ್ದಾರೆ.

ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಜೂ.2):  ಆ ವಿದ್ಯಾರ್ಥಿಗೆ (Student) ಕಳೆದ ಎರಡು ವರ್ಷಗಳಿಂದ ಟಿಸಿ ಕೊಡದೇ ಶಾಲಾ ಆಡಳಿತ ಮಂಡಳಿ ಸತಾಯಿಸುತ್ತಾ ಬಂದಿತ್ತು. ಟಿಸಿ ಕೇಳಿದರೆ 40 ಸಾವಿರ ದುಡ್ಡು ಕೊಡಿ ಎಂದು ಶಾಲೆಯವರು (School) ಹೇಳಿದ್ದರು. ಇದರಿಂದ ಬೇಸತ್ತಿದ್ದ ವಿದ್ಯಾರ್ಥಿ ತಾಯಿ (Mother ) ತನ್ನ ಮಾಂಗಲ್ಯ ಸರ (Mangalsutra ) ಮಾರಿ, ವಿದ್ಯಾರ್ಥಿಯ ಫೀ ಕಟ್ಟಲು ಸಿದ್ದವಾಗಿದ್ದಳು.‌  

ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು ಎನ್ನುವ ಮಾತಿದೆ. ಆ ಮಾತಿನಂತೆ ಕನಕಗಿರಿಗೆ ಅಷ್ಟೊಂದು ಐತಿಹಾಸಿಕ ಪ್ರಾಮುಖ್ಯತೆ ಇದೆ. ಇಂತಹ ಐತಿಹಾಸಿಕ ಪ್ರಾಮುಖ್ಯತೆ ಇರುವ ಕನಕಗಿರಿಯಲ್ಲೊಂದು ಎಂತವರ ಕಣ್ಣಲ್ಲಿ ನೀರು ತರಿಸುವ ಪ್ರಕರಣವೊಂದು ನಡೆದಿದೆ.‌

ಕೊಪ್ಪಳ (Koppala) ಜಿಲ್ಲೆಯ ಕನಕಗಿರಿ ಪಟ್ಟಣದ ಮಾರುತಿರಾವ್ ಹಾಗೂ ರುಕ್ಮೀಣಿ ಎನ್ನುವರ ಮಗ ದರ್ಶನ್ ಗಂಗಾವತಿ ತಾಲೂಕಿನ ಕೆಸರಟ್ಟಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2019 ರಲ್ಲಿ 5 ನೇ ತರಗತಿಗೆ ಅಡ್ಮಿಶನ್ ಮಾಡಿಸಿದ್ದಾರೆ. ಆ ವೇಳೆಯಲ್ಲಿ ದರ್ಶನ್ ತಾಯಿ ರುಕ್ಮಿಣಿ 20  ಸಾವಿರ ಫೀಸ್ ತುಂಬಿದ್ದಾರೆ. ಬಳಿಕ ಶಾಲೆಯ ಫೀ ಕಟ್ಟಲು ಸಾಧ್ಯವಾಗದ ಹಿನ್ನಲೆಯಲ್ಲಿ 2020-21ನೇ ಸಾಲಿನಲ್ಲಿ ದರ್ಶನ್ ತಾಯಿ ರುಕ್ಮಿಣಿ ಮಗನ ಟಿಸಿ ನೀಡಲು ಶಾಲೆಯವರನ್ನು ಕೇಳಿದ್ದಾರೆ. ಆಗ ಶಾಲೆಯವರು ಒಂದು ವರ್ಷದ 20 ಸಾವಿರ ಫೀ ಕಟ್ಟಿ, ಟಿಸಿ ತೆಗೆದುಕೊಂಡು ಹೋಗಲು ಹೇಳಿದ್ದಾರೆ.

