ಆ.07ಕ್ಕೆ SSLC ಫಲಿತಾಂಶ ಪ್ರಕಟವಾಗಲ್ಲ, ಶಿಕ್ಷಣ ಇಲಾಖೆ ಸ್ಪಷ್ಟನೆ

By Suvarna NewsFirst Published Aug 6, 2021, 4:55 PM IST
Highlights

* ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ದಿನಾಂಕ ಮುಂದೂಡಿಕೆ
* ಎಸ್ ಎಸ್ ಎಲ್ ಸಿ ಫಲಿತಾಂಶ ಇನ್ನೆರಡು ದಿನ ಮುಂದಕ್ಕೆ
* ಶಿಕ್ಷಣ ಇಲಾಖೆ ಅಧಿಕಾರಿಗಳ ಮಾಹಿತಿ

ಬೆಂಗಳೂರು, (ಆ.06): ನಾಳೆ (ಆ.07) ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ದಿನಾಂಕ ಮುಂದೂಡಿಕೆಯಾಗಿದೆ.

ಶನಿವಾರ (ಆ.07) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸುವುದಕ್ಕೆ ನಿಗದಿಯಾಗಿತ್ತು. ಆದ್ರೆ, ಇದೀಗ ಇದಕ್ಕೆ  ಶಿಕ್ಷಣ ಇಲಾಖೆ ಪ್ರತಿಕ್ರಿಯಿಸಿದ್ದು, ನಾಳೆ (ಶನಿವಾರ) Sslc ಫಲಿತಾಂಶ ಘೋಷಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಶಾಲೆ ಆರಂಭ ಸ್ವಲ್ಪ ಲೇಟ್, SSLC Resultಗೆ ಮುಹೂರ್ತ ಫಿಕ್ಸ್

ಪರೀಕ್ಷಾ ಮಂಡಳಿ ಫಲಿತಾಂಶ ನೀಡಲು ಸಿದ್ಧಗೊಂಡಿದ್ದು,  ಅನುಮತಿ ಸಿಗದ ಕಾರಣ  ಮುಂದೂಡಿಕೆಯಾಗಿದೆ. ಇನ್ನೆರೆಡು ದಿನದಲ್ಲಿ ನೂತನ ಶಿಕ್ಷಣ ಸಚಿವರು ಬಂದ ಬಳಿಕ ಘೋಷಣೆ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಬಿಎಸ್‌ವೈ ಸರ್ಕಾರದಲ್ಲಿ ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವರಾಗಿದ್ದರು. ಆದ್ರೆ, ಇದೀಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು ಹೊಸ ಸಂಪುಟ ರಚನೆಯಾಗಿದೆ. ಆದ್ರೆ, ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಮಾಡಿಲ್ಲ. ಖಾತೆ ಹಂಚಿದ ಬಳಿಕ ಶಿಕ್ಷಣ ಸಚಿವರು ಫಲಿತಾಂಶ ಪ್ರಕಟಿಸಲಿದ್ದಾರೆ.

ಕೊರೋನಾ ಆತಂಕದ ಮಧ್ಯೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗಿದ್ದು. ಇದೀಗ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾದುಕುಳಿತ್ತಿದ್ದಾರೆ.

click me!