ಎಂಜಿನಿಯರಿಂಗ್ ,ಆರ್ಕಿಟೆಕ್ಚರ್ ಕೋರ್ಸ್‌ ಇನ್ನಷ್ಟು ದುಬಾರಿ: ಶುಲ್ಕ ಶೇ.10 ಹೆಚ್ಚಿಸಿ ಶಿಕ್ಷಣ ಇಲಾಖೆ ಆದೇಶ

By Kannadaprabha News  |  First Published Jul 21, 2024, 11:45 AM IST

ರಾಜ್ಯದಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ ಶುಲ್ಕವನ್ನು ಶೇ.10 ಹೆಚ್ಚಿಸಲಾಗಿದೆ. ಇದರಿಂದಾಗಿ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ 42,116 ರು.ಗೆ ಏರಿಕೆಯಾಗಿದೆ, ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಸೀಟು ಶುಲ್ಕ 76136 ರು.ಗೇರಿದೆ.


ಬೆಂಗಳೂರು (ಜು.21): ರಾಜ್ಯದಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳ ಶುಲ್ಕವನ್ನು ಪ್ರಸಕ್ತ ಸಾಲಿನಿಂದಲೇ ಅನ್ವಯವಾಗುವಂತೆ ಶೇ.10 ಹೆಚ್ಚಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರಿ ಕಾಲೇಜುಗಳು, ಸರ್ಕಾರಿ ಅನುದಾನಿತ ಕಾಲೇಜುಗಳು, ಮೈಸೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಶೇ.50 ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ಸೀಟುಗಳಿಗೆ 42,116 ರು. ಶುಲ್ಕ ನಿಗದಿಯಾಗಿದೆ.

Tap to resize

Latest Videos

undefined

ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೆ 76,135 ರು. ಅಥವಾ 84,596 ರು. ಶುಲ್ಕ ನಿಗದಿಯಾಗಿದೆ. ಕಾಮೆಡ್‌-ಕೆ ಕೋಟಾದ ಸೀಟುಗಳಿಗೆ 1,86,111 ರು. ಅಥವಾ 2,61,477 ರು. ಪಾವತಿಸಬೇಕು.

ಇನ್ನು ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಇತರೆ ಶುಲ್ಕವಾಗಿ ವಾರ್ಷಿಕ 20,000 ರು. ಮೀರದಂತೆ ಪ್ರಥಮ ವರ್ಷದ ಶುಲ್ಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಶೇ.10ರಷ್ಟು ಶುಲ್ಕ ಹೆಚ್ಚಳ ಕುರಿತು ರಾಜ್ಯ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ ಜೊತೆಗೆ ಒಪ್ಪಂದವಾಗಿತ್ತು. ಇದೀಗ ಉನ್ನತ ಶಿಕ್ಷಣ ಇಲಾಖೆ ಶುಲ್ಕ ನಿಗದಿ ಮಾಡಿ ಆದೇಶ ಮಾಡಿದೆ.

ಶಿರೂರು ಗುಡ್ಡ ಕುಸಿತ ಪ್ರಕರಣ: ಹತ್ತು ಜನ ಕಣ್ಮರೆ ಬಗ್ಗೆ ದೂರು

ನೀಟ್‌ ಮರುಪರೀಕ್ಷೆಯಲ್ಲಿ ಹರ್ಯಾಣ ಕೇಂದ್ರದ ಒಬ್ಬನಿಗೂ 720 ಅಂಕ ಇಲ್ಲ!
ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಈ ಬಾರಿ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪ ಕೇಳಿಬರಲು ಮೂಲ ಕಾರಣವಾಗಿದ್ದ ಹರ್ಯಾಣದ ನಿರ್ದಿಷ್ಟ ಪರೀಕ್ಷಾ ಕೇಂದ್ರದ ಬಣ್ಣ ಕೊನೆಗೂ ಬಯಲಾಗಿದೆ. ಸುಪ್ರೀಂಕೋರ್ಟ್‌ನ ಆದೇಶದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶನಿವಾರ ನಗರವಾರು ಹಾಗೂ ಕೇಂದ್ರವಾರು ನೀಟ್‌-ಯುಜಿ ಫಲಿತಾಂಶ ಪ್ರಕಟಿಸಿದ್ದು, ಅದರಲ್ಲಿ ಈ ಕೇಂದ್ರದ ಒಬ್ಬರೂ 720ಕ್ಕೆ 720 ಅಂಕ ಪಡೆದಿಲ್ಲ. ಜೂ.5ರಂದು ಪ್ರಕಟವಾಗಿದ್ದ ಫಲಿತಾಂಶದಲ್ಲಿ ಈ ಕೇಂದ್ರದ 6 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದರು.

