ಹಿಂದೂ ಎಂದು ಬರೆದಿದ್ದಕ್ಕೆ ಮೊರಾರ್ಜಿ ಶಾಲೆಯಲ್ಲಿ 71 ವಿದ್ಯಾರ್ಥಿಗಳಿಗಿಲ್ಲ ಪ್ರವೇಶ!

By Suvarna NewsFirst Published Jun 17, 2022, 2:36 PM IST
Highlights
  •  ಹಿಂದೂ ಎಂದು ಬರೆದಿದ್ದಕ್ಕೆ ಮೊರಾರ್ಜಿ ಶಾಲೆಗಿಲ್ಲ ಪ್ರವೇಶ!
  • ಮೆರಿಟ್‌ ಇದ್ದರೂ ಅಲ್ಪಸಂಖ್ಯಾತ ಮೊರಾರ್ಜಿ ಶಾಲೆಯಲ್ಲಿನ ಯಡವಟ್ಟು
  • ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಮುಸ್ಲಿಂ ಎಂದು ಬರೆದಿದ್ದರಿಂದ ಸಮಸ್ಯೆ

ವರದಿ: ಸೋಮರಡ್ಡಿ ಅಳವಂಡಿ

ಕೊಪ್ಪಳ (ಜೂನ್.17): ಅಲ್ಪಸಂಖ್ಯಾತ ಇಲಾಖೆಯಡಿ ನಡೆಯುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಆನ್‌ಲೈನ್‌ನಲ್ಲಿ ಆಯ್ಕೆ ವೇಳೆ ಯಡವಟ್ಟಾಗಿದ್ದು, ಧರ್ಮ ಕಾಲಂನಲ್ಲಿ ಮಾಹಿತಿ ಕೊರತೆಯಿಂದ ಹಿಂದೂ ಎಂದು ಬರೆದಿರುವ 71 ವಿದ್ಯಾರ್ಥಿಗಳು ಮೆರಿಟ್‌ ಇದ್ದರೂ ತಿರಸ್ಕಾರಗೊಂಡಿದ್ದಾರೆ. ಇದು ವಿವಾದಕ್ಕೂ ಕಾರಣವಾಗಿದೆ.

ಇದರಿಂದ ಮೆರಿಟ್‌ ಇದ್ದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನಮಗಾಗಿರುವ ಅನ್ಯಾಯ ಸರಿಪಡಿಸಿ ಎಂದು ಅಲ್ಪಸಂಖ್ಯಾತರ ಇಲಾಖೆಗೆ ಪ್ರದಕ್ಷಿಣೆ ಹಾಕುತ್ತಿದ್ದಾರೆ.

ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸುವ ವೇಳೆ ಧರ್ಮ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಎನ್ನುವ ಕಾಲಂನಲ್ಲಿ ಮುಸ್ಲಿಂ ಪಿಂಜಾರ ಎಂದು ನಮೂದಿಸಿದ್ದಾರೆ. ಇವರು ಪ್ರವರ್ಗ 1ರಲ್ಲಿ ಬರುತ್ತಾರೆ. ಆದರೆ, ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿರುವುದಕ್ಕೆ ಸೇವಾ ಸಿಂಧು ಆ್ಯಪ್‌ನಲ್ಲಿ ಇವರನ್ನು ಸಾಮಾನ್ಯ ವರ್ಗಕ್ಕೆ ಸೇರಿಸಿದ್ದಾರೆ. ಹೀಗಾಗಿ ಇವರು ಆಯ್ಕೆಯಿಂದ ವಂಚಿತರಾಗಿದ್ದಾರೆ.

ಹಿಂದಿ ಬಂದರಷ್ಟೇ ಪ್ರವಾಸ ಆದೇಶದ ಹಿಂದೆ ಡಿಡಿಪಿಐ ಕೈವಾಡ ಖಚಿತ!