Ramanagara: ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವುದಕ್ಕೆ ಶಿಕ್ಷಕರೇ ಇಲ್ಲ: ಜಿಲ್ಲೆಯ 40

ಆಗ ರುಕ್ಮಿಣಿ ನನ್ನ ಬಳಿ ಅಷ್ಟೊಂದು ಹಣ ಇಲ್ಲವೆಂದು ಹೇಳಿದ್ದಾಳೆ. ಜೊತೆಗೆ ಕೊವೀಡ್ ಸಹ ಹೆಚ್ಚಳವಾದ ಹಿನ್ನಲೆಯಲ್ಲಿ ಶಾಲೆಗೆ ಹೋಗಲೇ ಇಲ್ಲ.‌ಬಳಿಕ 2021-22 ನೇ ಸಾಲಿನಲ್ಲಿಯೂ ಟಿಸಿ ಕೇಳಲು ಹೋದಾಗ ಶಾಲೆಯವರು 2 ವರ್ಷದ 40 ಸಾವಿರ ಫೀ ಕಟ್ಟಲು ಹೇಳಿದ್ದಾರೆ. ಇದರಿಂದ ಕಂಗಾಲಾದ ದರ್ಶನ್ ತಾಯಿ ಸೀದಾ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ಕಾರ್ಯಕ್ರಮ ನಡೆಸಿಕೊಡುವ ಜಯಪ್ರಕಾಶ್ ಶೆಟ್ಟಿ ಅವರಿಗೆ ಕರೆ ಮಾಡಿ ತನ್ನ ಸಮಸ್ಯೆ ಹೇಳಿಕೊಂಡೊದ್ದಾಳೆ. 

ಕೂಡಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ನ ಬಿಗ್ 3 ಟೀಂ ಅವರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿತು. ಈ ವೇಳೆ ರುಕ್ಮಿಣಿ ನನ್ನ ಮಗನ ಮುಂದಿನ ವಿಧ್ಯಾಭ್ಯಾಸಕ್ಕೆ ಟಿಸಿ ಅವಶ್ಯಕವಾಗಿ ಬೇಕಾಗಿದೆ. ಟಿಸಿ ಕೊಡಲು ಶಾಲೆಯವರು 40 ಸಾವಿರ ಫೀ ಕಟ್ಟಲು ಹೇಳ್ತಾರೆ, ಆದರೆ ನನ್ನ ಬಳಿ ಅಷ್ಟೊಂದು ಹಣವಿಲ್ಲ.‌ಹಾಗೊಂದು ವೇಳೆ ಅವರಿಗೆ ಹಣ ಬೇಕಾದರೆ ನಾನು ನನ್ನ ಮಾಂಗಲ್ಯ ಸರ ಮಾರಿ ಶಾಲೆಗೆ ಹಣ ನೀಡುತ್ತೇನೆ ಎಂದು ಕಣ್ಣೀರು ಹಾಕಿದರು.

ಟಿಸಿ ಕೊಡಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ: ಇನ್ನು ವಿದ್ಯಾರ್ಥಿ ದರ್ಶನ್ ನ್ನು ಕೊಪ್ಪಳದ ಗವಿಸಿದ್ದೇಶ್ವರ ಪ್ರೌಢಶಾಲೆಗೆ ಎಡ್ಮಿಶನ್ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಟಿಸಿ ಇರದ ಕಾರಣಕ್ಕೆ ಎಡ್ಮಿಶನ್ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರ ಸಮಸ್ಯೆ ಅರಿತ ಏಷ್ಯಾನೆಟ್ ಸುವರ್ಣ ನ್ಯೂಸ್ ನ ಬಿಗ್ 3 ಟೀಂ ದರ್ಶನ್ ಹಾಗೂ ಆತನ ತಾಯಿ ರುಕ್ಮಿಣಿಯನ್ನು ಕರೆದುಕೊಂಡು ಕೆಸರಹಟ್ಟಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಗೆ ಹೋಗಲಾಯಿತು.

Belagavi; 6 ವರ್ಷಗಳಿಂದ ಇಲ್ಲಿಲ್ಲ ಕನ್ನಡ ಶಿಕ್ಷಕ, ಮಕ್ಕಳಿಗಿಲ್ಲ ಕನ್ನಡ ಪಾಠ!