ಜೂ.5ರಂದು ಮೊದಲ ಬಾರಿ ಫಲಿತಾಂಶ ಪ್ರಕಟವಾದಾಗ ಹರ್ಯಾಣದ ಬಹಾದುರ್‌ಗಢದಲ್ಲಿರುವ ಹರದಯಾಳ್‌ ಪಬ್ಲಿಕ್‌ ಶಾಲೆಯ ನೀಟ್‌ ಪರೀಕ್ಷಾ ಕೇಂದ್ರದ 6 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು. ನಂತರ ದೇಶದ ಬೇರೆ ಬೇರೆ ಕಡೆ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಪರೀಕ್ಷೆ ರದ್ದುಪಡಿಸಿ ಮರುಪರೀಕ್ಷೆ ನಡೆಸಲು ಕೋರಿ ಅನೇಕ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಸುಪ್ರೀಂಕೋರ್ಟ್‌ 1563 ವಿದ್ಯಾರ್ಥಿಗಳಿಗೆ ನೀಡಿದ್ದ ಗ್ರೇಸ್‌ ಅಂಕ ರದ್ದುಪಡಿಸಿ, ಅವರಿಗೆ ಮರುಪರೀಕ್ಷೆ ನಡೆಸಲು ಸೂಚಿಸಿತ್ತು. ಅದರಂತೆ ಮರುಪರೀಕ್ಷೆ ನಡೆಸಿದಾಗ ಹರ್ಯಾಣದ ಈ ಕೇಂದ್ರದಲ್ಲಿ 494 ಮಂದಿ ಪರೀಕ್ಷೆ ಬರೆದಿದ್ದರು.

ಐದು ದಿನದಲ್ಲಿ ಕೆಆರ್‌ಎಸ್‌ಗೆ 15 ಟಿಎಂಸಿ ನೀರು, ಆ.8ರಂದು ಸಿಎಂ ಬಾಗಿನ ಸಂಭವ

ಈಗ ಪ್ರಕಟವಾದ ಕೇಂದ್ರವಾರು ಫಲಿತಾಂಶದಲ್ಲಿ ಈ ಕೇಂದ್ರದ ಒಬ್ಬ ಅಭ್ಯರ್ಥಿ ಮಾತ್ರ ಅತ್ಯಧಿಕ 682 ಅಂಕ ಪಡೆದಿದ್ದಾರೆ. ಕೇವಲ 13 ಮಂದಿ 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಹೀಗಾಗಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ಹೇಳಲಾಗುತ್ತಿದೆ. ಎನ್‌ಟಿಎ ಶನಿವಾರ ಪ್ರಕಟಿಸಿದ ನಗರವಾರು ಹಾಗೂ ಕೇಂದ್ರವಾರು ಫಲಿತಾಂಶದ ಆಧಾರದಲ್ಲಿ ಸುಪ್ರಿಂಕೋರ್ಟ್‌ನಲ್ಲಿ ಜು.22ರಂದು ಮುಂದಿನ ವಿಚಾರಣೆ ನಡೆಯಲಿದೆ.

ಮೇ 5ರಂದು ನೀಟ್‌-ಯುಜಿ ಪರೀಕ್ಷೆ 571 ನಗರಗಳ, 4750 ಕೇಂದ್ರಗಳಲ್ಲಿ ನಡೆದಿತ್ತು. 14 ವಿದೇಶಿ ಕೇಂದ್ರಗಳಲ್ಲೂ ನಡೆದಿತ್ತು. 24 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರ ಪತ್ರಿಕೆ ತಿದ್ದಿರುವುದು, ತಪ್ಪಾಗಿ ಗ್ರೇಸ್‌ ಅಂಕ ನೀಡಿರುವುದೂ ಸೇರಿದಂತೆ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪ ಕೇಳಿಬಂದಿತ್ತು.

click me!