ತಾಲೂಕಿನ ಡೊಂಬರಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸನಾಪರ್ವಿನ್‌ ಎನ್ನುವ ವಿದ್ಯಾರ್ಥಿನಿ ಶೇ. 44 ಅಂಕ ಪಡೆದಿದ್ದಾಳೆ. ಆದರೆ, ಆಯ್ಕೆ ಪಟ್ಟಿಯಲ್ಲಿ 167ನೇ ಸಂಖ್ಯೆಯ ವಿದ್ಯಾರ್ಥಿನಿ ಕೇವಲ ಶೇ. 34 ಅಂಕ ಗಳಿಸಿದ್ದರೂ ಆಯ್ಕೆಯಾಗಿದ್ದಾಳೆ.

ಈ ವಿದ್ಯಾರ್ಥಿನಿ ಧರ್ಮ ಎನ್ನುವ ಕಾಲಂನಲ್ಲಿ ಹಿಂದೂ ಎಂದು ಬರೆದಿರುವುದರಿಂದ ತಿರಸ್ಕಾರವಾಗಿದೆ. ಅಷ್ಟೇ ಅಲ್ಲ, ಸೋಹಿಲ್‌ ಮರ್ದಾನಸಾಬ ಎನ್ನುವ ವಿದ್ಯಾರ್ಥಿ ಪ್ರವೇಶ ಪರೀಕ್ಷೆಯಲ್ಲಿ ಶೇ. 49 ಅಂಕ ಗಳಿಸಿದ್ದಾನೆ. ಇದೇ ವರ್ಗದ ವಿದ್ಯಾರ್ಥಿಯೋರ್ವ ಕೇವಲ ಶೇ. 40 ಅಂಕ ಗಳಿಸಿದ್ದರೂ ಆಯ್ಕೆಯಾಗಿದ್ದಾನೆ. ಸೋಹಿಲ್‌ ವಿದ್ಯಾರ್ಥಿಗಳು ಧರ್ಮ ಎನ್ನುವ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿರುವುದುರಿಂದ ರಿಜೆಕ್ಟ್ ಮಾಡಲಾಗಿದೆ.

ನನ್ನ ಮಗ ಅತ್ಯುತ್ತಮ ಪರ್ಸೇಂಟೇಸ್‌ ಮಾಡಿದ್ದರೂ ಆಯ್ಕೆಯಾಗಿಲ್ಲ. ಕಮ್ಮಿ ಮಾಡಿದವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ದೂರು ನೀಡಲು ಹೋದರೂ ಇಲಾಖೆಯವರು ಸ್ವೀಕಾರ ಮಾಡದ ವಾಪಸ್‌ ಕಳುಹಿಸಿದ್ದಾರೆ.

ಮರ್ದಾನಸಾಬ, ಡೊಂಬರಳ್ಳಿ ಗ್ರಾಮ

71 ವಿದ್ಯಾರ್ಥಿಗಳು ತಿರಸ್ಕಾರ: ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ಶಾಲೆಗೆ ಆಯ್ಕೆಯಾಗಲು ಪ್ರವೇಶ ಪರೀಕ್ಷೆ ಬರೆಯಲು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿರುವುದರಿಂದ ಆ್ಯಪ್‌ನಲ್ಲಿ ತಿರಸ್ಕಾರವಾಗಿದ್ದಾರೆ. ಜಾತಿಯ ಪರಿಗಣನೆಯನ್ನೇ ಮಾಡಿಲ್ಲ. ಈ ರೀತಿಯಾಗಿ ಸುಮಾರು 71 ವಿದ್ಯಾರ್ಥಿಗಳು ಮೆರಿಟ್‌ ಇದ್ದರೂ ಮೊರಾರ್ಜಿ ಶಾಲೆಗೆ ಆಯ್ಕೆಯಾಗಲು ಆಗಿಲ್ಲ. ಇದನ್ನು ಸರಿಪಡಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿರುವುದರಿಂದ ಅಲ್ಪಸಂಖ್ಯಾತ ಸಮುದಾಯದ ಜಾತಿ ಪರಿಗಣನೆಯನ್ನು ಮಾಡಿಲ್ಲ. ಸೇವಾ ಸಿಂಧುವಿನಲ್ಲಿಯೇ ಇವರು ಸಾಮಾನ್ಯ ವರ್ಗಕ್ಕೆ ಹೋಗಿದ್ದರಿಂದ ಆಯ್ಕೆಯಾಗಿಲ್ಲ. ಈ ರೀತಿಯಾಗಿ ಸುಮಾರು 71 ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು, ಸರಿಪಡಿಸುವ ಕಾರ್ಯ ನಡೆದಿದೆ.

