ಪಿಯು ಪ್ರವೇಶಕ್ಕೆ ಆಗಸ್ಟ್ 28 ಕೊನೆಯ ದಿನ

By Kannadaprabha News  |  First Published Aug 15, 2021, 8:00 AM IST
  • ಪದವಿ ಪೂರ್ವ ಕಾಲೇಜು ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿಪರಿಷ್ಕರಣೆ
  • ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಆ.28 ಕೊನೆಯ ದಿನ

ಬೆಂಗಳೂರು (ಆ.15): ಪದವಿ ಪೂರ್ವ ಕಾಲೇಜು ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿಪರಿಷ್ಕರಿಸಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಆ.28 ಕೊನೆಯ ದಿನವಾಗಿದೆ. 

ಈ ಮೊದಲು ಇದನ್ನು ಆ.31ರವರೆಗೆ ನೀಡಲಾಗಿತ್ತು. 670 ರು. ದಂಡ ಶುಲ್ಕದೊಂದಿಗೆ ಸೆ.1ರಿಂದ ಸೆ.11ರವರೆಗೆ ಹಾಗೂ ವಿಶೇಷ ದಂಡ ಶುಲ್ಕ 2890 ರು. ಪಾವತಿಸಿ ಸೆ.13ರಿಂದ 25ರವರೆ ಪ್ರವೇಶ ಪಡೆಯಬಹುದು ಎಂದು ತಿಳಿಸಿದೆ.

Tap to resize

Latest Videos

ದ್ವಿತೀಯ ಪಿಯು ರಿಸಲ್ಟ್‌ ತಿರಸ್ಕರಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆ : ಯಾವಾಗ ನಡೆಯಲಿದೆ? 

ಆ.16ರಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಆರಂಭಿಸಲು ಕೂಡ ಇಲಾಖೆ ಸೂಚಿಸಿದೆ. 

ಇನ್ನು ರಾಜ್ಯದಲ್ಲಿ ಆಗಸ್ಟ್ 23ರಿಂದಲೇ ಕಾಲೇಜು ಆರಂಭವಾಗಲಿದೆ. ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು ಆಫ್ಲೈನ್‌ ತರಗತಿಗಳು ಶುರುವಾಗುತ್ತಿದೆ. 

click me!