ಸಾಧನೆಗೆ ಬಡತನ ಅಡ್ಡಿಯೆಂಬುದು ಸುಳ್ಳು: ಗೌಂಡಿ ಕೆಲಸದಾತನ ಮಗಳಿಗೆ ಡಿಸ್ಟಿಂಕ್ಷನ್‌!

By Kannadaprabha News  |  First Published May 9, 2023, 1:31 AM IST
  • ಗೌಂಡಿ ಕೆಲಸದಾತನ ಮಗಳಿಗೆ ಡಿಸ್ಟಿಂಕ್ಷನ್‌
  • ಡಿಸ್ಟಿಂಕ್ಷನ್‌ನಲ್ಲಿ ಪಾಸ್‌ ಆದರೂ ಮುಂದಿನ ಓದಿಗೆ ಬಡತನ ಅಡ್ಡಿ
  • ನಿತ್ಯ ನಾಲ್ಕೈದು ಕಿ.ಮೀ. ನಡೆದು ಶಾಲೆಗೆ ಬರುತ್ತಿದ್ದ ಬಾಲಕಿ
  • ಕಕ್ಕಿಹಳ್ಳಿ ಗ್ರಾಮದ ಪ್ರತಿಭೆಗೆ ವೈದ್ಯೆಯಾಗಬೇಕೆಂಬ ಆಸೆ

ಸೋಮರಡ್ಡಿ ಅಳವಂಡಿ

ಕೊಪ್ಪಳ (ಮೇ.9) : ಅಪ್ಪ, ಅಮ್ಮ ನಿತ್ಯವೂ (ಗೌಂಡಿಕೆಲಸ) ಕೂಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಕಡುಬಡತನ. ನಿತ್ಯವೂ ಶಾಲೆಗೆ ನಾಲ್ಕೈದು ಕಿ.ಮೀ.ನಡೆದು ಹೋಗಿ ಬರಬೇಕು. ಆದರೂ ಎಸ್‌ಎಸ್‌ಎಲ್‌ಸಿಯಲ್ಲಿ 564 ಅಂಕ ಪಡೆದು, ಶೇಕಡಾ 90.24 ರಷ್ಟುಅಂಕದೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ವಿದ್ಯಾರ್ಥಿನಿಯೇ ಮಂಜುಳಾ ಅಮರಯ್ಯ ಮಾಟರಂಗಿ.

Tap to resize

Latest Videos

undefined

ಕುಕನೂರು ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ನಿವಾಸಿಯಾದ ಮಂಜುಳಾ ಕುಕನೂರಿನ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಓದುತ್ತಾ, ಶಾಲೆ ರಜೆ ಇದ್ದ ವೇಳೆ ಕೆಲಸಕ್ಕೆ ಸಹ ಹೋಗಿ ಕುಟುಂಬಕ್ಕೆ ನೆರವಾಗುವ ಜೊತೆಗೆ ಯಾವುದೇ ಟ್ಯೂಶನ್‌ ಇಲ್ಲದೆ, ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.

Karnataka SSLC Result 2023 : ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶ್ರೀಲಹರಿಗೆ ವೈದ್ಯೆಯಾಗುವ ಕನಸು

ಮಂಜುಳಾಗೆ ವಿಜ್ಞಾನ ವಿಭಾಗಕ್ಕೆ ಸೇರಬೇಕು ಎನ್ನುವ ಅದಮ್ಯ ಬಯಕೆ. ಆದರೆ, ಮುಂದೆ ಓದಿಸುವುದಕ್ಕೆ ತಂದೆಗೆ ಶಕ್ತಿ ಇಲ್ಲ. ಇಲ್ಲಿಯೇ ಇರುವ ಸರ್ಕಾರಿ ಪಿಯು ಕಾಲೇಜಿಗೆ ಕಳುಹಿಸಲು ಕಷ್ಟಎನ್ನುವುದು ತಂದೆಯ ಕೊರಗು. ಇವರ ಸಹಾಯಕ್ಕಾಗಿ 9964083326 ಸಂಖ್ಯೆಗೆ ಸಂಪರ್ಕಿಸಬಹುದು.

ನಮ್ಮ ಅಪ್ಪ, ಅಮ್ಮ ಕಷ್ಟಪಟ್ಟು ಓದಿಸುತ್ತಿದ್ದಾರೆ. ಅದಕ್ಕಾದರೂ ನಾನು ಸಾಧನೆ ಮಾಡಲೇಬೇಕು. ವಿಜ್ಞಾನ ವಿಭಾಗಕ್ಕೆ ಸೇರಿಕೊಳ್ಳುವ ಬಯಕೆ ಇದೆ. ಮುಂದೆ ವೈದ್ಯೆಯಾಗುವ ಕನಸು ಇದೆ. ಆದರೆ, ಓದಿಗೆ ಅಷ್ಟೊಂದು ದುಡ್ಡು ನಮ್ಮ ಬಳಿ ಇಲ್ಲ. ಆದರೂ ನಮ್ಮ ತಂದೆ ಓದಿಸುತ್ತಾರೆ ಎನ್ನುವ ನಂಬಿಕೆ ಇದೆ.