-ಮಹಾಂತೇಶ ಕೋವಿ, ತಾಲೂಕಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ   

BBMP NIGHT SCHOOL; ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಬಿಬಿಎಂಪಿ ತೆರೆಯಲಿದೆ ಸಂಜೆ ಶಾಲೆ

ಎಂಜಿನಿಯರಿಂಗ್‌ ಸೀಟು ಶುಲ್ಕ ಹೆಚ್ಚಿಸಿದರೆ ಹೋರಾಟ : ರಾಜ್ಯದಲ್ಲಿ ಪ್ರತೀ ವರ್ಷವೂ ಖಾಸಗಿ ಕಾಲೇಜುಗಳಲ್ಲಿನ ಎಂಜಿನಿಯರಿಂಗ್‌ ಕೋಟಾ ಸೀಟುಗಳ ಪ್ರವೇಶ ಶುಲ್ಕವನ್ನು ಶೇ.10ರಷ್ಟುಹೆಚ್ಚಿಸಲು ಸರ್ಕಾರ ಒಪ್ಪಂದದ ಮೂಲಕವೇ ಅನುವು ಮಾಡಿಕೊಟ್ಟಿರುವುದು ಪ್ರಜಾಪ್ರಭುತ್ವದ ವಿರೋಧಿ ನಡೆಯಲಾಗಿದ್ದು, ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ಆಗ್ರಹಿಸಿದೆ.

ಒಂದು ವೇಳೆ ಸರ್ಕಾರ ಶುಲ್ಕ ಹೆಚ್ಚಳಕ್ಕೆ ಕಾನೂನಾತ್ಮಕವಾಗಿ ನೀಡಿರುವ ಅವಕಾಶ ಹಿಂತೆಗೆದುಕೊಳ್ಳದೆ ಹೋದರೆ ರಾಜ್ಯಾದ್ಯಂತ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಪ್ರೇಮಿಗಳನ್ನು ಸಂಘಟಿಸಿಕೊಂಡು ಉಗ್ರ ಹೋರಾಟ ನಡೆಸುವುದಾಗಿ ಈ ವಿದ್ಯಾರ್ಥಿ ಸಂಘಟನೆ ಎಚ್ಚರಿಕೆ ನೀಡಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‌ ಕಚೇರಿ ಕಾರ್ಯದರ್ಶಿ ಸಿತಾರ, ಎಂಜಿನಿಯರಿಂಗ್‌ ಸೀಟುಗಳ ಶುಲ್ಕವನ್ನು ಶೇ.10ರಷ್ಟುಹೆಚ್ಚಿಸಲು ಸರ್ಕಾರದ ಮುಂದಿರುವ ಪ್ರಸ್ತಾಪವನ್ನು ವಿರೋಧಿಸುತ್ತೇವೆ. ಈ ರೀತಿ ಪ್ರತೀ ಶೈಕ್ಷಣಿಕ ವರ್ಷವೂ ಶುಲ್ಕ ಹೆಚ್ಚಿಸುವುದು ಅಪ್ರಜಾತಾಂತ್ರಿಕ. ಶಿಕ್ಷಣದ ವ್ಯಾಪಾರೀಕರಣ. ಕೋವಿಡ್‌ ಆರ್ಥಿಕ ಸಂಕಷ್ಟದಿಂದ ಇನ್ನೂ ಕೂಡ ಬಡ ಜನರು ಹೊರಬಂದಿಲ್ಲ ಎಂದಿದ್ದಾರೆ.

click me!