ಈ ವೇಳೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರೊಂದಿಗೆ ದರ್ಶನ್ ನ ಸಮಸ್ಯೆ ಕುರಿತು ಚರ್ಚೆ ಮಾಡಲಾಯಿತು. ಈ ವೇಳೆ ಶಾಲೆಯವರು ಅರ್ಧ ಫೀಸ್ ಕಡಿತ ಮಾಡಿದ್ದು 11 ಸಾವಿರ ಫೀ ತುಂಬಲು ಹೇಳಿದರು. ಬಳಿಕ ಆ ಫೀ ಸಹ ಬೇಡ ನಾವು ಟಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು. ಕೊಟ್ಟ ಭರವಸೆಯಂತೆ ಕೇವಲ 15 ರಿಂದ 20 ನಿಮಿಷದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿ ದರ್ಶನ್ ನ ಟಿಸಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ನ ಬಿಗ್ 3 ಟೀ ಸಮ್ಮುಖದಲ್ಲಿ ಹಸ್ತಾಂತರಿಸಿದರು. 

ಸಂತಸದಲ್ಲಿ ತಾಯಿ-ಮಗ: ಇನ್ನು ಕಳೆದ ಎರಡು ವರ್ಷಗಳಿಂದ ಮಗನ ಟಿಸಿ ಇರದೇ ಸಂಕಷ್ಟಕ್ಕೆ ಸಿಲುಕಿದ ದರ್ಶನ ತಾಯಿ ರುಕ್ಮಿಣಿ ಕೈಗೆ ಮಗನ ಟಿಸಿ ಸಿಕ್ಕಿದ್ದೆ  ತಡ ತಾಯಿ ಮಗ ಇಬ್ಬರೂ ಸಂತಸಗೊಂಡರು. ಅಷ್ಟೇ ಅಲ್ಲ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.‌ ಮುಖ್ಯೋಪಾಧ್ಯಾಯರಿಂದ ಟಿಸಿ ಪಡೆದು ಮಾತನಾಡಿದ ದರ್ಶನ್ ತಾಯಿ ರುಕ್ಮಿಣಿ, ನನ್ನ ಮಗನ ಟಿಸಿ ಕೊಡಿಸಲು ಕಾರಣವಾದ ಏಷ್ಯಾನೆಟ್ ಸುವರ್ಣ ನ್ಯೂಸ್ ನ ಬಿಗ್ 3 ಕಾರ್ಯಕ್ರಮದ ಜಯಪ್ರಕಾಶ್ ಶೆಟ್ಟಿ ಅವರಿಗೆ ಧನ್ಯವಾದ ಅರ್ಪಿಸಿದರು.

 ಇನ್ಮು ಕಳೆದ ಎರಡು ವರ್ಷಗಳಿಂದ 40 ಸಾವಿರ ಹಣ ನೀಡದ ಕಾರಣಕ್ಕಾಗಿ ಟಿಸಿ ಕೊಡದೇ ಕೆಸರಹಟ್ಟಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ ಆಡಳಿತ ಮಂಡಳಿ ಸತಾಯಿಸಿತ್ತು. ಆದರೆ ಯಾವಾಗ ಏಷ್ಯಾನೆಟ್ ಸುವರ್ಣ ನ್ಯೂಸ್ ನ ಬಿಗ್ 3 ಟೀಂ ಅಖಾಡಕ್ಕೆ ಇಳಿದಿದ್ದೆ ತಡ ಶಾಲಾ ಆಡಳಿತ ಮಂಡಳಿ ಎಚ್ಚೇತ್ತು ಬಿಗ್ 3 ಬುಲೆಟ್ ಗೆ ಹೆದರಿ ಟಿಸಿ ನೀಡಿದೆ. ಈ ಮೂಲಕ ಮಗನಿಗಾಗಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದ ತಾಯಿ ರುಕ್ಮಿಣಿ ಹಾಗೂ ವಿದ್ಯಾರ್ಥಿ ದರ್ಶನ್ ಇದೀಗ ಸಂತಸದಲ್ಲಿದ್ದಾರೆ.

click me!