ಮಂಜುಳಾ ಮಾಟರಂಗಿ ವಿದ್ಯಾರ್ಥಿನಿ

 ಯಶಸ್‌್ಸ ಗೌಡ ರಾಜ್ಯಕ್ಕೇ ಪ್ರಥಮ

ಚಿಕ್ಕಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್‌ ಇಂಗ್ಲೀಷ್‌ ಶಾಲೆಯ ವಿದ್ಯಾರ್ಥಿ ಎನ್‌.ಯಶಸ್‌ ಗೌಡ 625ಕ್ಕೆ 625 ಅಂಕ ಪಡೆದು ಪ್ರಥಮ ರಾರ‍ಯಂಕ್‌ ಪಡೆದಿದ್ದಾನೆ.

ಎನ್‌.ಯಶಸ್‌ಗೌಡ ಅವರ ತಂದೆ ನಾಯರಾಣಸ್ವಾಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮಜ್ಜಿಗೆಹೊಸಹಳ್ಳಿ ಗ್ರಾಮದ ನಿವೃತ್ತ ಎಲ್‌.ಐ.ಸಿ ಅಭಿವೃದ್ಧಿ ಅಧಿಕಾರಿಯಾಗಿದ್ದು ಅವರ ತಾಯಿ ಭಾಗ್ಯಮ್ಮ ಗೃಹಿಣಿ ಆಗಿದ್ದಾರೆ.

SSLC Toppers 2023 ಇವರೇ ನೋಡಿ: ಪೂರಕ ಪರೀಕ್ಷೆಗೆ ಮೇ 15ರೊಳಗೆ ಅರ್ಜಿ ಸಲ್ಲಿಸಿ

ವಿದ್ಯಾರ್ಥಿ ಯಶಸ್‌ ‘ಕನ್ನಡಪ್ರಭ’ ದೊಂದಿಗೆ ಮಾತನಾಡಿ, ಮುಂದೆ ತಾನು ಪಿಯುಸಿ ವಿಜ್ಞಾನ ವಿಷಯ ಅಧ್ಯಯನ ಮಾಡಿ ಐಐಟಿಯಲ್ಲಿ ಎಂಜನಿಯರಿಂಗ್‌ ಪದವಿ ಪಡೆಯುವ ಗುರಿ ಹೊಂದಿದ್ದೇನೆ. ಶಾಲೆಯಲ್ಲಿ ಶಿಕ್ಷಕರು, ಪ್ರಾಂಶುಪಾಲರು ಮತ್ತು ತಮ್ಮ ಪೋಷಕರ ಸಹಕಾರ ಮತ್ತು ಮಾರ್ಗದರ್ಶನವೇ ತಮ್ಮ ಪ್ರಥಮ ರಾರ‍ಯಂಕ್‌ಗೆ ಕಾರಣ. ನನಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಬಂದ ಎಲ್ಲಾ ಬಗೆಯ ಅನುಮಾನಗಳನ್ನು ಪರಿಹರಿಸಿ ಪ್ರತಿ ವಿಷಯದಲ್ಲಿ ಆತ್ಮ ವಿಶ್ವಾಸ ತುಂಬುವಕ ಕೆಲಸ ಶಾಲೆಯಲ್ಲಿ ಮಾಡಿದ್ದಾರೆ. ಹಾಗೆಯೇ ಎಲ್ಲಾ ವಿಷಯಗಳಲ್ಲಿ ಕಿರುಪರೀಕ್ಷೆಗಳನ್ನು ನಿರಂತವಾಗಿ ನಡೆಸಿ ನಾವು ಮಾಡುವ ತಪ್ಪುಗಳ ಬಗ್ಗೆ ಪ್ರಾಂಶುಪಾಲರಾದ ಮೋಹನ್‌ ಮತ್ತು ಇತರೆ ಶಿಕ್ಷಕರು ತಿಳಿಸಿಕೊಡುತ್ತಿದ್ದರು. ಸಮಯದ ಪರಿಮಿತಿ ಇಲ್ಲದೆ ಕೇಳಿದಾಗಲೆಲ್ಲಾ ವಿಷಯಗಳ ವಿಶ್ಲೇಷಣೆ ಮಾಡುತ್ತಿದ್ದರು. ಇಲ್ಲಿನ ಪ್ರೋತ್ಸಾಹ ಮತ್ತು ಉತ್ತೇನಕಾರಿ ವಾತಾವರಣ ನಮ್ಮ ಶಾಲೆಗೆ 5 ರಾರ‍ಯಂಕ್‌ಗಳು ಬರುವಂತೆ ಮಾಡಿದೆ ಎಂದರು.

click me!