ಶಾಲೆ ಫುನಾರಂಭ, ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

By Suvarna News  |  First Published Aug 16, 2021, 5:43 PM IST

* ಶಾಲೆ ಆರಂಭಕ್ಕೆ ಮಾರ್ಗಸೂಚಿ ಬಿಡುಗಡೆ
* ಸಾಮಾಜಿಕ ಅಂತರ ಪಾಲಿಸುವ ಪೋಸ್ಟರ್ ಅಳವಡಿಕೆ ಮಾಡಬೇಕು
* ಪ್ರತಿ ದಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ಮಾಹಿತಿ ದಾಖಲಿಸಬೇಕು
* ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತ ಕಲಿಕೆಯಾಗಬೇಕು


ಬೆಂಗಳೂರು(ಆ. 16)  ಆಗಸ್ಟ್ 23 ರಿಂದ ಶಾಲೆಗಳು ಆರಂಭವಾಗಲಿದ್ದು  9 ರಿಂದ ‌12 ನೇ ತರಗತಿಗಳ ಭೌತಿಕ ಕ್ಲಾಸ್ ಗೆ ಸಂಬಂಧಿಸಿ  ಮಾರ್ಗಸೂಚಿ ಬಿಡುಗಡೆ ‌ ಮಾಡಲಾಗಿದೆ. ಮೊದಲೇ ಹೇಳಿದಂಥೆ ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಯಲ್ಲಿ ಶಾಲೆ ಆರಂಭವಾಗಲಿದೆ.

"

Tap to resize

Latest Videos

9, 10ನೇ ತರಗತಿ ಶಾಲೆ ತೆರೆಯಲು ಅನುಮತಿ  ನೀಡಲಾಗಿದೆ. ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿ ಮಾಡಲು ಅನುಮತಿ ನೀಡಲಾಗಿದೆ. ಶಾಲೆಗೆ ಆಗಮಿಸಲು ಪೋಷಕರ ಅನುಮತಿ ಪತ್ರ ಕಡ್ಡಾಯ ಜತೆಗೆ ಮಗುವಿನ ಆರೋಗ್ಯ ಪ್ರಮಾಣ ಪತ್ರ‌ ಕಡ್ಡಾಯ.

ಹದಿನಾರು ವರ್ಷದ ನಂತರ ಬಾಗಿಲು ತೆರೆದ ಶಾಲೆ

ಮನೆಯಿಂದಲೇ ಮಕ್ಕಳು ಕುಡಿಯುವ ನೀರು, ಉಪಹಾರ ತರಬೇಕು ಭೌತಿಕ ತರಗತಿ ಹಾಜರಾತಿ ಕಡ್ಡಾಯವಲ್ಲ. ಆನ್‌ಲೈನ್ ಅಥವಾ ಭೌತಿಕ ಎರಡರಲ್ಲಿ ಒಂದರಲ್ಲಿ ಹಾಜರಾತಿ ಅಗತ್ಯ. ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಭೌತಿಕ ತರಗತಿ ಶಾಲೆ ನಡೆಯಲಿದೆ. ಶನಿವಾರ ಮಾತ್ರ‌ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಭೌತಿಕ ತರಗತಿ ನಡೆಯಲಿದೆ ಎಂದು ತಿಳಿಸಲಾಗಿದೆ.

* ಶಾಲೆಯನ್ನು ಸಾನಿಟೈಸ್ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 
* ಶಿಕ್ಷಕರು ಮಾಸ್ಕ್ ಧರಿಸುವುದು ಕಡ್ಡಾಯ
* 50  ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು
* ಅಡುಗೆ ಮನೆ ಮತ್ತು ದಾಸ್ತಾನು ವಸ್ತುಗಳನ್ನು ಸಂಪೂರ್ಣವಾಗಿ ಕ್ಲೀನ್ ಮಾಡಬೇಕು
* ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
* ಶಾಲೆ ಪ್ರವೇಶ ಮಾರ್ಗದದಲ್ಲಿ ಕನಿಷ್ಠ 3 ರಿಂದ  6 ಅಡಿ ಅಂತರದಲ್ಲಿ ವೃತ್ತ ಹಾಕಬೇಕು
* ಸಾಮಾಜಿಕ ಅಂತರ ಪಾಲಿಸುವ ಪೋಸ್ಟರ್ ಅಳವಡಿಕೆ ಮಾಡಬೇಕು
* ಪ್ರತಿ ದಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ಮಾಹಿತಿ ದಾಖಲಿಸಬೇಕು
* ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತ ಕಲಿಕೆಯಾಗಬೇಕು
* ಶಿಕ್ಷಕರು ಕನಿಷ್ಠ ಒಂದು ಸಾರಿಯಾದರೂ ಲಸಿಕೆ ಪಡೆದುಕೊಂಡಿದ್ದಾರೆಯೇ? ಎಂಬುದನ್ನು ತಿಳಿಸಬೇಕು
* ಕೊರೋನಾ ನಿಯಮಗಳು ಪಾಲನೆಯಾಗುತ್ತ ಇದೆಯೇ? ಇಲ್ಲವೇ? ಎಂಬುದರ ಮೇಲ್ವಿಚಾರಣೆ ನೋಡಲ್ ಅಧಿಕಾರಿಯ ಜವಾಭ್ದಾರಿ
* ಎಸ್‌ಡಿಎಂಸಿ ಸಮಿತಿ ಜತೆ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆ ನಡೆಸಬೇಕು ಎಂಬ  ನಿಯಮಗಳನ್ನು ತಿಳಿಸಲಾಗಿದೆ

click me!